ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರು ಮಾರುಕಟ್ಟೆಗೆ ತೆಂಗು ಕಂಪನಿ

Published 19 ಮಾರ್ಚ್ 2024, 5:25 IST
Last Updated 19 ಮಾರ್ಚ್ 2024, 5:25 IST
ಅಕ್ಷರ ಗಾತ್ರ

ಮಂಗಳೂರು: ತೆಂಗು ಬೆಳೆಗಾರರು ಮುನ್ನಡೆಸುತ್ತಿರುವ ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಕಂಪನಿ ಸಾರ್ವಜನಿಕರಿಂದ ಷೇರು ಸಂಗ್ರಹಕ್ಕೆ ಮುಂದಾಗಿದೆ.

15 ಸಾವಿರಕ್ಕೂ ಹೆಚ್ಚು ಸದಸ್ಯರು ಇರುವ ಕಂಪನಿ ₹300 ಕೋಟಿ ಮೊತ್ತ ತೊಡಗಿಸಿಕೊಳ್ಳುವ ಯೋಜನೆ ಕೈಗೆತ್ತಿಕೊಂಡಿದ್ದು ಮೊದಲ ಹಂತದಲ್ಲಿ ₹50 ಕೋಟಿ ಮೌಲ್ಯದ ಷೇರು ಸಂಗ್ರಹಿಸುವ ಗುರಿ ಹೊಂದಿದೆ. ₹ 1 ಸಾವಿರ ಮೌಲ್ಯವನ್ನು ಪ್ರತಿ ಷೇರಿಗೆ ನಿಗದಿ ಮಾಡಲಾಗಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಕುಸುಮಾಧರ ಎಸ್.ಕೆ. ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಗರಿಷ್ಠ 200 ಷೇರು ಖರೀದಿಸುವ ಅಕವಾಶವಿದೆ. ಯೋಜನೆಯ ಮೊದಲ ಹಂತ ಪೂರ್ಣಗೊಂಡಾಗ 300 ಮಂದಿಗೆ ನೇರ ಹಾಗೂ 600ಕ್ಕೂ ಅಧಿಕ ಮಂದಿಗೆ ಪರೋಕ್ಷವಾಗಿ ಉದ್ಯೋಗ ದೊರೆಯಲಿದೆ. ಹೂಡಿಕೆದಾರರು ಕಂಪನಿಯ ಶಾಖೆಗಳಿಂದ ಷೇರು ಖರೀದಿಸಬಹುದು. ಅಧಿಕೃತ ವೆಬ್‌ಸೈಟ್‌ (www.coconutfarmers.in) ಮೂಲಕವೂ ಖರೀದಿಗೆ ಅವಕಾಶವಿದೆ. ದೂರವಾಣಿ (8105487763; ಟೋಲ್‌ ಫ್ರೀ: 18002030129) ಕರೆ ಮಾಡಿಯೂ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಅವರು ವಿವರಿಸಿದರು.

ಕಳೆದ ವರ್ಷ ಆರಂಭಿಸಿದ ಕಲ್ಪಸಮೃದ್ಧಿ ಯೋಜನೆಯಡಿ ಠೇವಣಿ ಸಂಗ್ರಹಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಆರು ತಿಂಗಳಲ್ಲಿ ಸಂಸ್ಥೆಯ ಒಟ್ಟು ವ್ಯವಹಾರ 10 ಪಟ್ಟು ಹೆಚ್ಚಾಗಿದೆ. ತೆಂಗಿನಕಾಯಿಯಿಂದ ತಯಾರಿಸಿದ ರಸಗೊಬ್ಬರ, ಸಾವಯವ ಗೊಬ್ಬರ ಮತ್ತು ಆಹಾರ ಉತ್ಪನ್ನಗಳಿಗೆ ಅತ್ಯುತ್ತಮ ಬೇಡಿಕೆ ಇದೆ ಎಂದರು.

ಸಲಹೆಗಾರ ಕುಮಾರ್ ಪೆರ್ನಾಜೆ, ನಿರ್ದೇಶಕರಾದ ಲತಾ ಪಿ ಮತ್ತು ಗಿರಿಧರ ಸ್ಕಂದ, ಮುಖ್ಯಕಾರ್ಯನಿರ್ವಹಣಾಧಿಕಾರಿ ಚೇತನ್ ಎ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT