ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕ್ಕೆ ಸುಬ್ರಹ್ಮಣ್ಯ: ಕುಮಾರಧಾರಾದಲ್ಲಿ ಭಕ್ತರ ದಂಡು

ದೇವರ ನೌಕಾವಿಹಾರ; ಅವಭೃತೋತ್ಸವ
Last Updated 10 ಡಿಸೆಂಬರ್ 2021, 16:35 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ಮಹೋತ್ಸವದ ಅಂಗವಾಗಿ ಶುಕ್ರವಾರ ದೇವರ ನೌಕಾವಿಹಾರ ಹಾಗೂ ಅವಭೃತೋತ್ಸವ ನಡೆಯಿತು.

ದೇವಳದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ ಅವರು ಧಾರ್ಮಿಕ ವಿಧಿ ನೆರವೇರಿಸಿದರು.

ಕುಕ್ಕೆ ದೇವಳದಿಂದ ಬಂಡಿ ರಥದಲ್ಲಿ ದೇವರ ಉತ್ಸವ ಮೂರ್ತಿಯ ಸವಾರಿ ಸಾಗಿತು. ಕುಮಾರಾಧಾರ ನದಿಯಲ್ಲಿ ನೌಕಾವಿಹಾರ ನೇರವೇರಿಸಿದ ಬಳಿಕ ಅವಭೃತೋತ್ಸವ ನಡೆಯಿತು.

ಬಳಿಕ ಅವಭೃತ ಕಟ್ಟೆಯಲ್ಲಿ ಕಟ್ಟೆಪೂಜೆ ನಡೆದ ನಂತರ ದೇವಳದವರೆಗೆ ವ್ಯಾಪಾರಸ್ಥರು ಹಾಗೂ ಮನೆಯವರು ಫಲಪುಷ್ಪ ಆರತಿ ಬೆಳಗಿ ಸೇವೆ ಸಲ್ಲಿಸಿದರು.

ಕುಮಾರಧಾರಾ ದ್ವಾರದ ಬಳಿ, ವಲ್ಲೀಶ ಸಭಾ ಭವನದ ಎದುರು, ವನದುರ್ಗ ದೇವಸ್ಥಾನ, ಬಿಲದ್ವಾರ, ಕಾಶಿಕಟ್ಟೆ, ಟ್ಯಾಕ್ಸಿ ಸ್ಟಾಂಡ್ ಕಟ್ಟೆ, ರಕ್ತೇಶ್ವರಿ ಗುಡಿ, ರಥಬೀದಿ, ದೇವಸ್ಥಾನ ಸ್ಥಳಗಳಲ್ಲಿ ಕಟ್ಟೆ ಪೂಜೆ
ನಡೆಯಿತು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‌ರಾಂ ಸುಳ್ಳಿ, ಕಾರ್ಯನಿರ್ವ ಹಣಾಧಿಕಾರಿ ಡಾ.ನಿಂಗಯ್ಯ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಲೋಕೇಶ್, ಪಿಜಿಎಸ್ಎನ್ ಪ್ರಸಾದ್, ಮನೋಹರ ರೈ, ಶ್ರೀವತ್ಸಾ, ಶೋಭಾ ಗಿರಿಧರ್, ವನಜಾ ವಿ.ಭಟ್, ಅಧಿಕಾರಿಗಳು, ಸಿಬ್ಬಂದಿ, ಭಕ್ತರು ಇದ್ದರು.

ಕ್ಷೇತ್ರದ ಆನೆ ಯಶಸ್ವಿನಿ ಕುಮಾರಧಾರಾದಲ್ಲಿ ಸಂಭ್ರಮಿಸಿತು. ಡಿ.15 ರಂದು ಕೊಪ್ಪರಿಗೆ ಇಳಿಯುವುದು, ರಾತ್ರಿ ನೀರು ಬಂಡಿ ಉತ್ಸವ, ದೈವಗಳ ನಡಾವಳಿ ಜರುಗಲಿದೆ. 2022 ರ ಜನವರಿ 1 ರಿಂದ 3ರವರೆಗೆ ಕಿರುಷಷ್ಠಿ ಮಹೋತ್ಸವ ಜರುಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT