ಗುರುವಾರ , ಜುಲೈ 7, 2022
20 °C

ಮಂಗಳೂರು: ಪ್ರಶಸ್ತಿಗೆ ಪಾತ್ರವಾಗಿದ್ದ ‘ಪದ್ಮಶ್ರೀ ಮಹಾಲಿಂಗ’ ಸಾಕ್ಷ್ಯಚಿತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಪದ್ಮಶ್ರೀ ಪುರಸ್ಕೃತ ಆಧುನಿಕ ಭಗೀರಥ ಬಂಟ್ವಾಳ ತಾಲ್ಲೂಕಿನ ವಿಟ್ಲ ಸಮೀಪದ ಅಡ್ಯನಡ್ಕದ ಅಮೈ ಮಹಾಲಿಂಗ ನಾಯ್ಕ ಕುರಿತು ಮೈಸೂರು ವಿಶ್ವ ವಿದ್ಯಾಲಯದ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನೆ ಸಂಸ್ಥೆ (ಇಎಂಆರ್‌ಸಿ) ನಿರ್ಮಿಸಿದ ಸಾಕ್ಷ್ಯಚಿತ್ರ 'ಇನ್‌ಕ್ರೇಡಿಬಲ್‌ ಟೇಲ್‌ ಆಫ್‌ ವಾಟರ್‌ ವಾರಿಯರ್‌' 10ನೇ ರಾಷ್ಟ್ರೀಯ ವಿಜ್ಞಾನ ಚಿತ್ರೋತ್ಸವದಲ್ಲಿ ಜ್ಯೂರಿ ಸ್ಪೆಷಲ್‌ ಮೆನ್ಷನ್‌ ಆವಾರ್ಡ್‌ಗೆ ಪಾತ್ರವಾಗಿತ್ತು.

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಅಧೀನದ ವಿಜ್ಞಾನ ಪ್ರಸಾರ್‌ ಸಂಸ್ಥೆ ರಾಷ್ಟ್ರ ಮಟ್ಟದ ವಿಜ್ಞಾನ ಚಿತ್ರೋತ್ಸವ ಆಯೋಜಿಸುತ್ತದೆ.

ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಂ.ಆರ್.ಸತ್ಯ ಪ್ರಕಾಶ್ ಹಾಗೂ ಬೆಂಗಳೂರು ಮಹಾರಾಣಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಮೋಹನ್ ಕುಮಾರ್ ಬಿ.ಎಸ್. ಚಿತ್ರಕತೆ ಬರೆದಿದ್ದು, ಅಡಿಕೆ ಪತ್ರಿಕೆಯ ಶ್ರೀಪಡ್ರೆ ಹಾಗೂ ವಾರಣಾಸಿ ಕೃಷ್ಣಮೂರ್ತಿ ಮಾಹಿತಿ ನೀಡಿದ್ದಾರೆ.

ಮೈಸೂರು ವಿಶ್ವವಿದ್ಯಾಲಯ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನೆ ಸಂಸ್ಥೆ (ಇಎಂಆರ್‌ಸಿ) ನಿರ್ಮಾಪಕ ಡಾ.ಮಹೇಶ್‌  ಈ ಸಾಕ್ಷ್ಯಚಿತ್ರ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಎನ್‌.ಸುರೇಶ್‌ ಛಾಯಾಗ್ರಹಣ, ವೆಂಕಟರಾಘು ಅವರ ಸಂಕಲನ ಹಾಗೂ ಬೆಳ್ಳಿಯಪ್ಪ ಅವರ ಧ್ವನಿಯೊಂದಿಗೆ ಸಾಕ್ಷ್ಯಚಿತ್ರ ಮೂಡಿ ಬಂದಿದೆ.

ಏಕಾಂಗಿಯಾಗಿ ಬರಡು ಬೆಟ್ಟ ಕೊರೆದು (ಸುರಂಗ) ಗುಡ್ದ ಮೇಲಿನ ಭೂಮಿಯನ್ನು ಕೃಷಿಗೆ ಯೋಗ್ಯ ಮಾಡಿದ ಯಶೋಗಾಥೆಯನ್ನು 'ಇನ್‌ಕ್ರೇಡಿಬಲ್‌ ಟೇಲ್‌ ಆಫ್‌ ವಾಟರ್‌ ವಾರಿಯರ್‌' ಸಾಕ್ಷ್ಯಚಿತ್ರ ಹೊಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು