ಮುಡಿಪು: ಭಾರಿ ಮಳೆಗೆ ಕೊಣಾಜೆ–ಮುಡಿಪು ವ್ಯಾಪ್ತಿಯ ವಿವಿಧೆಡೆ ಮನೆಗಳಿಗೆ ಹಾನಿಯಾಗಿದೆ.
ಇರಾ ಗ್ರಾಮದ ಜಯರಾಮ ಬೆಳ್ಚಡ ಅವರ ಮನೆ ಕುಸಿದಿದೆ. ಇರಾ ಗ್ರಾಮದ ಕೆಳಗಿನ ಮನೆ ಎಂಬಲ್ಲಿ ಅಬ್ದುಲ್ ಅಝೀಜ್ ಅವರ ಮನೆಯ ಆವರಣಗೋಡೆ ಕುಸಿದಿದೆ. ಪಾವೂರು ಗ್ರಾಮದ ಗಾಡಿಗದ್ದೆಯ ತಗ್ಗುಪ್ರದೇಶದಲ್ಲಿ ನೀರು ತುಂಬಿ ಆವರಣ ಗೋಡೆ ಕುಸಿದು ಬಿದ್ದಿದ್ದು, ಹರೇಕಳ ಗ್ರಾಮದ ಮಲಾರ್ ಎಂಬಲ್ಲಿ ಫಾತಿಮತ್ ಝೊಹರಾ ಅವರ ಮನೆಯೂ ಕುಸಿದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.