ಪಾರ್ಸೆಲ್ ಕಂಪನಿ ಕಚೇರಿಯಲ್ಲಿ ಕಳವು
ಮಂಗಳೂರು: ಮುಕ್ಕದ ಮಹಾಲಕ್ಷ್ಮಿ ಕಾಂಪ್ಲೆಕ್ಸ್‌ನಲ್ಲಿರುವ ಡೆಲಿವರಿ ಲಿಮಿಟೆಡ್ ಕಂಪನಿಯ ಕಚೇರಿಯಲ್ಲಿ₹ 3.25 ಲಕ್ಷ ನಗದು ಹಾಗೂ ಪಾರ್ಸೆಲ್‌ಗಳು ಕಳವಾದ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಆನ್ ಲೈನ್ ಮೂಲಕ ಕಾಯ್ದಿರಿಸಿದ ಪಾರ್ಸೆಲ್‌ಗಳನ್ನು ಹಾಗೂ ಗ್ರಾಹಕರಿಂದ ಪಡೆದ ಹಣ ಅಲ್ ಮೇರಾ ಲಾಕರ್ ನಲ್ಲಿ ಇಟ್ಟು ಭಾನುವಾರ ಸಂಜೆ 6.30 ಗಂಟೆಗೆ ಕಚೇರಿಗೆ ಬೀಗ ಹಾಕಿ ಬೀಗ ಹಾಕಿ ಮನೆಗೆ ಹೋಗಿದ್ದೆ. ಸೋಮವಾರ ಬೆಳಿಗ್ಗೆ ಸಿಬ್ಬಂದಿ ಬಂದು ನೋಡಿದಾಗ ಬಾಗಿಲಿನ ಬೀಗ ಕಾಣೆಯಾಗಿತ್ತು. ಕಚೇರಿಯಲ್ಲಿ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿದ್ದವು. ಕಪಾಟಿನ ಲಾಕರ್ ಒಡೆಯಲಾಗಿತ್ತು. ಅದರೊಳಗಿದ್ದ ₹ 3,25,566 ನಗದು ಹಣ ಹಾಗೂ ಗ್ರಾಹಕರಿಗೆ ತಲುಪಿಸಲಾಗದ 19 ಸಾಮಗ್ರಿಗಳು ಕಳವಾಗಿವೆ. ಕಳವಾದ ಸಾಮಾಗ್ರಿಗಳ ಒಟ್ಟು ಮೌಲ್ಯ ₹ 3,37,566’ ಎಂದು ಕಚೇರಿಯ ಟೀಮ್ ಲೀಡರ್ ಸನತ್ ಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.