ಉಳ್ಳಾಲ: ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯವು ಜೀವ ವೈದ್ಯಕೀಯ ವಿಜ್ಞಾನ ಮತ್ತು ಮಾಧ್ಯಮ ಹಾಗೂ ಸಂವಹನ ವಿಷಯಗಳಲ್ಲಿ ನಾಲ್ಕು ವರ್ಷಗಳ ಹೊಸ ಬ್ಯಾಚುಲರ್ ಕೋರ್ಸ್ ಪ್ರಾರಂಭಿಸಲು ನಿರ್ಧರಿಸಿದೆ. ಈ ಹೊಸ ಕೋರ್ಸ್ ವಿದ್ಯಾರ್ಥಿಗಳು ಮತ್ತು ಉದ್ಯೋಗ ಆಧಾರಿತ ಮತ್ತು 2020ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ರೂಪಿಸಲಾದ ಶಿಕ್ಷಣದ ತತ್ವಗಳನ್ನು ಒಳಗೊಂಡಿದೆ ಎಂದು ಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಾಲ್ಕು ವರ್ಷಗಳ ಬಿ.ಎಸ್ಸಿ (ಆನರ್ಸ್) ಮತ್ತು ಬಿ.ಎ (ಆನರ್ಸ್) ಕೋರ್ಸ್‌ಗಳು ಅಂತರ ರಾಷ್ಟ್ರೀಯ ಕೋರ್ಸ್‌ಗಳಿಗೆ ಅನುಗುಣವಾಗಿದ್ದು, ಹೆಚ್ಚು ಜಾಗತಿಕ ಮನ್ನಣೆ ಹೊಂದಿವೆ. ಈ ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರವೇಶ ಮತ್ತು ನಿರ್ಗಮನದ ಆಯ್ಕೆಗಳು ಸಿಗಲಿದ್ದು, ಶಿಕ್ಷಣಕ್ಕೆ ಹೆಚ್ಚಿನ ಗೌರವ ಮತ್ತು ಮನ್ನಣೆ ಗಳಿಸಬಹುದು. ಹೆಚ್ಚುವರಿ ವರ್ಷದ ತರಬೇತಿಯು ಇಂಟರ್ನ್‌ಷಿಪ್‌ನೊಂದಿಗೆ ಸಂಶೋಧನೆ ಮತ್ತು ಉದ್ಯೋಗ ಕೌಶಲಗಳ ಅಭಿವೃದ್ಧಿಗೆ ಒತ್ತು ನೀಡುತ್ತದೆ. ಈ ಕೋರ್ಸ್‌ಗಳು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸೂಚಿಸಿರುವಂತೆ ಪಾರ್ಶ್ವ ಪ್ರವೇಶ ಮತ್ತು ನಿರ್ಗಮನ ಆಯ್ಕೆಗಳನ್ನು ಹೊಂದಿರುತ್ತವೆ. ಎರಡೂ ಕೋರ್ಸ್‌ಗಳು ಆಯ್ಕೆ ಆಧಾರಿತ ಅಂಕ ಪದ್ಧತಿ ಅನ್ನು ಆಧರಿಸಿದ್ದು, ಇದು ವಿದ್ಯಾರ್ಥಿಗಳಿಗೆ ಆಯ್ದ ವಿಷಯಗಳ ಮೂಲಕ ಅವರ ಆಸಕ್ತಿಗಳನ್ನು ಮುಂದುವರಿಸಲು ಸಹಕರಿಸುತ್ತದೆ ಎಂದು ಡಾ.ಸತೀಶ್ ಕುಮಾರ್ ಮಾಹಿತಿ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.