ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿವಾಸಿ ಭಾರತೀಯರ ಸ್ಪಂದನೆಗೆ ಬದ್ಧ: ಕರ್ನಾಟಕ ಎನ್‌ಆರ್‌ಐ ಫೋರಂ-ಯುಎಇ

Last Updated 26 ಏಪ್ರಿಲ್ 2020, 16:06 IST
ಅಕ್ಷರ ಗಾತ್ರ

ಮಂಗಳೂರು: ಲಾಕ್‌ಡೌನ್‌ನ ಸಂದಿಗ್ಧ ಪರಿಸ್ಥಿತಿಯಲ್ಲಿ ದುಬೈ ಅನಿವಾಸಿ ಕನ್ನಡಿಗರ ಸೇವೆಯಲ್ಲಿ ಕರ್ನಾಟಕ ಎನ್‍ಆರ್‍ಐ ಫೋರಂ–ಯುಎಇ ಸಕ್ರೀಯವಾಗಿದ್ದು, ಯುಎಇ ರಾಷ್ಟ್ರದ ಕಾಯ್ದೆಗಳನ್ನು ಪಾಲಿಸುತ್ತ, ಇಲ್ಲಿ ನೆಲೆಯಾದ ಕರ್ನಾಟಕದ ಜನತೆಯ ಆರೋಗ್ಯ, ಆಹಾರ, ವೀಸಾ ಇನ್ನಿತರ ಅತ್ಯವಶ್ಯಕ ಸೇವೆಯಲ್ಲಿ ಶ್ರಮಿಸುತ್ತಿದೆ.

ಕೇಂದ್ರ ಮತ್ತು ಕರ್ನಾಟಕ ರಾಜ್ಯ ಸರ್ಕಾರ ನಮ್ಮನ್ನು ಪ್ರೋತ್ಸಾಹಿಸಿದರೆ ಅನಿವಾಸಿ ಭಾರತೀಯ ದುಬೈ ವಾಸಿಗಳನ್ನು ಕರುನಾಡಿಗೆ ಕಳುಹಿಸಿ ಕೊಡುವಲ್ಲಿ ಅನುಕೂಲಕರವಾಗಲ್ಲದು ಎಂದು ಉಡುಪಿ ಜಿಲ್ಲೆಯ ಕುಂದಾಪುರ ಬಾರಕೂರು ವಕ್ವಾಡಿಯ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯುಎಇ ಅಧ್ಯಕ್ಷ ಪ್ರವೀಣ್‌ಕುಮಾರ್ ಶೆಟ್ಟಿ ವಕ್ವಾಡಿ ತಿಳಿಸಿದ್ದಾರೆ.

ಅಗತ್ಯ ಸೇವೆಗಾಗಿ ದುಬೈನಲ್ಲಿ ದಯಾ ಕಿರೋಡಿಯನ್ (0507855649), ರೋನಾಲ್ಡ್ ಮಾರ್ಟಿಸ್ (0504307973), ಹರೀಶ್ ಶೇರಿಗಾರ್ (0506253143), ಆಶ್ರಫ್ ಕೆ.ಎಂ. (0505379817), ಯೂಸುಫ್ ಬೆರ್ಮವೆರ್ (0504667837), ಈದಾಯತ್ತ್ ಅಡ್ಡೂರು (0551118555), ನವೀದ್ ಮಾಗುಂಡಿ (0503728595), ಸುನೀಲ್ ರಾಜ್ (0569831111), ಶಾರ್ಜಾದಲ್ಲಿ ಚಂದ್ರು ಲಿಂಗದಳ್ಳಿ (0506883276), ಇಮ್ರಾನ್ ಖಾನ್ (0529214783), ಸಯ್ಯದ್ ಅಫ್ಜಲ್ ಎಸ್.ಎಂ (0509485368), ಅಜ್ಮಾನ್‌ನಲ್ಲಿ ಯಶ್ ಕರ್ಕೇರ (0561195007), ನೋವೆಲ್ ಅಲ್ಮೇಡಾ (0555878692), ಅಬುಧಾಬಿಯಲ್ಲಿ ಸೀರಾಜ್ ಪರ್ಲಡ್ಕ (0505786560), ಜೋನ್ಸಾನ್ ಮಾರ್ಟಿಸ್ (0567557672), ರಾಸ್‍ಆಲ್ ಖೈಮಾದಲ್ಲಿ ಅಲ್ತಾಫ್ ಹೌಸೈನ್ (0558694287) ಸೇವೆಯಲ್ಲಿದ್ದು, ಕನ್ನಡಿಗರು ತಮ್ಮ ಅಗತ್ಯಗಳಿಗಾಗಿ ಮಾತ್ರ ಇವರನ್ನು ಅಥವಾ ಇ-ಮೇಲ್‌–kannadigashelpline@gmail.com (ಪ್ರವೀಣ್ ಶೆಟ್ಟಿ) ಮೂಲಕ ಸಂಪರ್ಕಿಸುವಂತೆ ಈ ಮೂಲಕ ಕರ್ನಾಟಕ ಎನ್‌ಆರ್‌ಐ ಫೋರಂ-ಯುಎಇ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT