ಪುತ್ತೂರು: ‘ಶಾಸಕ ಅಶೋಕ್ ರೈ ಅವರು ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಮಹಿಳಾ ಅಧಿಕಾರಿಗಳ ವಿರುದ್ಧ ಅಧಿಕಾರದ ದರ್ಪ ತೋರಿಸುತ್ತಿದ್ದಾರೆ. ಈ ಧೋರಣೆ ಮುಂದುವರಿದರೆ ಶಾಸಕರ ಮನೆ ಮುಂದೆ ಮಹಿಳೆಯರನ್ನು ಸೇರಿಸಿ ಪ್ರತಿಭಟಿಸುತ್ತೇವೆ. ಶಾಸಕ ರಸ್ತೆಯಲ್ಲಿ ನಡೆಯಲಾಗದ ಸ್ಥಿತಿ ತರುತ್ತೇವೆ’ ಎಂದು ಬಿಜೆಪಿ ಮಹಿಳಾ ಮೋರ್ಚಾದ ಮುಖಂಡರು ಎಚ್ಚರಿಸಿದರು.

ಅಶೋಕ್ ರೈ ಅವರು ಮಹಿಳಾ ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಮಂಗಳವಾರ ಇಲ್ಲಿನ ಕಿಲ್ಲೆ ಮೈದಾನದ ಅಮರ್ ಜವಾನ್ ಜ್ಯೊತಿ ಸ್ಮಾರಕದ ಮುಂಭಾಗ ಪ್ರತಿಭಟನಾ ಸಭೆ ನಡೆಯಿತು.

ಮೋರ್ಚಾದ ರಾಜ್ಯ ಸಮಿತಿ ನಾಯಕಿ ಸುಲೋಚನಾ ಭಟ್ ಮಾತನಾಡಿ, ಅಭಿವೃದ್ಧಿ ಇಲ್ಲದೆ ಪುತ್ತೂರು 80ರ ದಶಕಕ್ಕೆ ಮರಳಿದೆ. ಶಾಸಕರ ಒಣ ಜಂಭ, ಗೂಂಡಾಗಿರಿ ಸಂಸ್ಕೃತಿ ಮಾತ್ರ ಕಾಣುತ್ತಿದ್ದು. ಇದಕ್ಕೆ ಮಹಿಳಾ ಅಧಿಕಾರಿಗಳು ಬಲಿಯಾಗುತ್ತಿದ್ದಾರೆ. ಕಾಲೇಜು ಪ್ರಾಂಶುಪಾಲರ ಅಮಾನತು, ಮಹಿಳಾ ವೈದ್ಯಾಧಿಕಾರಿಯ ವರ್ಗಾವಣೆ, ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯನ್ನು ಕಚೇರಿಗೆ ಕರೆದು ನಿಂದಿಸಿರುವುದು ಶಾಸಕರ ಮಹಿಳಾ ವಿರೋಧಿ ನೀತಿಗೆ ಸಾಕ್ಷಿಯಾಗಿದೆ. ಯಾವುದೇ ತಪ್ಪು ಮಾಡದ ಮಹಿಳಾ ಕಾಲೇಜು ಪ್ರಾಂಶುಪಾಲರನ್ನು ಅಮಾನತು ಮಾಡಿರುವುದು ತಪ್ಪು. ಅವರ ಅಮಾನತು ರದ್ದುಪಡಿಸುವವರೆಗೆ ಹೋರಾಟ ಮಾಡಲು ನಾವು ಸಿದ್ಧ ಎಂದರು.

ದ.ಕ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ರಾವ್ ಮಾತನಾಡಿ, ಮಹಿಳಾ ಅಧಿಕಾರಿಗಳು ಪುತ್ತೂರಿನಲ್ಲಿ ಇರಬಾರದು ಎಂಬ ರೀತಿಯಲ್ಲಿ ಶಾಸಕ ವರ್ತಿಸುತ್ತಿದ್ದಾರೆ. ಮಹಿಳೆಯರು ಮತ್ತು ದಲಿತರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ ಎಂದರು.

ನಾಯಕಿ ಕಸ್ತೂರಿ ಪಂಜ ಮಾತನಾಡಿ, ಶಾಸಕರನ್ನು ಜನ ಆರಿಸಿರುವುದು ಅಭಿವೃದ್ಧಿಗಾಗಿಯೇ ಹೊರತು ದಬ್ಬಾಳಿಕೆ ಮಾಡುವುದಕ್ಕಲ್ಲ. ಅಧ್ಯಕ್ಷರಾಗಿರುವ ಕಾಲೇಜಿನ ಅಭಿವೃದ್ಧಿ ಸಮಿತಿಯ ಸಭೆಯನ್ನು ಎಷ್ಟು ಬಾರಿ ಮಾಡಿದ್ದಾರೆ. ಕಾಲೇಜಿಗೆ ಎಷ್ಟು ಬಾರಿ ಅವರು ಭೇಟಿ ನೀಡಿದ್ದಾರೆ ಎಂದು ಪ್ರಶ್ನಿಸಿದರು.

ಸಂಜೀವ ಮಠಂದೂರು ಶಾಸಕರಾಗಿದ್ದಾಗ ಹಲವು ಅಭಿವೃದ್ಧಿ ಕಾಮಗಾರಿ ಆಗಿತ್ತು. ಈಗ ಅಭಿವೃದ್ಧಿ ಶೂನ್ಯವಾಗಿದೆ ಎಂದರು.

ಪ್ರಮುಖರಾದ ಸಂಜೀವ ಮಠಂದೂರು, ಮಲ್ಲಿಕಾ ಪ್ರಸಾದ್, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ.ಕಲ್ಲಿಮಾರ್, ನಗರಸಭೆಯ ನಿಕಟಪೂರ್ವ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಮುಖಂಡರಾದ ವಿದ್ಯಾ ಆರ್.ಗೌರಿ, ಯಶೋದಾ, ಆಶಾ ತಿಮ್ಮಪ್ಪ ಗೌಡ, ಗೌರಿ ಬನ್ನೂರು, ಲಿಖಿತಾ, ಸ್ವರ್ಣಲತಾ ಹೆಗ್ಡೆ, ಜಯಲಕ್ಷ್ಮಿ ಶಗ್ರಿತ್ತಾಯ ಭಾಗವಹಿಸಿದ್ದರು.

ಸಂಜೀವ ಮಠಂದೂರು ಶಾಸಕರಾಗಿದ್ದಾಗ ಪುತ್ತೂರಿನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ₹ 5.5 ಕೋಟಿ ಅನುದಾನ ನೀಡಿದ್ದಾರೆ. ಈಗಿನ ಶಾಸಕರ ಕೊಡುಗೆ ಏನೂ ಇಲ್ಲ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಹಿಂದೂ ಸಂಘಟನೆಗಳನ್ನು ಮಟ್ಟ ಹಾಕಲು ಕಸರತ್ತು ಮಾಡುತ್ತಿದೆ

ದಯಾನಂದ ಶೆಟ್ಟಿ ಉಜಿರೆಮಾರು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.