ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಪಾಲಿಕೆಯಿಂದ ₹76 ಸಾವಿರ ದಂಡ, ಪರಾವನಗಿ ಸ್ಥಗಿತ

Last Updated 8 ಜೂನ್ 2021, 15:50 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್-19 ಹರಡುವಿಕೆ ತಡೆಯಲು ಜಿಲ್ಲಾಡಳಿತದ ವಿಧಿಸಿದ ನಿರ್ಬಂಧದ ಮಾರ್ಗಸೂಚಿ ಉಲ್ಲಂಗಿಸಿದ ಅಂಗಡಿ ಮುಂಗಟ್ಟು ಮಾಲೀಕರು ಹಾಗೂ ವಾಹನ ಪ್ರಯಾಣಿಕರಿಗೆ ಮಂಗಳೂರು ಮಹಾನಗರ ಪಾಲಿಕೆ ₹76400 ದಂಡ ವಿಧಿಸಿದ್ದಾರೆ, ಅಂಗಡಿ ಪರವಾನಗಿ ಅಮಾನತು ಮಾಡಿದ್ದಾರೆ.

ಅನುಮತಿಸದೆ ಇರುವ ವಸ್ತುಗಳ ಅಂಗಡಿಗಳನ್ನು ಅನಧಿಕೃತವಾಗಿ ತೆರೆದು ವ್ಯಾಪಾರ ವಹಿವಾಟು ನಡೆಸಿರುವುದು ಹಾಗೂ ಮಾರ್ಗಸೂಚಿ ಉಲ್ಲಂಘಿಸಿದ ನಗರದ ಅಂಗಡಿಗಳಿಗೆ ಪಾಲಿಕೆ ಅಧಿಕಾರಿಗಳ ವಿವಿಧ ತಂಡಗಳು ಕಾರ್ಯಾಚರಣೆ ನಡೆಸಿ 78 ಅಂಗಡಿಗಳಿಗೆ ₹ 68,350 ದಂಡ ವಿಧಿಸಿದ್ದಾರೆ. ಈ ಪೈಕಿ 30 ಅಂಗಡಿಗಳ ಉದ್ದಿಮೆ ಪರವಾನಗಿಯನ್ನು ರದ್ದುಗೊಳಿಸಿ ತಾತ್ಕಾಲಿಕವಾಗಿ ಮುಂದಿನ ಆದೇಶದ ವರೆಗೆ ಮುಚ್ಚಲಾಗಿದೆ.

ಬೆಳಿಗ್ಗೆ 10 ಬಳಿಕ ಕೋವಿಡ್–19 ತಡೆಯುವ ನಿರ್ಬಂಧದ ಮಾರ್ಗಸೂಚಿಯನ್ನು ಉಲ್ಲಂಘಿಸಿ ಅನಗತ್ಯ ಓಡಾಟ ಮಾಡಿದ 19 ಪ್ರಕರಣಗಳಲ್ಲಿ ಸವಾರರಿಗೆ, ಚಾಲಕರಿಗೆ ₹8050 ದಂಡವನ್ನು ವಿಧಿಸಿ ಎಚ್ಚರಿಕೆ ನೀಡಲಾಗಿದೆ ಎಂದು ಮಂಗಳುರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀದರ್‌ ಅವರ ಪ್ರಕಟಣೆ ತಿಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT