ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸರಗೋಡಿನಲ್ಲಿ ಬಿರುಸಿನ ಮಳೆ, ರಸ್ತೆ ಜಲಾವೃತ

Published 7 ಮೇ 2024, 13:04 IST
Last Updated 7 ಮೇ 2024, 13:04 IST
ಅಕ್ಷರ ಗಾತ್ರ

ಕಾಸರಗೋಡು: ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ ಬಿರುಸಿನ ಮಳೆಯಾಗಿದ್ದು, ಬಿಸಿಲಿನ ಬೇಗೆಗೆ ತಂಪರೆದಿದೆ. ನಸುಕಿನ 5 ಗಂಟೆಗೆ ಆರಂಭಗೊಂಡ ಮಳೆ ಬೆಳಿಗ್ಗೆ 7.30ರವರೆಗೆ ಮುಂದುವರಿದಿತ್ತು. ಗುಡುಗು-ಸಿಡಿಲಿನ ಆರ್ಭಟವೂ ಜೋರಾಗಿತ್ತು.

ಸಿಡಿಲ ಆಘಾತಕ್ಕೆ ಕರು ಸಾವು: ಕರಿಂದಳಂ ಕೋಯಿತ್ತವರ ಕಾಲೊನಿ ನಿವಾಸಿ ಎಂ.ರಮೇಶನ್ ಎಂಬುವರ ಹಟ್ಟಿಯಲ್ಲಿದ್ದ ಕರು ಸಿಡಿಲ ಆಘಾತಕ್ಕೆ ಮೃತಪಟ್ಟಿದೆ. ಅವರ ಹಿತ್ತಿಲ ತೆಂಗಿನ ಮರ ಮತ್ತು ನುಗ್ಗೆ ಮರವೂ ಸುಟ್ಟು ಕರಕಲಾಗಿದೆ. ಚಾಯೋತ್ ಪೆನ್ಶಮ್ಮೂಕ್ ಎಂಬಲ್ಲಿನ ಷೀನಾ ರಾಘವನ್ ಅವರ ಮನೆಯ ವಿದ್ಯುತ್‌ಉಪಕರಣಗಳು ಸುಟ್ಟುಹೋಗಿವೆ. ವಿವಿಧೆಡೆ ಗೂಡಂಗಡಿಗಳ ಸೂರು ಬಿರುಸಿನ ಗಾಳಿಗೆ ಹಾರಿಹೋಗಿದೆ.

ರಸ್ತೆ ಜಲಾವೃತ: ಜಿಲ್ಲೆಯಲ್ಲಿ ಮಂಗಳವಾರ ಸುರಿದ ಒಂದೇ ಮಳೆಗೆ ಚೆರ್ಕಳ ಮತ್ತು ಸಂತೋಷ್ ನಗರದ ರಸ್ತೆಗಳು ಜಲಾವೃತವಾಗಿವೆ. ಇದರಿಂದಾಗಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಈ ಪ್ರದೇಶದಲ್ಲಿ ಮಳೆನೀರು ಹರಿದುಹೋಗುವ ವ್ಯವಸ್ಥೆ ಇಲ್ಲ ಇರುವುದರಿಂದ ರಸ್ತೆಯಲ್ಲೇ ನೀರು ನಿಂತಿತ್ತು. ಇಲ್ಲಿನ ಕೆಲವು ಅಂಗಡಿಗಳಿಗೂ ಮಳೆ ನೀರು ನುಗ್ಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT