ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತೂರು: ಪತಿ ಪ್ರಾಣ ತೊರೆದ ಕೊಠಡಿಯಲ್ಲೇ ಪತ್ನಿ ಆತ್ಮಹತ್ಯೆ

Published 1 ಜುಲೈ 2023, 12:43 IST
Last Updated 1 ಜುಲೈ 2023, 12:43 IST
ಅಕ್ಷರ ಗಾತ್ರ

ಪುತ್ತೂರು: ಪರಸ್ಪರ ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದ ಮಹಿಳೆಯೊಬ್ಬರು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದ ಕೊಠಡಿಯಲ್ಲೇ ನೇಣುಬಿಗಿದುಕೊಂಡು ಪ್ರಾಣ ಕಳೆದುಕೊಂಡ ಘಟನೆ ನಗರ ಹೊರವಲಯದ ನರಿಮೊಗರು ಗ್ರಾಮದ ಪುರುಷರಕಟ್ಟೆಯಲ್ಲಿ ನಡೆದಿದೆ.

ಕಾವ್ಯಾ (38) ಆತ್ಮಹತ್ಯೆ ಮಾಡಿಕೊಂಡವರು. ಪುರುಷರಕಟ್ಟೆಯ ಇಂದಿರಾನಗರ ನಿವಾಸಿಯಾಗಿದ್ದ ಕಾವ್ಯಾ 19 ವರ್ಷಗಳ ಹಿಂದೆ ನೆರೆಮನೆಯ ಪ್ರವೀಣ್‌ ಅವರನ್ನು ವಿವಾಹವಾಗಿದ್ದರು. 7 ವರ್ಷಗಳ ಹಿಂದೆ ಪ್ರವೀಣ್ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅದೇ ಕೊಠಡಿಯಲ್ಲಿ ಶನಿವಾರ ಬೆಳಿಗ್ಗೆ ಕಾವ್ಯಾ ಮೃತದೇಹ ಪತ್ತೆಯಾಗಿದೆ.

ಜೂನ್ 30ರಂದು ಕಾವ್ಯಾ ಅವರ ಪುತ್ರ ಪ್ರತೀಕ್, ಕೆಮ್ಮಿಂಜೆ ಗ್ರಾಮದ ಬೆದ್ರಾಳದ ಪುತ್ತೂರು-ಕಾಣಿಯೂರು ರಸ್ತೆಯಲ್ಲಿ ನಡೆದ ಅಫಘಾತದಲ್ಲಿ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪತಿಯ ಸಾವಿನ ಬಳಿಕ ಕಾವ್ಯಾ ಸಣ್ಣ ಪುಟ್ಟ ಕೆಲಸ ಮಾಡುತ್ತ ಅತ್ತೆ, ಮೈದುನ ಹಾಗೂ ಇಬ್ಬರು ಮಕ್ಕಳ ಜೊತೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT