ಗುರುವಾರ , ಅಕ್ಟೋಬರ್ 21, 2021
21 °C

ದ್ವಿತೀಯ ಪಿಯು: ಶೇ 49.48 ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ದ್ವಿತೀಯ ಪಿಯುಸಿಗೆ ಭೌತಿಕ ಪರೀಕ್ಷೆ ಬರೆದಿದ್ದ ದಕ್ಷಿಣ ಕನ್ನಡ ಜಿಲ್ಲೆಯ 1,067 ವಿದ್ಯಾರ್ಥಿಗಳಲ್ಲಿ 528 ಮಂದಿ ಉತ್ತೀರ್ಣರಾಗಿದ್ದಾರೆ. ಒಟ್ಟು ಫಲಿತಾಂಶ ಶೇ 49.48ರಷ್ಟಾಗಿದೆ.

ಒಟ್ಟು 1,032 ಖಾಸಗಿ ವಿದ್ಯಾರ್ಥಿಗಳು, ಮೂವರು ಪುನರಾವರ್ತಿತರು ಹಾಗೂ 32 ಮಂದಿ ಇಲಾಖೆ ನೀಡಿದ್ದ ಫಲಿತಾಂಶ ತಿರಸ್ಕರಿಸಿ, ಪರೀಕ್ಷೆ ಬರೆದಿದ್ದರು. ಈ ಪೈಕಿ 494 ಖಾಸಗಿ, ಮೂವರು ಪುನರಾವರ್ತಿತರು ಹಾಗೂ 31 ಮಂದಿ ಫಲಿತಾಂಶ ತಿರಸ್ಕರಿಸಿದವರು ಉತ್ತೀರ್ಣರಾಗಿದ್ದಾರೆ. ಅವರಲ್ಲಿ 281 ವಿದ್ಯಾರ್ಥಿನಿಯರು ಹಾಗೂ 247 ವಿದ್ಯಾರ್ಥಿಗಳು.

ಕಲಾ ವಿಭಾಗದಲ್ಲಿ ಪರೀಕ್ಷೆಗೆ ನೋಂದಾಯಿಸಿದ್ದ 314 ವಿದ್ಯಾರ್ಥಿಗಳಲ್ಲಿ 152 ಮಂದಿ, ವಾಣಿಜ್ಯ ವಿಭಾಗದಲ್ಲಿ 748 ವಿದ್ಯಾರ್ಥಿಗಳಲ್ಲಿ 372 ಮಂದಿ, ವಿಜ್ಞಾನ ವಿಭಾಗದಲ್ಲಿ ಐವರಲ್ಲಿ ನಾಲ್ವರು ಉತ್ತೀರ್ಣರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು