ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಕ್ಕಿ ಡ್ರಾ ನೆಪ– ₹ 53 ಲಕ್ಷ ವಂಚನೆ

Published 26 ಜೂನ್ 2024, 5:28 IST
Last Updated 26 ಜೂನ್ 2024, 5:28 IST
ಅಕ್ಷರ ಗಾತ್ರ

ಮಂಗಳೂರು: ಲಕ್ಕಿ ಡ್ರಾದಲ್ಲಿ ದುಬಾರಿ ಬಹುಮಾನಗಳು ಸಿಕ್ಕಿದ್ದು, ಅದನ್ನು ಕಳುಹಿಸಲು ಶುಲ್ಕ ಭರಿಸುವಂತೆ ಹೇಳಿ ₹ 53 ಲಕ್ಷ ಕಟ್ಟಿಸಿಕೊಂಡು ವಂಚನೆ ಮಾಡಿದ ಬಗ್ಗೆ ಇಲ್ಲಿನ  ಸೆನ್‌ ಕ್ರೈಂ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. 

‘2023 ನೇ ಜೂನ್‌ನಲ್ಲಿ ವಾಟ್ಸ್ಆಪ್ ಮೂಲಕ ಸಂಪರ್ಕಿಸಿದ ಅಪರಿಚಿತ ವ್ಯಕ್ತಿಯು ತನ್ನನ್ನು ಶಕೂರ್ ಎಂಬುದಾಗಿ ಪರಿಚಯಿಸಿಕೊಂಡಿದ್ದ. ‘ಚೋಟಾ ಬಾಯ್ ಬಡಾ ಬಾಯ್ ಝಮ್ ಝಮ್ ಎಲೆಕ್ಟ್ರಾನಿಕ್ಸ್’  ಕಡೆಯಿಂದ ನಿಮಗೆ ಲಕ್ಕಿ ಡ್ರಾದಲ್ಲಿ ಕಾರು, ಐಫೋನ್ ಮತ್ತು ಚಿನ್ನದ ಸರ ಬಹುಮಾನ ಸಿಕ್ಕಿದೆ ಎಂದು ತಿಳಿಸಿದ್ದ. ಅವುಗಳನ್ನು ಕಳುಹಿಸಲು ಶುಲ್ಕ ಪಾವತಿಸಬೇಕೆಂದು ಹೇಳಿ ಹಂತ ಹಂತವಾಗಿ  ಒಟ್ಟು ₹ 52,95,708 ಕಟ್ಟಿಸಿಕೊಂಡಿದ್ದಾನೆ. ಇದುವರೆಗೂ ಬಹುಮಾನಗಳನ್ನು ಕಳುಹಿಸದೇ ವಂಚಿಸಿದ್ದಾನೆ. ಆತನನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು’ ಒತ್ತಾಯಿಸಿ ಸಂತ್ರಸ್ತ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT