ಶುಕ್ರವಾರ, ಫೆಬ್ರವರಿ 28, 2020
19 °C
ಒಡಿಯೂರು ಕ್ಷೇತ್ರದಲ್ಲಿ ತುಳು ಸಾಹಿತ್ಯ ಸಮ್ಮೇಳನದಲ್ಲಿ ಒಡಿಯೂರು ಶ್ರೀ

ಮನೆಗಳಲ್ಲಿ ತುಳು ಮಾತೆಯ ಉತ್ಸವ ನಡೆಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಟ್ಲ: ‘ಮನೆ ಮನೆಗಳಲ್ಲಿ ತುಳು ಭಾಷೆ ಮಾತನಾಡುವ ಮೂಲಕ ತುಳು ಮಾತೆಯ ಉತ್ಸವ ನಡೆಯಬೇಕು. ತುಳುವರಲ್ಲಿ ಹೃದಯ ಸಿರಿವಂತಿಕೆಯಿದೆ’ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಒಡಿಯೂರು  ಗುರುದೇವದತ್ತ ಸಂಸ್ಥಾನದ ವತಿಯಿಂದ ನಡೆಯುತ್ತಿರುವ ಒಡಿಯೂರು ರಥೋತ್ಸವ- ತುಳುನಾಡ ಜಾತ್ರೆ ಪ್ರಯುಕ್ತ ಸೋಮವಾರ ನಡೆದ ‘20ನೇ ತುಳು ಸಾಹಿತ್ಯ ಸಮ್ಮೇಳನೊ’ ವನ್ನು ಉದ್ಘಾಟಿಸಿ ಅವರು ಅಶೀರ್ವಚನ ನೀಡಿದರು.

‘ವಿಶ್ವವಿದ್ಯಾಲಯಗಳಲ್ಲಿ ತುಳು ಭಾಷೆಗೆ ಮಾನ್ಯತೆ ತುಳು ಭವಿಷ್ಯದ ದೃಷ್ಟಿಯಲ್ಲಿ ಒಳ್ಳೆಯ ಕಾರ್ಯವಾಗಿದೆ. ತುಳು ಕಾರ್ಯಕ್ಕೆ ಇಳಿದಾಗ ಮಾತ್ರ ನಮ್ಮ ತುಳು ಭಾಷೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಲು ಸಾಧ್ಯ’ ಎಂದರು.

ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಎ ಸುಬ್ಬಣ್ಣ ರೈ ಮಾತನಾಡಿ, ‘ರಾಜ್ಯದಲ್ಲಿ ಕನ್ನಡ ಬಳಕೆಯ ಮಧ್ಯೆ ತುಳುವನ್ನು ಸುಭದ್ರವಾಗಿಸುವುದು ಸವಾಲಿನ ಕಾರ್ಯ’ ಎಂದರು. ಮುಖ್ಯ ಅತಿಥಿಯಾಗಿದ್ದ ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಡಾ. ಪಿ.ಎಸ್ ಯಡಪಡಿತ್ತಾಯ ಮಾತನಾಡಿ, ‘ತುಳು ಭಾಷೆ ಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಪ್ರತಿಯೊಬ್ಬ ತುಳುವರು ಪ್ರಯತ್ನಿಸಬೇಕು’ ಎಂದರು

ಮಲಾರ್ ಜಯರಾಮ ರೈ ಅವರ ಸಂಪಾದಕತ್ವದಲ್ಲಿ ರಚಿಸಲಾದ ‘ಅವಧೂತ ಪಜ್ಜೆಲು’ ಪುಸ್ತಕ ಬಿಡುಗಡೆಗೊಳಿಸಲಾಯಿತು. ಬೆಳಿಗ್ಗೆ ಸಂಸ್ಥಾನದಿಂದ ಸಭಾ ವೇದಿಕೆ ವರೆಗೆ ಮೆರವಣಿಗೆ ನಡೆಯಿತು. ಕಾರ್ಕಳ ಹಿರ್ಗಾನ ಶ್ರೀದತ್ತ ತುಳು ಜಾನಪದ ಮತ್ತು ಇತಿಹಾಸ ಅಧ್ಯಯನ ಕೇಂದ್ರದ ವತಿಯಿಂದ ತುಳುನಾಡಿನ ಹಳೆಯ ಪುಸ್ತಕಗಳ, ವಸ್ತುಗಳ ನಾಣ್ಯ ಪ್ರದರ್ಶನ ಆಯೋಜಿಸಲಾಗಿತ್ತು.

ಗೋಷ್ಠಿಗಳು: ಖುಷಿ-ಕೃಷಿ-ಪರಪೋಕುದ ಸಂಸ್ಕೃತಿ ಗೋಷ್ಠಿ ನಡೆಯಿತು.  ಡಾ.ಗಣನಾಥ ಶೆಟ್ಟಿ ಎಕ್ಕಾರ್ ಅವರು ಋಷಿ ಸಂಸ್ಕೃತಿ, ಡಾ. ಪ್ರಭಾಕರ ಶಿಶಿಲ ಅವರು ಕೃಷಿ ಸಂಸ್ಕೃತಿ,  ಪ್ರೊ. ಡಿ ಯದುಪತಿ ಗೌಡ ಅವರು ಪರಪೋಕುದ ಸಂಸ್ಕೃತಿ ಬಗ್ಗೆ ಗೋಷ್ಠಿಗಳನ್ನು ನಡೆಸಿಕೊಟ್ಟರು. ಕವಿ-ಕಾವ್ಯೊ-ಪದೋ-ಚಿತ್ರೊ-ನಲಿಕೆ ನಡೆಯಿತು. ಮಲರ್ ಜಯರಾಮ ರೈ, ವಿಶ್ವನಾಥ ಕುಲಾಲ್, ಹರೀಶ್ ಶೆಟ್ಟಿ ಸೂಡ, ಪೂವಪ್ಪ ನೇರಳಕಟ್ಟೆ, ರಾಜಶ್ರೀ ಟಿ. ರೈ ಪೆರ್ಲ, ಆಶಾ ದಿಲೀಪ್ ಸುಳ್ಯಮೆ, ಗಣೇಶ್ ಸೋಮಯಾಜಿ, ಶರತ್ ಹೊಳ್ಳ, ರವಿರಾಜ ಶೆಟ್ಟಿ ಒಡಿಯೂರು ಭಾಗವಹಿಸಿದ್ದರು.

ಸಾಧ್ವಿಮಾತಾನಂದ ಮಯಿ ಸಾನ್ನಿಧ್ಯವಹಿಸಿದ್ದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಸಾಲ್ಯಾನ್ , ಒಡಿಯೂರು ಗ್ರಾಮ ವಿಕಾಸ ಯೋಜನೆಯ ವಿಸ್ತರಣಾಧಿಕಾರಿ ಸದಾಶಿವ ಅಳಿಕೆ, ರೇಣುಕಾ ಎಸ್. ರೈ, ತುಳು ಸಾಹಿತ್ಯ ಸಮ್ಮೇಳನ ಸಮಿತಿ ಸಂಚಾಲಕ ಡಾ. ವಸಂತಕುಮಾರ್ ಪೆರ್ಲ, ಜಯಪ್ರಕಾಶ್ , ಯಶವಂತ ವಿಟ್ಲ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು