ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗ ರೆಡ್‌ ಕಾರ್ಪೆಟ್‌ ಸ್ವಾಗತ ಪಡೆದವರಿಗೆ ಈಗ ಎನ್‌ಐಎ ವಿಚಾರಣೆ: ಸುಧಾಂಶು

ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ
Last Updated 24 ಮಾರ್ಚ್ 2023, 16:30 IST
ಅಕ್ಷರ ಗಾತ್ರ

ಮಂಗಳೂರು: ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಒಂಬತ್ತು ವರ್ಷಗಳಲ್ಲಿ ಗಮನಾರ್ಹ ಬದಲಾವಣೆ ತಂದಿದೆ. ಪಿಎಫ್‌ಐ ಅನ್ನು ನಿಷೇಧಿಸಿದೆ. ಕೇರಳದಿಂದ ಕಾಶ್ಮೀರದವರೆಗೆ ಯಾವ ನಾಯಕರಿಗೆ ದೆಹಲಿಯಲ್ಲಿ ರೆಡ್‌ ಕಾರ್ಪೆಟ್‌ (ಕೆಂಪು ಹಾಸಿನ) ಸ್ವಾಗತ ನೀಡಲಾಗುತ್ತಿತ್ತೋ ಈಗ ಅದೇ ನಾಯಕರು ಎನ್‌ಐಎ ಅಥವಾ ಇಡಿ ಪ್ರಕರಣ ಎದುರಿಸಲು ದೆಹಲಿಗೆ ಹೋಗಿ ಬರುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಂದಿನ ಕಾಂಗ್ರೆಸ್‌ ಸರ್ಕಾರವು ಎಸ್‌ಡಿಪಿಐನ 160 ಪ್ರಕರಣಗಳನ್ನು ಮುಕ್ತಾಯಗೊಳಿಸಿ, 200 ಜನರನ್ನು ಆರೋಪಮುಕ್ತಗೊಳಿಸಿದೆ. ಝಾಕೀರ್ ನಾಯಕ್, ಅಫ್ಜಲ್ ಗುರು, ಯಾಕೂಬ್ ಮೆನನ್ ಅವರಂತಹವರನ್ನು ಹೊಗಳುವ ಮೂಲಕ ರಕ್ಷಣೆ ಮಾಡಿದೆ. ಇದು ಕಾಂಗ್ರೆಸ್‌ ಎಲ್ಲಿದ್ದರೂ, ಯಾವ ಕಾಲದಲ್ಲೂ ತನ್ನ ಸ್ವಭಾವ ಬದಲಾಯಿಸಲಾರದು ಎಂಬುದನ್ನು ತೋರಿಸುತ್ತದೆ’ ಎಂದರು.

‘ಲಂಚ ಕೊಡುವುದು, ಲಂಚ ಪಡೆಯುವಷ್ಟೇ ಅಪರಾಧವಾಗಿದೆ. ರಾಜ್ಯ ಬಿಜೆಪಿ ಸರ್ಕಾರದ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿರುವವರು, ತಾಂತ್ರಿಕವಾಗಿ ಅದನ್ನು ಬಹಿರಂಗಗೊಳಿಸಿ, ಸೂಕ್ತ ದೂರು ನೀಡಬೇಕು. ಇಲ್ಲಿದ್ದರೆ ಅವರೇ ಅಪರಾಧವನ್ನು ಮರೆಮಾಚಲು ಯತ್ನಿಸಿದಂತಾಗುತ್ತದೆ. ಈ ನಡುವೆ ಕಾಂಗ್ರೆಸ್ ಯಾಕೆ ಭ್ರಷ್ಟ ಗುತ್ತಿಗೆದಾರರ ಬಗ್ಗೆ ಕನಿಕರ ತೋರುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ’ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

‘ಕಾಂಗ್ರೆಸ್‌ ಶೇ85ರ ಕಮಿಷನ್ ಪಕ್ಷವಾಗಿದೆ. ಹಿಂದೆ ಪ್ರಧಾನಿಯಾಗಿದ್ದ ದಿವಂಗತ ರಾಜೀವ್ ಗಾಂಧಿ ಅವರು ಒಂದು ರೂಪಾಯಿಯಲ್ಲಿ ಕೇವಲ 15 ಪೈಸೆ ಮಾತ್ರ ಫಲಾನುಭವಿಗೆ ತಲುಪುತ್ತದೆ ಎಂದಿದ್ದರು. ಕಾಂಗ್ರೆಸ್‌ನ ಕಮಿಷನ್ ಕಾರ್ಡ್ ಆಗಲೇ ಬಹಿರಂಗಗೊಂಡಿದೆ. ನಿರುದ್ಯೋಗಿ ಪದವೀಧರರಿಗೆ ಎರಡು ವರ್ಷ ಪ್ರತಿ ತಿಂಗಳು ₹3,000 ಭತ್ಯೆ ನೀಡುವ ಯುವ ಗ್ಯಾರೆಂಟ್ ಕಾರ್ಡ್ ಅನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದೆ. ಆದರೆ, ರಾಜಸ್ಥಾನದಲ್ಲಿ ಇದನ್ನು ಘೋಷಿಸಿದ್ದ ಕಾಂಗ್ರೆಸ್ ಈವರೆಗೂ ಅದನ್ನು ನೀಡಿಲ್ಲ’ ಎಂದು ಟೀಕಿಸಿದರು.

‘ನೀಡಿದ ಭರವಸೆಯನ್ನು ಈಡೇರಿಸಲು ಸಾಧ್ಯವಾಗದ ಕಾಂಗ್ರೆಸ್ ಕರ್ನಾಟಕದಲ್ಲಿ ಮತ್ತೆ ಗ್ಯಾರೆಂಟಿಯ ಭರವಸೆ ನೀಡಿದೆ. ಬಿಜೆಪಿ ತಾನು ಹೇಳಿದನ್ನು ಮಾಡಿ ತೋರಿಸಿದೆ. ಹೀಗಾಗಿ, ಕರ್ನಾಟಕದ ಜನರು ಬಿಜೆಪಿಯ ಮೇಲೆ ಭರವಸೆ ಹೊಂದಿದ್ದಾರೆ’ ಎಂದರು.

ಸ್ಮಾರ್ಟ್‌ ಸಿಟಿ ಯೋಜನೆ, ಪ್ಲಾಸ್ಟಿಕ್ ಪಾರ್ಕ್, ಬಂದರು ವಿಸ್ತರಣೆ, ವಿಮಾನ ನಿಲ್ದಾಣದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಸೇರಿದಂತೆ ಅನೇಕ ಬದಲಾವಣೆಗಳನ್ನು ಮಂಗಳೂರು ನಗರದಲ್ಲಿ ಕಾಣಬಹುದು. ಪ್ರಧಾನಿ ನರೇಂದ್ರ ಮೋದಿ ಕೂಡ ಈ ಊರಿನ ಜತೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ಕರಾವಳಿ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಅಭಿವೃದ್ಧಿಯ ಪಥ ತೆರೆದುಕೊಂಡಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಪ್ರಮುಖರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ರವಿಶಂಕರ್ ಮಿಜಾರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT