ಮಂಗಳೂರು:ಈ ತಿಂಗಳಿನಿಮದ ಆರಂಭವಾಗಿ ಕೆಲವು ತಿಂಗಳು ವಿವಿಧ ಹಬ್ಬಗಳು ಬರಲಿದ್ದು, ಆ ಪ್ರಯುಕ್ತ ನಗರದಲ್ಲಿ ಹಲವು ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಮೆರವಣಿಗೆಗಳು ನಡೆಯಲಿವೆ. ಸಾರ್ವಜನಿಕವಾಗಿ ಕಾರ್ಯಕ್ರಮ ಆಯೋಜಿಸುವವರು ಶಾಂತಿ, ಸುರಕ್ಷತೆ ಮತ್ತು ಕಾನೂನು ಪಾಲನೆಯ ದೃಷ್ಟಿಯಿಂದ ಕೆಲವು ಷರತ್ತುಗಳನ್ನು ಪಾಲಿಸುವಂತೆ ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸೂಚಿಸಿದ್ದಾರೆ.

ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಯಾವುದೇ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಲು ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ವಿಧಿಸಲಾಗುವ ಷರತ್ತುಗಳನ್ನು ಆಯೋಜಕರು ಪಾಲಿಸಬೇಕು. ಈ ಸಲುವಾಗಿ ತಮ್ಮ ಪ್ರತಿನಿಧಿಗಳ ಹೆಸರು ಮತ್ತು ಸಂಪರ್ಕ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ವಿವರ ಸಲ್ಲಿಸದಿದ್ದರೆ ಅನುಮತಿ ನೀಡುವುದಿಲ್ಲ. ಸಂಚಾರ, ಸಮಯ ಪಾಲನೆ ಮತ್ತು ಧ್ವನಿ ನಿಯಂತ್ರಣ ಸಲುವಾಗಿ ರೂಪಿಸಿರುವ ಮಾರ್ಗಸೂಚಿಗಳನ್ನು ಚಾಚೂತಪ್ಪದೇ ಅನುಸರಿಸಬೇಕು. ಷರತ್ತುಗಳ ಉಲ್ಲಂಘನೆಯಾದರೆ ಅದರ ಹೊಣೆಯನ್ನು ಈ ನಿಯೋಜಿತ ಪ್ರತಿನಿಧಿಗಳೇ ವಹಿಸಬೇಕು ಎಂದು ಕಮಿಷನರ್ ಸೂಚಿಸಿದ್ದಾರೆ.

ಪೊಲೀಸ್ ಹಾಗೂ ಸಂಬಂಧಪಟ್ಟ ಇತರ ಇಲಾಖೆಗಳ ಲಿಖಿತ ಅನುಮತಿಯ ಹೊರತು ಯಾವುದೇ ಸಾರ್ವಜನಿಕ ಕಾರ್ಯಕ್ರಮ ಅಥವಾ ಮೆರವಣಿಗೆ ನಡೆಸಬಾರದು. ರಾತ್ರಿ 11.30ರ ನಂತರ ಮೆರವಣಿಗೆಗೆ ಅವಕಾಶವಿಲ್ಲ. ಆ ನಂತರವೂ ಮುಂದುವರಿಯುವ ಕಾರ್ಯಕ್ರಮವನ್ನು ಕಾನೂನುಬಾಹಿರ ಎಂದು ಪರಿಗಣಿಸಲಿದ್ದೇವೆ. ಖಾಸಗಿ ಸ್ಥಳಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವುದಕ್ಕೆ ಆ ಜಾಗದ ಮಾಲೀಕರ ನಿರಾಕ್ಷೇಪಣಾ ಪತ್ರ' ಹಾಜರುಪಡಿಸುವುದು ಕಡ್ಡಾಯ. ಅನುಮೋದನೆ ಪಡೆದ ಸ್ಥಳದಲ್ಲೇ ಕಾರ್ಯಕ್ರಮ ನಡೆಸಬೇಕು ಎಂದು ಅವರು ತಿಳಿಸಿದ್ದಾರೆ

ಈ ಷರತ್ತುಗಳ ಉಲ್ಲಂಘನೆ ಆದರೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 189 (ಕಾನೂನುಬಾಹಿರ ಕೂಟ) ಮತ್ತು 1963ರಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 92(1) (ಸಾರ್ವಜನಿಕ ಶಾಂತಿಯ ಉಲ್ಲಂಘನೆ) ಅಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಡಿಜೆ.ಗೆ ಇಲ್ಲ ಅವಕಾಶ: ಡಿ.ಜೆ, ಜೋರ ಸದ್ದು ಮಾಡುವ ಸ್ಪೀಕರ್ ಮೊದಲಾದ ಪರಿಕರಗಳ ಬಳಕೆಗೆ ನಿಷೇಧವಿದೆ. ಧ್ವನಿವರ್ಧಕ ಬಳಕೆಗೆ ಮುಂಚಿತ ಅನುಮತಿ ಪಡೆಯಬೇಕು. ರಾತ್ರಿ 10ಕ್ಕೆ ಅವುಗಳನ್ನು ಸ್ಥಗಿತಗೊಳಿಸಬೇಕು. ಶಬ್ದದ ಮಟ್ಟಗಳು ನಿಗದಿತ ಮಿತಿಯ ಒಳಗಿರಬೇಕು. ಶಬ್ದವು ವಾಣಿಜ್ಯ ಪ್ರದೇಶದಲ್ಲಿ 65 ಡೆಸಿಬಲ್, ವಾಸಸ್ಥಳಗಳಲ್ಲಿ 55 ಡೆಸಿಬಲ್, ನಿಶ್ಯಬ್ದ ವಲಯದಲ್ಲಿ 50 ಡೆಸಿಬಲ್ ಮಿತಿಯನ್ನು ಮೀರಬಾರದುಈ ಷರತ್ತು ಉಲ್ಲಂಘನೆ ಆದರೆ ಬಿಎನ್ಎಸ್ ಸೆಕ್ಷನ್ 270 ಮತ್ತು ಸೆಕ್ಷನ್ 223 (ಸಾರ್ವಜನಿಕ ಸಮಸ್ಯೆ ಮತ್ತು ಆದೇಶಕ್ಕೆ ಅವಿಧೇಯತೆ ತೋರುವುದು), 1986ರ ಪರಿಸರ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 15, 2000ದ ಶಬ್ದ ಮಾಲಿನ್ಯ ನಿಯಮಗಳು ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ ಸೆಕ್ಷನ್ 31 ಮತ್ತು 1884ರ ಸ್ಫೋಟಕಗಳ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಿಸಿಟಿವಿ ಕಡ್ಡಾಯ: ಆಯೋಜಕರು ಕಾರ್ಯಕ್ರಮದ ಸ್ಥಳದಲ್ಲಿ ದಿನದ 24 ಗಂಟೆಯೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು. ಸಿ.ಸಿ.ಟಿ.ವಿ ಕ್ಯಾಮರಾಗಳನ್ನು ಅಳವಡಿಸಬೇಕು. ಸತತ 30 ದಿನ ದೃಶ್ಯಾವಳಿ ಸಂಗ್ರಹಿಸಬೇಕು.

ಧರ್ಮ ವಿರೋಧಿ ಘೋಷಣೆ ಮತ್ತು ದ್ವೇಷ ಭಾಷಣ ನಿಷೇಧ: ಯಾವುದೆ ಘೋಷಣೆಗಳು, ಭಿತ್ತಿಪತ್ರಗಳು, ಪ್ರದರ್ಶನಗಳು ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟ್ಗಳಲ್ಲಿ ಯಾವುದೇ ಧರ್ಮದ ವಿರುದ್ಧದ ಅಥವಾ ದ್ವೇಷವನ್ನು ಉಂಟುಮಾಡುವ ಅಂಶಗಳು ಇರಬಾರದು. ಈ ಷರತ್ತು ಉಲ್ಲಂಘಿಸಿದರೆ ಬಿಎನ್ಎಸ್ ಸೆಕ್ಷನ್ 196 (ದ್ವೇಷಭಾವನೆ ಉಂಟುಮಾಡುವುದು), 299 (ಧಾರ್ಮಿಕ ನಂಬಿಕೆಗೆ ಅಪಮಾನ), 352/353 (ಸಾರ್ವಜನಿಕ ಕೇಡು) ಅಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಮಿಷನರ್ ತಿಳಿಸಿದ್ದಾರೆ.

ಅಗ್ನಿ ಶಾಮಕಗಳು, ಆಂಬುಲೆನ್ಸ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಹೊಂದಿರುವುದು ಕಡ್ಡಾಯ. ಬೆಂಕಿಯ ಮೂಲಗಳ ಬಳಿಯಲ್ಲಿ ಸುಲಭವಾಗಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡಬಾರದು. ವಿಷಕಾರಿ ಬಣ್ಣಗಳು, ನಿಷೇಧಿತ ರಾಸಾಯನಿಕ, ಏಕ ಬಳಕೆ ಪ್ಲಾಸ್ಟಿಕ್ ನಿಷೇಧವಿದೆ. ವಾಹನ ಮತ್ತು ಪಾದಚಾರಿಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು. ತುರ್ತು ಮಾರ್ಗಗಳಿಗೆ ತಡ ಉಂಟುಮಾಡಬಾರದು. ನಿಗದಿತ ಸ್ಥಳದಲ್ಲಿಯೇ ಪಾರ್ಕಿಂಗ್ ವ್ಯವಸ್ಥೆ ಇರಬೇಕು. ಕಾರ್ಯಕ್ರಮದ ಪೂರ್ಣ ವಿವರಗಳನ್ನು ಮುಂಚಿತವಾಗಿ ನೀಡಬೇಕು. ಅನುಮತಿ ಪಡೆಯುವಾಗ ನೀಡಿದ ಸಮಯವನ್ನು ಕಡ್ಡಾಯವಾಗಿ ಪಾಲಿಸಬೇಕು.

ಈ ತಿಂಗಳ 6ರಂದು ಮೊಹರಂ 16ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ, ಆ. 27ರಂದು ಗಣೇಶ ಚತುರ್ಥಿ, ಸೆ.16ರಂದು ಈದ್ ಮಿಲಾದ್ ಸೆ.22ರಿಂದ ಅ.2ರವರೆಗೆ ಶಾರದಾ ಮಹೋತ್ಸವ, ಅ.20ರಿಂದ 22ರವರೆಗೆ ದೀಪಾವಳಿ, ಡಿ 25ರಂದು ಕ್ರಿಸ್ಮಸ್ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸುವುದಕ್ಕೆ ಈ ನಿಯಮ ಪಾಲನೆ ಆಗಬೇಕು ಎಂದು ಅವರು ಸೂಚಿಸಿದ್ದಾರೆ.

Highlights - null

ಸಾರ್ವಜನಿಕ ಕಾರ್ಯಕ್ರಮ ಇತರ ಷರತ್ತುಗಳು

ಅನುಮತಿ ಪಡೆದ ಸಾಮರ್ಥ್ಯ ಮೀರದಂತೆ ಜನಸಮೂಹ ನಿಯಂತ್ರಿಸಲು ಸ್ವಯಂಸೇವಕರನ್ನು ನಿಯೋಜಿಸಿಕೊಳ್ಳಬೇಕು. ಪೆಂಡಾಲು ಕಾರ್ಯಕ್ರಮದಲ್ಲಿ ಬಳಸುವ ವಾಹನಗಳ ಎತ್ತರಗಳ ಕಾನೂನು ಅಥವಾ ಮೆಸ್ಕಾಂ ಮಾನದಂಡಗಳನ್ನು ಮೀರುವಂತಿರಬಾರದು. ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗೆ ಹಾನಿಯುಂಟುಮಾಡಬಾರದು. ಮಹಿಳೆಯರನ್ನು ಚುಡಾಯಿಸುವುದು ಹಿಂಬಾಲಿಸುವುದು ಲೈಂಗಿಕ ಕಿರುಕುಳದಂತಹ ಅಪರಾಧ ನಡೆಯದಂತೆ ನೋಡಿಕೊಳ್ಳಬೇಕು. ಬ್ಯಾನರ್ ಅಥವಾ ಫ್ಲೆಕ್ಸ್ಗಳನ್ನು ಸಂಬಂಧಿತ ಪ್ರಾಧಿಕಾರದ ಅನುಮತಿ ಇಲ್ಲದೆ ಹಾಕಬಾರದು. ಕಾರ್ಯಕ್ರಮ ಮುಗಿದ ತಕ್ಷಣ ಅವುಗಳನ್ನು ತೆರವುಗೊಳಿಸಬೇಕು. ಸಾರ್ವಜನಿಕ ಸ್ಥಳದಲ್ಲಿ ಶಸ್ತ್ರಾಸ್ತ್ರ ಹರಿತವಾದ ಆಯುಧಗಳು ಇತ್ಯಾದಿ ಅಪಾಯಕಾರಿ ಆಯುಧಗಳ ಪ್ರದರ್ಶನ ಮತ್ತು ಸಾಗಾಟಕ್ಕೆ ಅವಕಾಶ ಇಲ್ಲ. ಅನುಮತಿ ಪಡೆಯದೇ ಯಾವುದೇ ಡ್ರೋನ್ ಅಥವಾ ಮಾನವರಹಿತವಾಗಿ ಹಾರಾಡುವ ಯಂತ್ರ (ಯುಎವಿ) ಬಳಕೆ ನಿಷಿದ್ಧ. ಮೆರವಣಿಗೆ ಅಥವಾ ಪ್ರದರ್ಶನ ಮಾಡಲು ಮುಂಚಿತ ಅನುಮತಿ ಪಡೆಯುವುದು ಮತ್ತು ಪ್ರಾಣಿ ಹಕ್ಕುಗಳ ನಿಯಮ ಪಾಲನೆ ಕಡ್ಡಾಯ. ಆಯೋಜಕರು ಮತ್ತು ಸಾರ್ವಜನಿಕರು ಯಾವುದೇ ಸಂಶಯಾಸ್ಪದ ಚಟುವಟಿಕೆ ಸುಳ್ಳು ಮಾಹಿತಿ ಅಥವಾ ಗಲಭೆ ನಡೆದರೆ ಹತ್ತಿರದ ಪೊಲೀಸ್ ಠಾಣೆಗೆ ಅಥವಾ 112 ವರದಿ ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.