ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರಮಿಕ ವರ್ಗದ ವಿರೋಧಿಗಳು ಭಾರತ ಬಿಟ್ಟು ತೊಲಗಿ: ಬಿ.ಎಂ.ಭಟ್

Published 13 ಆಗಸ್ಟ್ 2024, 13:49 IST
Last Updated 13 ಆಗಸ್ಟ್ 2024, 13:49 IST
ಅಕ್ಷರ ಗಾತ್ರ

ಬೆಳ್ತಂಗಡಿ: ‘ಅಂದು ಭಾರತೀಯರನ್ನು ಗುಲಾಮರನ್ನಾಗಿರಿಸಿದ, ದೇಶದ ಸಂಪತ್ತನ್ನು ಕೊಳ್ಳೆಹೊಡೆಯುತ್ತಿದ್ದ ಬ್ರಿಟಿಷರನ್ನು ಭಾರತ ಬಿಟ್ಟು ತೊಲಗಲು ಕರೆ ನೀಡಿ ಯಶಸ್ವಿಯಾದ ದೇಶದ ದುಡಿಯುವ ವರ್ಗ ಇಂದು ದೇಶವನ್ನು ತನ್ನ ದುಡಿಮೆಯಿಂದ ಸಲಹುತ್ತಿದೆ. ಶ್ರಮಜೀವಿಗಳನ್ನು ಶೋಷಿಸುವ, ಅವರ ಬದುಕನ್ನು ಕಸಿಯುವ ಕಾರ್ಪೊರೇಟ್‌ ಸಂಸ್ಥೆಗಳ ಮಾಲೀಕರೇ ಭಾರತ ಬಿಟ್ಟು ತೊಲಗಿ ಎಂದು ಹೋರಾಡುವುದು ಇಂದು ಅನಿವಾರ್ಯವಾಗಿದೆ’ ಎಂದು ಸಿಐಟಿಯು ಜಿಲ್ಲಾ ಘಟಕದ ಉಪಾದ್ಯಕ್ಷ ಬಿ.ಎಂ.ಭಟ್ ಹೇಳಿದರು.

ಕ್ವಿಟ್ ಇಂಡಿಯಾ ಚಳವಳಿಯ ವರ್ಷಾಚರಣೆಯ ಭಾಗವಾಗಿ ಬೆಳ್ತಂಗಡಿ ತಾಲ್ಲೂಕು ಕಚೇರಿ ಎದುರು ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರ ಹಕ್ಕು ಕಸಿಯುವವರೇ ಭಾರತ ಬಿಟ್ಟು ತೊಲಗಿ ಎಂಬ ಹೆಸರಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಕಟ್ಟಡ ಕಾರ್ಮಿಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಧನಂಜಯ ಗೌಡ, ಆಟೊ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ರಾಮಚಂದ್ರ, ಸಿಐಟಿಯು ಮುಖಂಡರಾದ ಜಯರಾಮ ಮಯ್ಯ, ಅಶ್ವಿತಾ, ಉಷಾ, ಕುಮಾರಿ ಭಾಗವಹಿಸಿದ್ದರು.

ಸಿಐಟಿಯು ತಾಲ್ಲೂಕು ಘಟಕದ ಕಾರ್ಯದರ್ಶಿ ಲೋಕೇಶ್ ಕುದ್ಯಾಡಿ ಸ್ವಾಗತಿಸಿದರು. ಪ್ರಧಾನ ಮಂತ್ರಿಗೆ ನೀಡುವ ಮನವಿಯನ್ನು ಬೆಳ್ತಂಗಡಿ ತಾಲ್ಲೂಕು ಬೀಡಿ ಕೆಲಸಗಾರ ಸಂಘದ ಅಧ್ಯಕ್ಷೆ ಈಶ್ವರಿ ವಾಚಿಸಿದರು. ಸಂಘದ ಕಾರ್ಯದರ್ಶಿ ಜಯಶ್ರೀ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT