ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಿಶ್ರ ಪೇರ್‌ನಲ್ಲಿ ಮಿಂಚಿದ ದಂಪತಿ

ಬೇಸಿಗೆ ಕಾಲದ ರಾಷ್ಟ್ರೀಯ ಬ್ರಿಜ್ ಚಾಂಪಿಯನ್‌ಷಿಪ್‌: ಸಂದೀಪ್‌, ಮರಿಯಾನಿ ಫೈನಲ್‌ಗೆ
Published 7 ಜೂನ್ 2024, 16:10 IST
Last Updated 7 ಜೂನ್ 2024, 16:10 IST
ಅಕ್ಷರ ಗಾತ್ರ

ಮಂಗಳೂರು: ಪ್ರತಿಸ್ಪರ್ಧಿಗಳ ವಿರುದ್ಧ ಸ್ಕೋರುಗಳನ್ನು ಗಳಿಸುತ್ತ ಸಾಗಿದ ಮುಂಬೈಯ ದಂಪತಿ ಸಂದೀಪ್ ಕರ್ಮಾರ್ಕರ್ ಮತ್ತು ಮರಿಯಾನಿ ಕರ್ಮಾರ್ಕರ್‌ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಬ್ರಿಜ್ ಚಾಂಪಿಯನ್‌ಷಿಪ್‌ನ ಡಾ.ಕೆ.ಕೆ.ಭಟ್ನಾಗರ್ ಸ್ಮಾರಕ ಮಿಶ್ರ ಪೇರ್‌ನ ಫೈನಲ್‌ಗೆ ಲಗ್ಗೆ ಇರಿಸಿದರು.

ಭಾರತ ಬ್ರಿಜ್ ಫೆಡರೇಷನ್ ಮತ್ತು ಕರ್ನಾಟಕ ಬ್ರಿಜ್ ಸಂಸ್ಥೆಯ ಆಶ್ರಯದಲ್ಲಿ ಕರಾವಳಿ ಬ್ರಿಜ್‌ ಸಂಸ್ಥೆ ಆಯೋಜಿಸಿರುವ ಬೇಸಿಗೆ ಕಾಲದ ಚಾಂಪಿಯನ್‌ಷಿಪ್‌ನಲ್ಲಿ ಸಂದೀಪ್–ಮರಿಯಾನಿ ದಂಪತಿ 151.84 ಸ್ಕೋರು ಕಲೆ ಹಾಕಿ ಅಗ್ರ ಸ್ಥಾನ ಕಾಯ್ದುಕೊಂಡರು. ಎಲಿಮಿನೇಷನ್‌ ಸುತ್ತಿನಲ್ಲಿ ಒಟ್ಟು 57 ಜೋಡಿ ಪೈಕಿ 26 ಜೋಡಿ ಫೈನಲ್ ಲೀಗ್ ಸುತ್ತು ಪ್ರವೇಶಿಸಿದರು.

ಉತ್ತಮ್ ಸ್ವರೂಪ್ ಗುಪ್ತಾ ಮತ್ತು ಸಾರಿಕಾ ಮಿತ್ತಲ್ ಜೋಡಿ 74.88 ಸ್ಕೋರುಗಳೊಂದಿಗೆ ಎರಡನೇ ಸ್ಥಾನ ಗಳಿಸಿದರೆ ರಂಗ ಕದ್ಲೋಯ ಮತ್ತು ಮಿನಿ ಅಗರ್ವಾಲ್‌ ಮೂರನೇ ಸ್ಥಾನದಲ್ಲಿದ್ದಾರೆ. 25 ಸುತ್ತುಗಳ ಫೈನಲ್ ಲೀಗ್‌ ಶನಿವಾರ ನಡೆಯಲಿದೆ.

ಫೈನಲ್ ಪ್ರವೇಶಿಸಿದವರು: ಸಂದೀಪ್‌ ಕರ್ಮಾರ್ಕರ್‌, ಮರಿಯಾನಿ ಕರ್ಮಾರ್ಕರ್‌–1 (ಸ್ಕೋರು: 151.84), ಉತ್ತಮ್‌ ಸ್ವರೂಪ್‌ ಗುಪ್ತಾ, ಸಾರಿಕಾ ಮಿತ್ತಲ್‌–2 (74.88), ರಂಗಾ ಖದ್ಲೋಯ, ಮಿನಿ ಅಗರ್ವಾಲ್‌–3 (69.68), ಸೋಹಮ್ ಸರ್ಕಾರ್‌, ಶುಭಶ್ರೀ ಬಸು–4 (58), ರವಿ ಕೌಲ್‌, ದೀಪಿಕಾ ಮೆಹತಾ–5 (57.20), ರಾಜೀವ್‌ ಖಂಡೆಲ್ವಾಲ್‌, ಹಿಮಾನಿ ಖಂಡೆಲ್ವಾಲ್‌–6 (53), ಶೀತಲ್‌ ಬನ್ಸಾಲ್‌, ರಾಣಾ ರಾಯ್‌–7 (52), ಸತ್ಯವ್ರತ ಮುಖರ್ಜಿ, ವಾಸಂತಿ ಶಾ–8 (47.84), ರಂಜನ್ ಭಟ್ಟಾಚಾರ್ಯ, ರಿಚಾ ಶ್ರೀರಾಮ್‌–9 (43), ಅರುಣ್ ಬಾಪಟ್‌, ದೇವಿ ಮುತ್ತು ಭಟ್ನಾಗರ್‌–10 (41.60), ಪ್ರಿಯರಂಜನ್‌ ಸಿನ್ಹಾ, ಬಿಂದಿಯಾ ನಾಯ್ಡು–11 (41), ಅರುಣ್‌ ಪುರಾಣಿಕ್‌, ವೃಂದಾ ಜುಂಜುನ್ವಾಲ–12 (33), ಅನ್ಬಳಗನ್‌, ಮಧುರ್ ಸಿಂಗ್‌–13 (30.16), ಅಂಜಲಿ ಕಾರ್ತಿಕೇಯನ್‌, ಶಂಭುನಾಥ್‌ ಘೋಷ್‌–14 (30.16), ದಿಲೀಪ್‌ ಕೊಹೆಲ್ಲೊ, ರೀತಾ ಭಾಗ್ವತಿ–15 (30), ಟಿ.ವಿ.ರಮಣಿ, ಬಿಂದಿಯಾ ಕೊಹ್ಲಿ–16 (30), ಆರ್ಥರ್ ರಾಯ್ ರಾಡ್ರಿಗಸ್‌–17 (26), ಅಭಿಜಿತ್ ಚಕ್ರವರ್ತಿ, ಆಶಾ ಶರ್ಮಾ–18 (23.92, ಸಪನ್ ದೇಸಾಯಿ, ಶೈಲಜಾ ತಹಿಲಿಯಾನಿ–19 (21), ಸುಧೀರ್‌ ಗೋಪಾಲ್‌ ಅಗರ್ವಾಲ್‌–20 (21), ಪದ್ಮನಾಭನ್ ಶ್ರೀಧರನ್‌, ಉಮಾ ರಾಜೇಶ್‌–21 (19.76), ದಿನೇಶ್ ಕೆ ಜೈನ್‌, ಅಲ್ಕಾ ಜೈನ್‌–22 (18), ಬಿಂದಿಯಾ ಜಡ್ಜ್‌, ಬಿನೋದ್ ಕುಮಾರ್ ಶಾ–23 (17.68), ಸುಭಾಷ್ ಭಾವನಾನಿ, ಪ್ರಿಯಾ ಬಾಲಸುಬ್ರಹ್ಮಣ್ಯನ್‌–24 (17.68), ತರುಣ್ ಭಕ್ತಿ, ಅನುರಾಧಾ ಭಕ್ಷಿ–25 (16), ಉದಯ್‌ ಬೇಡೇಕರ್‌, ಹರ್ಮನ್ ಮಥಾಯಸ್‌)–26(–5).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT