ಮಂಗಳೂರು: ‘ಶ್ರಮಮೇವ ಜಯತೆ’ ಕಾರ್ಯಕ್ರಮ ಜ. 29ಕ್ಕೆ

ಮಂಗಳೂರು: ‘ಟೀಮ್ ಬ್ಲ್ಯಾಕ್ ಆ್ಯಂಡ್ ವೈಟ್’ ಸಂಸ್ಥೆ ‘ಶ್ರಮಮೇವ ಜಯತೆ’ ಕಾರ್ಯಕ್ರಮವನ್ನು ಇಲ್ಲಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಇದೇ 29 (ಭಾನುವಾರ) ಸಂಜೆ 5ಕ್ಕೆ ಆಯೋಜಿಸಿದೆ.
ಈ ಕುರಿತು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದ ತಂಡದ ಅಭಿಷೇಕ್ ಶೆಟ್ಟಿ, ‘ಸಮಾಜದ ನರನಾಡಿಯಂತಿರುವ ಶ್ರಮಿಕ ವರ್ಗವಿದೆ. ಅವರ ಸೇವೆಯಿಲ್ಲದ ಸಮಾಜವನ್ನು ಊಹಿಸಲು ಸಾಧ್ಯವಿಲ್ಲ. ಸ್ವಚ್ಛತಾ ಕರ್ಮಿ, ಲೈನ್ ಮ್ಯಾನ್, ಅಂಚೆ ಬಡವಾಡೆ ಮಾಡುವವರು, ಸಾರಿಗೆ ಸಿಬ್ಬಂದಿ, ಸಂಚಾರ ಪೊಲೀಸರು, ಆರೋಗ್ಯ, ಕಾರ್ಯಕರ್ತರು, ಸ್ಮಶಾನದ ಕಾರ್ಮಿಕರು... ಮೊದಲಾದ ಶ್ರಮಿಕ ವರ್ಗದವರನ್ನು ಗುರುತಿಸಿ ಅವರ ಸೇವೆಯ ಮೌಲ್ಯವನ್ನು ಗೌರವಿಸಲು ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಅವರೇ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸುವ ವಿನೂತನ ಕಲ್ಪನೆ ಇದು’ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ತಿಕ್ ಶೆಟ್ಟಿ ಹಾಗೂ ಕಿರಣ್ ದೊಂಡೋಳೆ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.