ಮಂಗಳವಾರ, ಜೂನ್ 22, 2021
28 °C

ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಲೋಪ: ಪೈಲಟ್‌ಗಳ ಲೈಸೆನ್ಸ್ ರದ್ದು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‌ ವೇಳೆ ತಪ್ಪು ಮಾಡಿದ್ದ ಇಬ್ಬರು ಸ್ಪೈಸ್‌ಜೆಟ್‌ ಪೈಲಟ್‌ಗಳ ಪರವಾನಗಿಯನ್ನು (ಲೈಸೆನ್ಸ್) ನಾಲ್ಕೂವರೆ ತಿಂಗಳ ಅವಧಿಗೆ ನಾಗರಿಕ ವಿಮಾನಯಾನ ನಿರ್ದೇಶಾಲಯದ (ಡಿಜಿಸಿಎ) ಪ್ರಧಾನ ನಿರ್ದೇಶಕರು ಅಮಾನತು ಮಾಡಿದ್ದಾರೆ.

ಲ್ಯಾಂಡಿಂಗ್ ವೇಳೆ ಮಾಡಿದ ತಪ್ಪಿನಿಂದ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಎಡಕ್ಕೆ ಜಾರಿದ್ದ ವಿಮಾನವು ರನ್‌ವೇ ಅಂಚಿನ ದೀಪಗಳಿಗೆ ಹಾನಿ ಮಾಡಿತ್ತು. ಲೋಪದ ಬಗ್ಗೆ ತನಿಖೆ ನಡೆಸಿದ್ದ ನಿರ್ದೇಶನಾಲಯವು ಪೈಲಟ್‌ಗಳ ಲೋಪ ಸಾಬೀತಾದ ಕಾರಣ ಪರವಾನಗಿ ರದ್ದುಪಡಿಸುವ ನಿರ್ಧಾರ ತೆಗೆದುಕೊಂಡಿತು ಎಂದು ಪ್ರಕಟಣೆ ತಿಳಿಸಿದೆ.

ಲೋಪಕ್ಕೆ ಸಂಬಂಧಿಸಿದಂತೆ ಪೈಲಟ್ ಇನ್ ಕಮಾಂಡ್ ಮತ್ತು ಫಸ್ಟ್‌ ಆಫೀಸರ್‌ಗಳು ನೀಡಿರುವ ಉತ್ತರವನ್ನು ಡಿಜಿಸಿಎ ಒಪ್ಪಿಕೊಂಡಿಲ್ಲ. ಅವರಿಬ್ಬರಿಗೂ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪ್ರಕಟಣೆ ಹೇಳಿದೆ.

ವಿಮಾನವು ನೆಲವನ್ನು ಸ್ಪರ್ಶಿಸಿದ ರೀತಿ ಸರಿಯಿರಲಿಲ್ಲ. ರನ್‌ ವೇಯಿಂದ ಎಡಕ್ಕೆ ವಿಮಾನ ಜಾರಿತ್ತು. ಹೀಗಾಗಿ ರನ್‌ ವೇ ಅಂಚಿನ ದೀಪಗಳಿಗೆ ಹಾನಿಯಾಗಿತ್ತು ಎಂಬ ಸಂಗತಿ ತನಿಖೆಯಿಂದ ಬೆಳಕಿಗೆ ಬಂದಿತ್ತು.

ಮಂಗಳೂರಿನಲ್ಲಿ ಲ್ಯಾಂಡ್ ಆಗಿದ್ದ ಸ್ಪೈಸ್‌ಜೆಟ್‌ನ ಬೋಯಿಂಗ್ 737 ವಿಮಾನವು ದುಬೈನಿಂದ ಪ್ರಯಾಣ ಆರಂಭಿಸಿತ್ತು. ತಪ್ಪು ಮಾಡಿದ್ದ ಇಬ್ಬರೂ ಪೈಲಟ್‌ಗಳನ್ನೂ ಸ್ಪೈಸ್‌ಜೆಟ್‌ ಅಮಾನತು ಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು