‘ಮನೆಯಲ್ಲೇ ಕೆಲಸ ಮಾಡಿ ಹೆಚ್ಚು ಹಣ ಗಳಿಸಿ ಎಂಬ ಜಾಹೀರಾತು ನನ್ನ ವಾಟ್ಸ್ ಆ್ಯಪ್‌ಗೆ ಬಂದಿತ್ತು. ಅದರಲ್ಲಿ ₹ 10 ಸಾವಿರ ಹೂಡಿಕೆ ಮಾಡಿ ₹ 18 ಸಾವಿರ ಗಳಿಸಬಹುದು ಎಂದು ತಿಳಿಸಿದ್ದರು. ಅವರು ಸೂಚಿಸಿದ ಖಾತೆಗೆ ಆ. 6ರಂದು ₹ 10 ಸಾವಿರ ಪಾವತಿಸಿದ್ದೆ. ಬಳಿಕ ಆ. 8ರಂದು ₹ 40 ಸಾವಿರ ಸೇರಿ ಕಟ್ಟಿದ್ದೆ. ಅವರು ನೀಡಿದ ಟಾಸ್ಕ್ ಪೂರ್ಣಗೊಳಿಸಿದ್ದಲ್ಲದೇ ಒಟ್ಟು ₹ 9.78 ಲಕ್ಷ ಪಾವತಿಸಿದ್ದೆ. ಅವರು ನನಗೆ ಹಣವನ್ನು ಮರುಪಾವತಿ ಮಾಡದೇ ವಂಚಿಸಿದ್ದಾರೆ’ ಎಂದು ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.