ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ತಂಗಡಿ: ಹಳ್ಳಕೊಳ್ಳಗಳಲ್ಲಿ ನೀರುನಾಯಿಗಳ ಹಿಂಡು...!

Last Updated 17 ಮೇ 2021, 3:43 IST
ಅಕ್ಷರ ಗಾತ್ರ

ಉಜಿರೆ (ದಕ್ಷಿಣ ಕನ್ನಡ): ತೌತೆ ಚಂಡಮಾರುತದಿಂದಾಗಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಹಳ್ಳ–ಕೊಳ್ಳಗಳು, ನದಿಗಳು ತುಂಬಿ ಹರಿಯುತ್ತಿವೆ. ಈ ಮಧ್ಯೆ ಬೆಳ್ತಂಗಡಿ ತಾಲ್ಲೂಕಿನ ಗರ್ಡಾಡಿ ಬಳಿ ಹಳ್ಳದಲ್ಲಿ ಶನಿವಾರ ಅಪರೂಪದ ನೀರುನಾಯಿಗಳ ಹಿಂಡು ಪ್ರತ್ಯಕ್ಷವಾಗಿದೆ.

‘ಕಳೆದ ಅಕ್ಟೋಬರ್‌ನಲ್ಲಿ ಹಳ್ಳದಲ್ಲಿ ರಾತ್ರಿಹೊತ್ತು ನೀರುನಾಯಿಗಳ ಹಿಂಡು ಪತ್ತೆಯಾಗಿತ್ತು. ‌ಇದೀಗ ಹಗಲಿನಲ್ಲಿ 25ಕ್ಕಿಂತ ಅಧಿಕ ನೀರುನಾಯಿಗಳು ಫಲ್ಗುಣಿ ನದಿಯ ಸಂಪರ್ಕದ ಹಳ್ಳದಲ್ಲಿ ಕಂಡು ಬಂದಿರುವುದು ಅಚ್ಚರಿ ಮೂಡಿಸಿದೆ’ ಎಂದು ಸ್ಥಳೀಯರಾದ ಕುಬಳಬೆಟ್ಟು ಗುತ್ತು ನಿವಾಸಿ ಸಂಪತ್ ಕೊಂಬ ಹೇಳಿದ್ದಾರೆ.

ಹಳ್ಳದಲ್ಲಿ ಪತ್ತೆಯಾದ ನೀರು ನಾಯಿಗಳ ವಿಡಿಯೊ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT