ಬುಧವಾರ, ಆಗಸ್ಟ್ 17, 2022
23 °C

ನದಿ ನೀರಲ್ಲಿ ಮುಳುಗಿದ ಪಿಕಪ್ ವಾಹನ: ಚಾಲಕ‌ ಸೇರಿ ಇಬ್ಬರ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಉಜಿರೆ: ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಬಿದ್ರೆ ಗ್ರಾಮದ ಉರ್ಪೆಲ್ ಗುಡ್ಡೆ ಎಂಬಲ್ಲಿ ಮಂಗಳವಾರ ಸಂಜೆ ಮೃತ್ಯುಂಜಯ ನದಿಯಲ್ಲಿ ಒಮ್ಮೆಲೆ ನೆರೆನೀರು ಉಕ್ಕಿಬಂದು ಪಿಕಪ್ ವಾಹನ ನೀರಿನಲ್ಲಿ ಮುಳುಗಿತ್ತು.

ಅಳದಂಗಡಿಯ ಸದಾನಂದ ಅವರ ಪಿಕಪ್ ವಾಹನದಲ್ಲಿ ದಯಾನಂದ ಅವರ ಮನೆಗೆ ಸೆಂಟ್ರಿಂಗ್ ಪರಿಕರಗಳನ್ನು ಕೊಟ್ಟು ಹಿಂದೆ ಬರುವಾಗ ಈ ಘಟನೆ ನಡೆದಿದೆ. ವಾಹನ ನದಿಗೆ ಇಳಿಯುತ್ತಿದ್ದಂತೆ, ಒಮ್ಮೆಲೆ ನೀರು ಉಕ್ಕಿ ಬಂತು.

ಪಿಕಪ್‌ನಲ್ಲಿದ್ದ ಚಾಲಕ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಸ್ಥಳೀಯರು ರಕ್ಷಿಸಿದರು. ವಾಹನಕ್ಕೆ ಹಗ್ಗದಿಂದ ಕಟ್ಟಿ ನೀರು ಪಾಲಾಗದಂತೆ ತಡೆದರು. ಬಳಿಕ ಸ್ಥಳೀಯರೆಲ್ಲಾ ಸೇರಿ ವಾಹನವನ್ನು ನದಿಯಿಂದ ಹೊರತೆಗೆಯುವಲ್ಲಿ ಯಶಸ್ವಿಯಾದರು.

ಕಕ್ಕಿಂಜೆಯ ವಿಕಾಯ ತಂಡ ಮತ್ತು ಮುಸ್ಲಿಮ್ ಯುವಕರ ತಂಡದ ಸದಸ್ಯರು ಪಿಕಪ್ ವಾಹನವನ್ನು ನದಿಯಿಂದ ಮೇಲೆತ್ತುವಲ್ಲಿ ಸಹಕರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು