ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಯೂರು ಕ್ಷೇತ್ರದಲ್ಲಿ ದತ್ತ ಜಯಂತಿ ಮಹೋತ್ಸವಕ್ಕೆ ಗುರುದೇವಾನಂದ ಸ್ವಾಮೀಜಿ ಚಾಲನೆ

Last Updated 2 ಡಿಸೆಂಬರ್ 2022, 6:39 IST
ಅಕ್ಷರ ಗಾತ್ರ

ವಿಟ್ಲ: ಗುರುಪರಂಪರೆಯನ್ನು ಸದಾ ನಾವು ಗೌರವಿಸಬೇಕಾಗಿದೆ. ಗುರುವಿನಿಂದ ದೇವರ ಅನುಗ್ರಹ ಸಾಧ್ಯ. ಇದೊಂದು ವಿಶೇಷ ಸಂಭ್ರಮದ ದಿನವಿದು. ಅಧ್ಯಾತ್ಮದೆಡೆಗೆ ಸಾಗಿದಾಗ ಜೀವನ ಆನಂದಮಯವಾಗಿರುತ್ತದೆ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಡಿ.1ರಿಂದ ಡಿ.7ರ ತನಕ ಒಡಿಯೂರು ಸಂಸ್ಥಾನದಲ್ಲಿ ನಡೆಯ ಲಿರುವ ದತ್ತ ಜಯಂತಿ ಮಹೋತ್ಸವ- ದತ್ತ ಮಹಾಯಾಗ ಸಪ್ತಾಹದ ಪ್ರಯುಕ್ತ ನಡೆಯಲಿರುವ ಹರಿಕಥಾ ಸತ್ಸಂಗವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಮನುಷ್ಯ ಉತ್ಸವ ಪ್ರಿಯ, ಭಗವಂತ ಏನನ್ನು ಬಯಸುವುದಿಲ್ಲ. ಮಾಧವನಲ್ಲಿ ಭಕ್ತಿ ಇರಬೇಕು, ಮಾನವನಲ್ಲಿ ಪ್ರೀತಿ ಇರಬೇಕು ಆಗ ಬದುಕು ಹಸನಾಗಲು ಸಾಧ್ಯ. ಮನುಷ್ಯನಿಗೆ ಎಲ್ಲಿ ತೃಪ್ತಿ ಸಿಗುತ್ತದೋ ಅಲ್ಲಿ ಭಗವಂತನಿದ್ದಾನೆ. ಹಿರಿಯರ ಪ್ರೇರಣೆ ಕಿರಿಯರಿಗೆ ದಾರಿ ದೀವಿಗೆ. ಪ್ರತಿಯೊಬ್ಬರ ಮಾತಿನೊಳಗಿನ ಮಾರ್ಮಿಕವನ್ನು ತಿಳಿಯುವ ಮನಸ್ಸು ನಮ್ಮದಾಗಬೇಕು ಎಂದರು.

ಸಾಧ್ವಿ ಮಾತಾನಂದಮಯಿ, ಉದ್ಯಮಿ ವಾಮಯ್ಯ ಬಿ. ಶೆಟ್ಟಿ, ಉಷಾ ಕುಮಾರ್ ಶೆಟ್ಟಿ, ಹರಿದಾಸ ಶಂ.ನಾ. ಅಡಿಗ ಕುಂಬ್ಳೆ, ತುಳು ಅಕಾಡೆಮಿಯ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ, ಮಲಾರು ಜಯರಾಮ ರೈ, ಒಡಿಯೂರು ಶ್ರೀವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಎ.ಸುರೇಶ್ ರೈ, ಸರ್ವಾಣಿ ಪಿ. ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT