ಭಾನುವಾರ, ಸೆಪ್ಟೆಂಬರ್ 25, 2022
30 °C
ಕುಮಾರಧಾರದಲ್ಲಿ ಜಲಸ್ತಂಭನ, ಹರಿದು ಬಂದ ಭಕ್ತಸಾಗರ

ಸುಬ್ರಹ್ಮಣ್ಯ: ಸಂಪನ್ನಗೊಂಡ 52ನೇ ಗಣೇಶೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುಬ್ರಹ್ಮಣ್ಯ: ಇಲ್ಲಿನ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ 52ನೇ ವರ್ಷದ ಗಣೇಶೋತ್ಸವವು ವಿವಿಧ ವೈಧಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಿ, ಗಣಪತಿ ಶೋಭಾಯಾತ್ರೆ ಮೂಲಕ ಸಂಪನ್ನಗೊಂಡಿತು.

ಭಾನುವಾರ ರಾತ್ರಿ ಕುಮಾರಧಾರದಲ್ಲಿ ಪುರೋಹಿತ ರಮಾನಂದ ಭಟ್ ವೈದಿಕ ವಿಧಿಗಳನ್ನು ನೆರವೇರಿಸಿದ ಬಳಿಕ ದೇವರ ವಿಗ್ರಹವನ್ನು ಜಲಸ್ತಂಭನಗೊಳಿಸಲಾಯಿತು. ದೇವಳದ ರಥಬೀದಿಯಿಂದ ಹೊರ ಮೆರವಣಿಗೆಯ ಉದ್ದಕ್ಕೂ ಭಕ್ತರು ದೇವರಿಗೆ ಹಣ್ಣುಕಾಯಿ ಅರ್ಪಿಸಿ, ಮಂಗಳಾರತಿ ನೀಡಿದರು.

ಶೋಭಾಯಾತ್ರೆಗೆ ಆಕರ್ಷಕ ಕುಣಿತ ಭಜನೆ, ಹಲವು ಸ್ತಬ್ದಚಿತ್ರಗಳು ಮೆರುಗು ನೀಡಿದವು. ಚಾರ್ವಕ ಕಪಿಲೇಶ್ವರ ಸಿಂಗಾರಿ ಮೇಳದ ಚೆಂಡೆ ಮೇಳ, ಬಂಟ್ವಾಳ ಚಿಲಿಪಿಲಿ ಗೊಂಬೆ ಬಳಗದಆಕರ್ಷಕ ಗೊಂಬೆಗಳು ಮತ್ತು ಕೀಲು ಕುದುರೆ, ಬ್ಯಾಂಡ್ ವಾದ್ಯ, ಯಕ್ಷಗಾನ ವೇಷಭೂಷಣ ಗಮನ ಸೆಳೆಯಿತು. ಕುಕ್ಕೆಶ್ರೀ ಅಟೋ ಚಾಲಕ ಮಾಲೀಕರ ಸಂಘದಿಂದ ಪಾನಕ ವ್ಯವಸ್ಥೆ, ಸಮಿತಿಯ ವತಿಯಿಂದ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು.

ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ವೆಂಕಟೇಶ್ ಎಚ್.ಎಲ್ ಸೇರಿದಂತೆ ಸಮಿತಿ ಸಂಚಾಲಕರು, ಪದಾಧಿಕಾರಿಗಳು, ಸಮಿತಿ ಸದಸ್ಯರು, ಪೂರ್ವಾಧ್ಯಕ್ಷರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು