ಪುತ್ತೂರು: ಮಿನಿ ಜೆಟ್ ವಿಮಾನವೊಂದು ಭೂಮಿಗೆ ಸಮೀಪದಲ್ಲೇ ಪುತ್ತೂರಿನಲ್ಲಿ ಮಂಗಳವಾರ ಹಲವು ಸುತ್ತು ಹಾರಾಟ ನಡೆಸಿದ್ದು, ಸ್ಥಳೀಯರು ಆತಂಕಗೊಂಡಿದ್ದರು.

ಇದು ಸರ್ವೆ ಕಾರ್ಯ ಎಂದು ತಿಳಿಯುತ್ತಿದ್ದಂತೆಯೇ ಜನ ನಿಟ್ಟುಸಿರು ಬಿಟ್ಟರು.

ಪುತ್ತೂರಿನ ಮಹಾಲಿಂಗೇಶ್ವರ ದೇವಳ ಎದುರಿನ ಗದ್ದೆಯ ಮೇಲ್ಭಾಗದಲ್ಲಿ ವಿಮಾನ ಹಾರಾಡುತ್ತಿದ್ದ ದೃಶ್ಯವನ್ನು ಆರಂಭದಲ್ಲಿ ಕಂಡ ಜನರು ಗಾಬರಿಗೊಂಡರು. ವಿಮಾನ ಪದೇ ಪದೇ ನಗರದ ವಿವಿಧ ಭಾಗದಲ್ಲಿ ಸುಮಾರು 15 ಬಾರಿ ಹಾರಾಟ ನಡೆಸಿದೆ.

ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್ಐ) ಸಂಸ್ಥೆಯು ಸಮೀಕ್ಷಾ ಕಾರ್ಯಕ್ಕಾಗಿ ಈ ವಿಮಾನ ಹಾರಾಟ ನಡೆಸಿದೆ. ಗಣಿ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯು ಕೈಗಾರಿಕಾ ಅಭಿವೃದ್ಧಿ, ಮೂಲ ಸೌಕರ್ಯ ಯೋಜನೆಗಳು ಮತ್ತು ಪರಿಸರ ಸುಸ್ಥಿರತೆಗೆ ಅಗತ್ಯವಾದ ಮೂಲಭೂತ ಭೂವೈಜ್ಞಾನಿಕ ಮಾಹಿತಿ ಸಂಗ್ರಹ, ನಕ್ಷೆ ನಿರ್ಮಾಣ, ಖನಿಜ ಸಂಪನ್ಮೂಲ ಮೌಲ್ಯಮಾಪನ ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಭೂಗರ್ಭದ ರಚನೆ, ಖನಿಜ ಸಂಪತ್ತು ಮತ್ತು ಭೂವೈಜ್ಞಾನಿಕ ಲಕ್ಷಣಗಳ ಅಧ್ಯಯನಕ್ಕಾಗಿ ವಿಶೇಷ ಸಾಧನಗಳೊಂದಿಗೆ ಸಮೀಕ್ಷಾ ಹಾರಾಟ ನಡೆಸಿದೆ ಎಂಬ ಮಾಹಿತಿ ಲಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.