ಗುರುವಾರ , ಅಕ್ಟೋಬರ್ 1, 2020
21 °C

ಕಡಬದಲ್ಲಿ ಪೊಲೀಸ್‌ ದಾಳಿ: 2 ಪಿಸ್ತೂಲ್, ಸ್ಪೋಟಕ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಡಬ(ಉಪ್ಪಿನಂಗಡಿ): ಕಡಬ ತಾಲ್ಲೂಕು ಪಾಲೋಳಿ ಜನಾರ್ದನ ಗೌಡ ಎಂಬವರ ಮನೆಗೆ ದಾಳಿ ನಡೆಸಿದ ಪೊಲೀಸರು ಪರವಾನಗಿ ಇಲ್ಲದ 2 ಪಿಸ್ತೂಲ್ ಮತ್ತು ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

ಕಡಬ ಸಬ್ ಇನ್‌ಸ್ಪೆಕ್ಟರ್ ರುಕ್ಮ ನಾಯ್ಕ್ ನೇತೃತ್ವದ ಪೊಲೀಸ್ ತಂಡವು ದಾಳಿ ನಡೆಸಿದ್ದು, ಮನೆಯಲ್ಲಿದ್ದ 2 ನಕಲಿ ಪಿಸ್ತೂಲ್ ಮತ್ತು 2 ಖಾಲಿ ತೋಟೆ, ರಂಜಕ, ಪೊಟ್ಯಾಶಿಯಂ, ಕೇಪು ಮೊದಲಾದ ಸ್ಪೋಟಕ ವಸ್ತಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಎ.ಎಸ್.ಐ. ಚಿದಾನಂದ ರೈ, ಸಿಬ್ಬಂದಿ ಸ್ಕರಿಯ, ಭವಿತ್ ರೈ, ಶ್ರೀಶೈಲ, ಮಹೇಶ್, ಜೀಪು ಚಾಲಕ ಕನಕರಾಜ್ ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು