ಶನಿವಾರ, ಸೆಪ್ಟೆಂಬರ್ 24, 2022
21 °C

ಉಳ್ಳಾಲದಲ್ಲಿ ಸಾವರ್ಕರ್ ಪರ ಹಾಕಿದ್ದ ಫ್ಲೆಕ್ಸ್ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ನಗರದ ಹೊರವಲಯದ ಉಳ್ಳಾಲದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಮುಖಂಡರೊಬ್ಬರು ಸಾವರ್ಕರ್ ಪರವಾಗಿ ಫ್ಲೆಕ್ಸ್ ಹಾಕಿದ್ದನ್ನು ಪೊಲೀಸರು ತೆರವುಗೊಳಿಸಿದ್ದಾರೆ.

ದೇರಳಕಟ್ಟೆ ಮತ್ತು ಅಸೈಗೋಳಿಯಲ್ಲಿ ‘ವಿನಾಯಕ ದಾಮೋದರ ಸಾವರ್ಕರ್ ಅವರಿಗೆ ನಮನಗಳು’ ಎಂದು ಬರೆದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ಎ.ಆರ್. ಫಝಲ್ ಫ್ಲೆಕ್ಸ್ ಹಾಕಿದ್ದರು. ಗುರುವಾರ ಸಂಜೆ ಸಾರ್ವಜನಿಕ ಸ್ಥಳದಲ್ಲಿ ಈ ಫ್ಲೆಕ್ಸ್‌ಗಳು ಕಾಣಿಸಿಕೊಂಡಿದ್ದವು.

ಬೆನ್ನಲ್ಲೇ ಕೋಣಾಜೆ ಪೊಲೀಸರು ದೇರಳಕಟ್ಟೆಯಲ್ಲಿ ಹಾಕಿದ್ದ ಫ್ಲೆಕ್ಸ್‌ ಅನ್ನು ತೆರವು ಮಾಡಿದ್ದಾರೆ. ದೇರಳಕಟ್ಟೆ ಮುಸ್ಲಿಂ ಬಾಹುಳ್ಯದ ಪ್ರದೇಶ ಆಗಿರುವುದರಿಂದ ಘರ್ಷಣೆಗೆ ಅವಕಾಶ ಮಾಡಿಕೊಡುವುದು ಬೇಡವೆಂದು ತೆರವುಗೊಳಿಸಿದ್ದಾರೆ ಎನ್ನಲಾಗುತ್ತಿದೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಫಜಲ್, ‘ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಸಾವರ್ಕರ್ ಅವರಿಗೆ ನಮನ ಸಲ್ಲಿಸುವುದರಲ್ಲಿ ತಪ್ಪೇನಿದೆ. ನಾನು ಭಯೋತ್ಪಾದಕರ ಪರವಾಗಿ ಫ್ಲೆಕ್ಸ್ ಹಾಕಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಒಂದು ದಿವಸ ಆಗಿರಲಿ, 50 ವರ್ಷ ಆಗಿರಲಿ, ಹೋರಾಟ ಮಾಡಿದವರೆಲ್ಲ ಪ್ರಾತಃ ಸ್ಮರಣೀಯರು. ಅಂತಹ ವ್ಯಕ್ತಿಗಳಿಗೆ ಅವಮಾನ ಮಾಡುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು