ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ತಂಗಡಿ: ಮಕ್ಕಳಿಗೆ ಕನ್ನಡ ತಲುಪಿಸಲು ರಂಗಭೂಮಿ ಶ್ರೇಷ್ಠ ಮಾಧ್ಯಮ

Last Updated 6 ಫೆಬ್ರುವರಿ 2023, 5:58 IST
ಅಕ್ಷರ ಗಾತ್ರ

ಬೆಳ್ತಂಗಡಿ: 'ಕನ್ನಡವನ್ನು ಮಕ್ಕಳಿಗೆ ತಲುಪಿಸಲು ರಂಗಭೂಮಿ ಶ್ರೇಷ್ಠ ಮಾಧ್ಯಮ. ಕನ್ನಡದಲ್ಲಿರುವ ಒತ್ತಕ್ಷರದ ಸೊಬಗು ಬೇರೆ ಯಾವ ಭಾಷೆಯಲ್ಲೂ ಇಲ್ಲ. ಆ ಭಾಷೆಯ ಬಳಕೆ ನಮ್ಮ ಬದುಕಾಗಬೇಕು' ಎಂದು ಕಾರ್ಕಳ ಯಕ್ಷ ರಂಗಾಯಣದ ನಿರ್ದೇಶಕ ಜೀವನ್ ರಾಂ ಸುಳ್ಯ ಹೇಳಿದರು.

ಉಜಿರೆಯಲ್ಲಿ ನಡೆಯುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ 'ರಂಗ ವೈಖರಿ' ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಕ್ಷಗಾನ ಕಲಾವಿದ ಸುನಿಲ್ ಪಲ್ಲಮಜಲು ಮಾತನಾಡಿ ಯಕ್ಷಗಾನ ಭಕ್ತಿ ಪರಂಪರೆಯ ಕಲೆಯಾಗಿ ಬೆಳೆದುಬಂದಿದೆ. ಯಕ್ಷಗಾನದ ಮಾತಿಗೆ ಅದರದ್ದೇ ಆದ ರೂಪ ಇದೆ. ಇದನ್ನು ಸಾರ್ವಜನಿಕ ಸ್ಮೃತಿ ಎಂಬ ನೆಲೆಯಲ್ಲಿ ನೋಡಲಾಗುತ್ತಿದೆ ಎಂದರು.

ಬೆಳ್ತಂಗಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಶೀನ ನಡೋಳಿ ಮಾತನಾಡಿ, ರಂಗಭೂಮಿ ಮತ್ತು ಆರಾಧನಾ ಕೇಂದ್ರಗಳಿಗೆ ಸಂಬಂಧ ಇದೆ. ನಾಟಕ ಜನಪ್ರಿಯವಾದ ಪ್ರಕಾರವಾಗಿ ಹೆಚ್ಚು ಜನರನ್ನು ಆಕರ್ಷಿಸುವ ಕ್ಷೇತ್ರವಾಗಿತ್ತು ಎಂದರು.

ತುಳು ಸಿನಿಮಾ ರಂಗ ಮತ್ತು ರಂಗಭೂಮಿಗೆ ಅವಿನಾಭಾವ ಸಂಬಂಧವಿದೆ. ತುಳು ಚಿತ್ರರಂಗವಾಗಿದೆಯೇ ಹೊರತು ಚಿತ್ರೋದ್ಯಮವಾಗಿಲ್ಲ. ಯಾವ ಭಾಷೆಯ ಸಿನಿಮಾ ಆದರೂ ಅದರ ವಿಷಯ ಚೆನ್ನಾಗಿ ಇದ್ದಾಗ ಜನ ಮೆಚ್ಚಿಕೊಳ್ಳುತ್ತಾರೆ. ಪ್ರಚಾರ ಮತ್ತು ಪ್ರಸಾರ ಇದ್ದಾಗ ಪ್ರೇಕ್ಷಕ ಕೈ ಹಿಡಿಯುತ್ತಾನೆ. ಇಂದು ಅತ್ಯುತ್ತಮ ಸಿನಿಮಾವನ್ನು ಕೊಡುತ್ತಿರುವುದು ಮಲೆಯಾಳಂ ಸಿನಿಮಾ ರಂಗ. ತುಳು ಸಿನಿಮಾದಲ್ಲಿ ಹಾಸ್ಯದ ಜೊತೆ ಬೇರೆ ಪ್ರಯೋಗಗಳು ನಡೆಯಬೇಕಾಗಿದೆ ಎಂದು ಕಾಟಿಪಳ್ಳ ಮಿಸ್ಬಾ ಮಹಿಳಾ ಕಾಲೇಜಿನ ಉಪನ್ಯಾಸಕಿ ಮಮತಾ ಶೆಟ್ಟಿ ಹೇಳಿದರು.

ಸಾನ್ನಿಧ್ಯ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಡಾ.ವಸಂತ ಕುಮಾರ್ ಶೆಟ್ಟಿ ಇದ್ದರು. ಬೆಳ್ತಂಗಡಿ ವಾಣಿ ಕಾಲೇಜಿನ ಉಪನ್ಯಾಸಕ ಬೆಳ್ಳಿಯಪ್ಪ ಗೌಡ ನಿರೂಪಿಸಿದರು. ರವೀಂದ್ರ ಶೆಟ್ಟಿ ಬಳಂಜ ಸ್ವಾಗತಿಸಿದರು. ಪ್ರಕಾಶ್ ನಾರಾಯಣ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT