ಮಂಗಳೂರು: ‘ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಚಿಕ್ಕಮಗಳೂರು ಜಿಲ್ಲೆ ಕಳಸದ ಉದ್ಯಮಿ ಮಹಮ್ಮದ್ ಮುಸ್ತಾಫ ಕೈವಾಡವಿರುವ ಸಂದೇಹ ಇದ್ದು, ಆತನನ್ನು ಬಂಧಿಸಬೇಕು’ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ಕುಂಪಲ ಒತ್ತಾಯಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಬಂಧಿತ ಆರೋಪಿಗಳಾದ ರಂಜಿತ್ ಮತ್ತು ನಾಗರಾಜ್ ಮಹಮ್ಮದ್ ಮುಸ್ತಾಫ ಬಳಿ ಕೆಲಸಕ್ಕಿದ್ದರು. ಮುಸ್ತಾಫ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯೊಂದರಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಇನಾಯತ್ ಅಲಿ ಭಾಗವಹಿಸಿದ್ದರು. ಆತನ ಜೊತೆ ನಂಟು ಹೊಂದಿರುವ ಖಾದರ್ ಹಾಗೂ ಇನಾಯತ್ ಅಲಿಯನ್ನೂ ವಿಚಾರಣೆಗೆ ಒಳಪಡಿಸಬೇಕು’ ಎಂದರು.

‘ಮಹಮ್ಮದ್ ಮುಸ್ತಾಫಾ ಕಳಸದಲ್ಲಿ ನಡೆಸುವ ಹೋಮ್ ಸ್ಟೇಯಲ್ಲಿ, ಈ ಹತ್ಯೆ ನಡೆಯುವ ಮುನ್ನ ಆರೋಪಿಗಳು ಸಂತೋಷಕೂಟ ನಡೆಸಿದ್ದ ಫೋಟೊಗಳಿವೆ. ಮೊದಲೇ ಸಂಚು ರೂಪುಗೊಂಡಂತೆ ಕಾಣುತ್ತದೆ. ಖಾದರ್ ಅವರು ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಅವರಾಗಿಯೇ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸದಿದ್ದರೆ ರಾಜ್ಯಪಾಲರು ಅವರನ್ನು ಹುದ್ದೆಯಿಂದ ವಜಾ ಮಾಡಬೇಕು’ ಎಂದು ಒತ್ತಾಯಿಸಿದ್ದರು.

‘ಘಟನೆ ನಡೆದ ಸ್ಥಳದಲ್ಲಿ ಇಬ್ಬರು ಮಹಿಳೆಯರಿದ್ದರು. 15ರಿಂದ 20 ಮಂದಿ ಕಾಯುತ್ತಾ ನಿಂತಿದ್ದರು. ಅವರನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿಲ್ಲ. ಈ ಹತ್ಯೆಗೆ ಕೇವಲ ₹ 5 ಲಕ್ಷ ಸುಪಾರಿಯನ್ನು ಆದಿಲ್ ಮೆಹರೂಫ್ ನೀಡಿದ್ದಾನೆ ಎಂದು ಪೊಲೀಸ್ ಕಮಿಷನರ್ ಅನುಪಮ ಆಗ್ರವಾಲ್ ತಿಳಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಸ್ವಿಫ್ಟ್ ಕಾರು ಹಾಗೂ ಪಿಕಪ್ ವಾಹನದ ಬೆಲೆಯೇ ಅದಕ್ಕಿಂತ ಜಾಸ್ತಿ ಆಗುತ್ತದೆ. ಇಷ್ಟು ಕಡಿಮೆ ಹಣಕ್ಕೆ ಯಾರಾದರೂ ಹತ್ಯೆ ಮಾಡುತ್ತಾರೆಯೇ. ಪ್ರಮುಖ ಆರೋಪಿ ಸಫ್ವಾನ್ ಖಾತೆಗೆ ವಿದೇಶದಿಂದ ಹಣ ವರ್ಗಾವಣೆ ಆಗಿರುವ ಸಂದೇಹವಿದೆ. ಈ ಹಿಂದೆ ಹತ್ಯೆಗೊಳಗಾದ ಮಹಮ್ಮದ್ ಫಾಝಿಲ್ ಕುಟುಂಬಕ್ಕೆ ಕಾಂಗ್ರೆಸ್ ನೇತೃತ್ವದ ಸರ್ಕಾರವು ₹ 25 ಲಕ್ಷ ಪರಿಹಾರ ನೀಡಿತ್ತು. ಅದರ ಹಣವನ್ನೂ ಹತ್ಯೆಗೆ ಬಳಸಿರುವ ಶಂಕೆ ಇದೆ. ಎಂಟು ಆರೋಪಿಗಳ ಬಂಧನದ ಹೊರತಾಗಿ ಕಮಿಷನರ್ ಯಾವುದೇ ಮಾಹಿತಿಯನ್ನು ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಒದಗಿಸುತ್ತಿಲ್ಲ. ಅವರನ್ನು ಎಲ್ಲಿ ಬಂಧಿಸಲಾಗಿದೆ. ಅವರಾಗಿಯೇ ಶರಣಾದರೆ ಎಂದೂ ತಿಳಿಸಿಲ್ಲ’ ಎಂದರು.

‘ಬಜಪೆ ಠಾಣೆಯ ಗುಪ್ತಚರ ವಿಭಾಗದ ರಶೀದ್ ಅವರಿಗೆ ಈ ತನಿಖೆಯ ಹೊಣೆ ವಹಿಸಬಾರದು ಎಂದರು.

‘ಸುಹಾಸ್ ಹತ್ಯೆ ಮಾಡುತ್ತೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡವರನ್ನು ಪೊಲೀಸರು ಬಂಧಿಸಿಲ್ಲ. ವಿಎಚ್ಪಿ ಮುಖಂಡ ಶರಣ್ ಪಂಪ್ವೆಲ್ ಹಾಗೂ ಭರತ್ ಕುಮ್ಡೇಲು ಅವರಿಗೆ ಬೆದರಿಕೆ ಒಡ್ಡಿದವರನ್ನು ವಿಚಾರಣೆಗೆ ಒಳಪಡಿಸಿಲ್ಲ. ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೋ ಸಂದೇಶ ಪ್ರಕಟಿಸಿದ ಕಾರಣಕ್ಕೆ ಬರಹಗಾರ ವಿಖ್ಯಾತ್ ಪುತ್ತೂರು ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಯಾವತ್ತೋ ನಡೆದ ಕೃತ್ಯಗಳ ಆರೋಪಿಗಳ ಮನೆಗೆ ಪೊಲೀಸರು ಮಧ್ಯರಾತ್ರಿ ಭೇಟಿ ನೀಡಿ, ಆ ಮನೆಯ ಮಹಿಳೆಯರ ಎದುರೇ ಅವರ ವಿಚಾರಣೆ ನಡೆಸುವ ಮೂಲಕ ಕಿರುಕುಳ ನೀಡುತ್ತಿದ್ದಾರೆ. ನಮ್ಮ ಪಕ್ಷದ ಶಾಸಕರ ವಿರುದ್ಧವೂ ಸರ್ಕಾರ ಪ್ರಕರಣ ದಾಖಲಿಸುತ್ತಿದೆ. ಇದಕ್ಕೆಲ್ಲ ನಾವು ಹೆದರುವುದಿಲ್ಲ’ ಎಂದರು.

ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗಲೇ ಸುಹಾಸ್ ಶೆಟ್ಟಿ ಹೆಸರು ರೌಡಿಗಳ ಪಟ್ಟಿಯಲ್ಲಿ ದಾಖಲಾದ ಕುರಿತು ಪ್ರತಿಕ್ರಿಯಿಸಿದ ಶಾಸಕ ವೇದವ್ಯಾಸ ಕಾಮತ್, ‘ಯಾವುದೇ ವ್ಯಕ್ತಿ ವಿರುದ್ಧ ಎರಡು ಮೂರು ಪ್ರಕರಣ ದಾಖಲಾದಾಗ ರೌಡಿಶೀಟ್ ತೆರೆಯುವುದು ಸಾಮಾನ್ಯ ಪ್ರಕ್ರಿಯೆ. ನನ್ನ ಹಾಗೂ ಶಾಸಕ ಭರತ್ ಶೆಟ್ಟಿ ವಿರುದ್ಧವೂ ಪ್ರಕರಣಗಳಿವೆ. ನಾಳೆ ನಮ್ಮ ಹೆಸರನ್ನೂ ರೌಡಿಗಳ ಪಟ್ಟಿಯಲ್ಲಿ ಸೇರಿಸಬಹುದು’ ಎಂದರು.

ಶಾಸಕ ಡಾ.ವೈ. ಭರತ್ ಶೆಟ್ಟಿ, ‘ಕಾನೂನುಬಾಹಿರ ಕೃತ್ಯ ತಡೆ ಕಾಯ್ದೆ (ಯುಎಪಿಎ) ಅಡಿ ಪ್ರಕರಣ ದಾಖಲಿಸಿದರೆ ಪ್ರಕರಣವನ್ನು ಎನ್ಐಎಯಿಂದ ತನಿಖೆಗೆ ಒಳಪಡಿಸಬೇಕಾಗಿ ಬರಬಹುದು ಎಂಬ ಕಾರಣಕ್ಕೆ ಉದ್ದೇಶಪೂರ್ವಕಾಗಿ ಆ ಕಾಯ್ದೆಯಡಿ ಎಫ್ಐಆರ್ ದಾಖಲಿಸಿಲ್ಲ’ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕಿ ಭಾಗಿರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಪಕ್ಷದ ಮುಖಂಡರಾದ ಪ್ರೇಮಾನಂದ ಶೆಟ್ಟಿ ಹಾಗೂ ಸುಧೀರ್ ಶೆಟ್ಟಿ ಕಣ್ಣೂರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.