ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ಬಂದರ್‌ಗೆ ಪನಾಮ ಹಡಗು

Published 1 ಜುಲೈ 2023, 7:40 IST
Last Updated 1 ಜುಲೈ 2023, 7:40 IST
ಅಕ್ಷರ ಗಾತ್ರ

ಮಂಗಳೂರು: ಪನಾಮದಿಂದ ಎಂಎಸ್‌ಸಿ ಮಾಕೊಟೊ–2 ಹಡಗು ನವಮಂಗಳೂರು ಬಂದರಿಗೆ ಶುಕ್ರವಾರ ಬಂದಿದ್ದು ಈ ವರೆಗಿನ ಗರಿಷ್ಠ ಪ್ರಮಾಣದ ಒಟ್ಟು 2,689 ಟಿಇಯು ಕಂಟೇನರ್‌ಗಳನ್ನು ಒಳಗೊಂಡಿತ್ತು ಎಂದು ನವಮಂಗಳೂರು ಬಂದರು ನಿಗಮದ ಟ್ರಾಫಿಕ್ ವ್ಯವಸ್ಥಾಪಕರು ತಿಳಿಸಿದ್ದಾರೆ. 

ಬಂದರಿನ 14ನೇ ಬರ್ತ್‌ನಲ್ಲಿ ಯಾಂತ್ರೀಕೃತ ಚಟುವಟಿಕೆ ಆರಂಭಗೊಂಡಿದ್ದು ಜೆಎಸ್‌ಡಬ್ಲ್ಯುನ ಮಂಗಳೂರು ಕಂಟೇನರ್ ಟರ್ಮಿನಲ್‌ ಜೊತೆಗೂಡಿ ಪಿಪಿಪಿ ಮಾದರಿಯಲ್ಲಿ ಇದನ್ನು ನಿರ್ವಹಿಸಲಾಗುತ್ತಿದೆ. ಇದರೊಂದಿಗೆ ವಲಯ ಮಟ್ಟದಲ್ಲಿ ಕಂಟೇನರ್‌ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿರುವ ಬಂದರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘2689 ಟಿಇಯು ಕಂಟೇನರ್‌ಗಳನ್ನು ನಿರ್ವಹಿಸುವುದರ ಮೂಲಕ ಬಂದರು ಮೈಲುಗಲ್ಲೊಂದನ್ನು ದಾಟಿದೆ. ಗ್ರಾಹಕರಿಗೆ ವಿಶ್ವ ದರ್ಜೆಯ ಸೇವೆಯನ್ನು ನೀಡುತ್ತಿರುವುದಕ್ಕೆ ಇದೊಂದು ನಿದರ್ಶನ’ ಎಂದು ನಿಗಮದ ಅಧ್ಯಕ್ಷ ಎ.ವಿ.ರಮಣ ಅಭಿಪ್ರಾಯಪಟ್ಟಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT