ಮೂಡುಬಿದಿರೆ: ಮಂಗಳೂರಿನ ಯೆನಪೋಯ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಗ್ಲೋಬಲ್ ಯೂತ್ ಸಮ್ಮಿಟ್ಗೆ ಎಸ್.ಎನ್. ಮೂಡುಬಿದಿರೆ ಪಾಲಿಟೆಕ್ನಿಕ್ನ ಐವರು ಆಯ್ಕೆಯಾಗಿದ್ದಾರೆ.

ಜೂನ್ 4 ರಿಂದ 7ರ ತನಕ ನಡೆಯುವ ಈ ಸಮ್ಮೇಳನದಲ್ಲಿ 500ಕ್ಕೂ ಹೆಚ್ಚು ಯುವ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಪ್ರಾಚಾರ್ಯೆ ತರೀನಾ ರೀಟಾ ನೊರೊನ್ಹ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ವ್ಯಾಪ್ತಿಯ ಎಸ್.ಎನ್.ಎಂ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿನಿ ಚಿತ್ರಶ್ರೀ ಸ್ಟಾರ್ಟ್ ಅಪ್ ಇಕೊ ಸಿಸ್ಟಮ್ ಆ್ಯಂಡ್ ಎಂಟರ್ಪ್ರಾನರ್ಶಿಪ್ ಎಂಬ ವಿಷಯದ ಕುರಿತು ಪೋಸ್ಟರ್ ಪ್ರದರ್ಶನ ಮಾಡಲಿದ್ದಾರೆ. ಚಿತ್ರಶ್ರೀ, ವಿನೋದ್, ಸುದರ್ಶನ್, ವೀರತ್, ಗಣೇಶ್ ತಂಡ ಕರಾವಳಿಯ ಯಕ್ಷಗಾನ ಮತ್ತು ಜನಪದ ಕಲೆಗಳನ್ನು ಪ್ರದರ್ಶಿಸಲಿದ್ದಾರೆ ಎಂದರು.

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.