ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ʻಪಯಣ್ʼ ಕೊಂಕಣಿ ಚಿತ್ರದ ಟೈಟಲ್ ಅನಾವರಣ

Published 15 ಫೆಬ್ರುವರಿ 2024, 7:31 IST
Last Updated 15 ಫೆಬ್ರುವರಿ 2024, 7:31 IST
ಅಕ್ಷರ ಗಾತ್ರ

ಮಂಗಳೂರು: ಗಾಯಕ ಹಾಗೂ ಗೀತೆ ರಚನೆಗಾರ ಮೆಲ್ವಿನ್ ಪೆರಿಸ್‌ ಅವರ ಚೊಚ್ಚಲ ಕೊಂಕಣಿ ಚಲನಚಿತ್ರ ʻಪಯಣ್ʼ (ಪ್ರಯಾಣ) ಮುಹೂರ್ತ ಕುಲಶೇಖರ ಚರ್ಚ್‌ನ ಮಿನಿ ಸಭಾಂಗಣದಲ್ಲಿ ಈಚೆಗೆ ನೆರವೇರಿತು.

‘ಸಂಗೀತ್ ಘರ್ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಲಿರುವ ಚಿತ್ರದ ಶೀರ್ಷಿಕೆಯನ್ನು ಕಲಾವಿದ ವಾಲ್ಟರ್ ನಂದಳಿಕೆ ಅನಾವರಣಗೊಳಿಸಿದರು. ಮುಖ್ಯ ಭೂಮಿಕೆಯಲ್ಲಿ ಬ್ರಾಯನ್ ಸಿಕ್ವೇರಾ, ಜಾಸ್ಮಿನ್ ಡಿಸೋಜ, ಕೇಟ್ ಪಿರೇರಾ, ಶೈನಾ ಡಿ‌ಸೋಜ, ರೈನಲ್ ಸಿಕ್ವೇರಾ, ಲೆಸ್ಲಿ ರೇಗೊ, ಜೆರಿ ರಸ್ಕಿನ್ಹಾ, ವಾಲ್ಟರ್ ನಂದಳಿಕೆ, ಜೀವನ್ ವಾಸ್, ಜೊಸ್ಸಿ ರೇಗೊ ಇದ್ದಾರೆ. ರೋಷನ್ ಡಿಸೋಜ ಮತ್ತು ಆಂಜೆಲೊರ್ ಸಂಗೀತ ನೀಡಿದ್ದು, ವಿ. ರಾಮಾಂಜನೆಯ ಛಾಯಾಗ್ರಹಣ ಮತ್ತು ಮೆವಿಲ್ ಜೊಯೆಲ್ ಪಿಂಟೊ ಸಂಕಲನ ನಿರ್ವಹಿಸಿದ್ದಾರೆ.

ಸಮಾರಂಭದಲ್ಲಿ ಮಾತನಾಡಿದ ವಾಲ್ಟರ್ ಕೊಂಕಣಿ ಚಲನಚಿತ್ರೋದ್ಯಮದಲ್ಲಿ ‘ಅಸ್ಮಿತಾಯ್’ ಮೈಲುಗಲ್ಲು ಆಯಿತು. ‘ಪಯಣ್‌’ಗೂ ಪ್ರೇರಣೆಯಾದ ಅದು ಭವಿಷ್ಯದಲ್ಲಿ ಇನ್ನಷ್ಟು ಚಿತ್ರಗಳು ತೆರೆಕಾಣಲು ಕಾರಣವಾಗಲಿದೆ ಎಂದರು.

‘ಮಾಂಡ್ ಸೊಭಾಣ್’ ಸಂಸ್ಥೆಯ ಅಧ್ಯಕ್ಷ ಲುವಿ ಪಿಂಟೊ, ಕುಲಶೇಖರ ಚರ್ಚ್‌ನ ಧರ್ಮಗುರು ಫಾದರ್ ಕ್ಲಿಫರ್ಡ್ ಫೆರ್ನಾಂಡಿಸ್, ನಿರ್ಮಾಪಕಿ ನೀಟಾ ಜೆ.ಪೆರಿಸ್, ಮೆಲ್ವಿನ್ ಪೆರಿಸ್ ಹಾಗೂ ಚಲನಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಜೋಯೆಲ್ ಪಿರೇರಾ ಇದ್ದರು.

ಕಾರ್ಯಕ್ರಮದ ಅಥಿತಿಗಳಾದ ಲುವಿ ಪಿಂಟೊ ಮಾತನಾಡಿದರು.  ಕಲಾವಿದರು ಮತ್ತು ತಾಂತ್ರಿ ಸಿಬ್ಬಂದಿಯನ್ನು ಗೌರವಿಸಲಾಯಿತು. ಮನು ಬಂಟ್ವಾಳ್ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT