ಸುಳ್ಯ: ಜಾಲ್ಸೂರು ಗ್ರಾಮದ ಮರಸಂಕದಲ್ಲಿ ಸೇತುವೆ ಇಲ್ಲದ ಕಾರಣ ಗಾಯಾಳು ದೇವಕಿ ಅವರನ್ನು ಸ್ಟ್ರೆಚರ್ ಮೂಲಕ ಎತ್ತಿಕೊಂಡು ಹಳ್ಳ ದಾಟಿಸುವ ಅನಿವಾರ್ಯತೆ ಎದುರಾಯಿತು.

70 ವರ್ಷದ ವೃದ್ಧೆ, ಮೂಗಿಯಾಗಿರುವ ದೇವಕಿ ಅವರು ಮಂಗಳವಾರ ಮನೆಯ ಆವರಣ ದಲ್ಲಿ ಬಿದ್ದು, ಕಾಲಿಗೆ ಗಂಭೀರ ಗಾಯವಾಗಿತ್ತು. ಮನೆಯವರು ಸೇರಿಕೊಂಡು ಸ್ಟ್ರೆಚರ್ ಮೂಲಕ ಎತ್ತಿಕೊಂಡು ಹಳ್ಳ ದಾಟಿಸಿ, ಆಂಬುಲೆನ್ಸ್ ಮೂಲಕ
ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಳ್ಳ ದಾಟುವ ವಿಡಿಯೊ ವೈರಲ್ ಆಗಿದೆ.

ಇಲ್ಲಿನ ಹತ್ತಕ್ಕೂ ಅಧಿಕ ಮನೆ ಯವರಿಗೆ ಇಂದಿಗೂ ಸರಿಯಾದ ಸಂಪರ್ಕ ರಸ್ತೆ ಇಲ್ಲದ ಕಾರಣದಿಂದ ಜೀವ ಕೈಯಲ್ಲಿ ಹಿಡಿದು ಹಳ್ಳ ದಾಟುವ ಪರಿಸ್ಥಿತಿ ಇದೆ.

ಪರಿಶಿಷ್ಟ ಜಾತಿ ಹಾಗೂ ಪಂಗಡ ಸೇರಿದಂತೆ ಇತರೆ 12 ಮನೆಗಳಿವೆ. ಇಲ್ಲಿನ ನಿವಾಸಿಗಳು 60ಕ್ಕೂ ಅಧಿಕ ವರ್ಷಗಳಿಂದ ಇಲ್ಲಿ ನೆಲೆಸಿದ್ದಾರೆ. ಇಲ್ಲಿಗೆ ನಡೆದು ಹೋಗಲು ವ್ಯವಸ್ಥೆ ಇದೆ. ಆದರೆ, ವಾಹನ ಸಂಚಾರಕ್ಕೆ ವ್ಯವಸ್ಥೆ ಇಲ್ಲದಂತಾಗಿದೆ. ಪ್ರತಿನಿತ್ಯ ಅಗತ್ಯ ವಸ್ತುಗಳನ್ನು ಹೊತ್ತುಕೊಂಡು ಕಾಲು ದಾರಿಯಲ್ಲಿ ಸಂಚರಿಸಿ, ಕಾಲುಸಂಕದ ಮೂಲಕ ಹಳ್ಳ ದಾಟುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.