ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತವನ್ನು ಹಿಂದೂ ರಾಷ್ಟ್ರವಾಗಿಟ್ಟುಕೊಳ್ಳುವುದೇ ನಮ್ಮ ಸಂಕಲ್ಪ’

ಪಂಜಿನ ಮೆರವಣಿಗೆ, ಅಖಂಡ ಭಾರತ ಸಂಕಲ್ಪ ದಿನಾಚರಣೆ
Published 15 ಆಗಸ್ಟ್ 2023, 12:35 IST
Last Updated 15 ಆಗಸ್ಟ್ 2023, 12:35 IST
ಅಕ್ಷರ ಗಾತ್ರ

ಪುತ್ತೂರು: ಭಾರತವನ್ನು ಎಂದಿಗೂ ಹಿಂದೂ ದೇಶವನ್ನಾಗಿಯೇ ಇಟ್ಟುಕೊಳ್ಳುತ್ತೇವೆ. ಇದುವೇ ನಮ್ಮ ಸಂಕಲ್ಪ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು.

ಪುತ್ತೂರಿನಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳ, ಹಿಂದೂ ಜಾಗರಣಾ ವೇದಿಕೆಯಿಂದ ಸೋಮವಾರ ರಾತ್ರಿ ನಡೆದ ಪಂಜಿನ ಮೆರವಣಿಗೆ- ಅಖಂಡ ಭಾರತದ ಸಂಕಲ್ಪ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಕಿಲ್ಲೆ ಮೈದಾನದ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ನಡೆದ ಭಾರತ ಮಾತಾ ಪೂಜನಾ ಮತ್ತು ನಿವೃತ್ತ ಯೋಧರಿಗೆ ಸನ್ಮಾನ, ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಗತ್ತಿನ ಹಿತಕ್ಕಾಗಿ ಬದುಕುವ ದೇಶ ಭಾರತ. ಹಾಗಾಗಿ ಈ ದೇಶ ಅಖಂಡವಾಗಿರಬೇಕು. ಜಗತ್ತಿನಲ್ಲಿ ತುಂಡಾಗಿದ್ದ ಜರ್ಮನಿ, ವಿಯೆಟ್ನಾಮ್ ಕೊರಿಯ ಮೊದಲಾದ ದೇಶಗಳು ಒಂದಾಗಿರುವಾಗ ತುಂಡಾಗಿರುವ ಭಾರತ– ಪಾಕಿಸ್ತಾನ, ಭಾರತ -ಬಾಂಗ್ಲಾ ಮತ್ತೆ ಅಖಂಡ ಭಾರತವಾಗಿ ಯಾಕೆ ಒಂದಾಗಬಾರದು? ಎಂದರು.

ಉದ್ಯಮಿ ಸೀತಾರಾಮ ರೈ ಕೈಕಾರ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಯೋಧರಾದ ಬಾಲಕೃಷ್ಣ ಪಟ್ಟೆ ಮತ್ತು ಪುಟ್ಟಣ್ಣ ಗೌಡ ಅವರನ್ನು ಸನ್ಮಾನಿಸಲಾಯಿತು. ಅಖಂಡ ಭಾರತ ನಿರ್ಮಾಣದ ಬಗ್ಗೆ ಪ್ರತಿಜ್ಞೆ ಸ್ವೀಕರಿಸಲಾಯಿತು. ಲಕ್ಷ್ಮೀ ಅರ್ಪಣ್ ಪ್ರತಿಜ್ಞಾ ವಿಧಿ ಬೋಧಿಸಿದರು.

ಹಿಂದು ಜಾಗರಣ ವೇದಿಕೆಯ ತಾಲ್ಲೂಕು ಅಧ್ಯಕ್ಷ ದಿನೇಶ್ ಪಂಜಿಗ, ವಿಶ್ವಹಿಂದೂ ಪರಿಷತ್‌ನ ಜಯಂತ್, ದೀಪ್ತಿ ಪ್ರಭು ಇದ್ದರು.

ಚೈತನ್ಯಲಕ್ಷ್ಮೀ ಸ್ವಾಗತಿಸಿದರು. ವಿಶಾಖ್ ರೈ ಸಸಿಹಿತ್ಲು ವಂದಿಸಿದರು. ಭವಿಷ್ಯತ್ ನಿರೂಪಿಸಿದರು.

ಸಭಾ ಕಾರ್ಯಕ್ರಮಕ್ಕೆ ಮುನ್ನ ಬೊಳುವಾರು ಓಂ ಶ್ರೀಶಕ್ತಿ ಆಂಜನೇಯ ಮಂತ್ರಾಲಯದ ಬಳಿಯಿಂದ ಕಿಲ್ಲೆ ಮೈದಾನದ ಅಮರ್ ಜವಾನ್ ಜ್ಯೋತಿ ಸ್ಮಾರಕದವರೆಗೆ ಪಂಜಿನ ಮೆರವಣಿಗೆ ನಡೆಯಿತು. ಹಿಂದು ಜಾಗರಣ ವೇದಿಕೆಯ ಗೌರವಾಧ್ಯಕ್ಷ ಡಾ.ಎಂ.ಕೆ.ಪ್ರಸಾದ್ ಅವರು ಮೆರವಣಿಗೆಗೆ ಚಾಲನೆ ನೀಡಿದರು.

ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಬೊಟ್ಯಾಡಿ, ವಿಶ್ವಹಿಂದೂ ಪರಿಷತ್ ಪುತ್ತೂರು ಜಿಲ್ಲೆಯ ಅಧ್ಯಕ್ಷ ಡಾ.ಕೃಷ್ಣಪ್ರಸನ್ನ, ಕಾರ್ಯದರ್ಶಿ ಸತೀಶ್ ಬಿ.ಎಸ್., ಜಿಲ್ಲಾ ಕೋಶಾಧಿಕಾರಿ ಮಾಧವ ಪೂಜಾರಿ, ಸಂಘ ಪರಿವಾರ ಸಂಘಟನೆಗಳ ಪ್ರಮುಖರಾದ ಶ್ರೀಧರ್ ತೆಂಕಿಲ, ಅಜಿತ್ ರೈ ಹೊಸಮನೆ, ಭರತ್ ಈಶ್ವರಮಂಗಲ, ಮಹೇಶ್ ಬಜತ್ತೂರು, ಹರಿಪ್ರಸಾದ್ ಯಾದವ್, ವಿರೂಪಾಕ್ಷ ಭಟ್, ಲಕ್ಷ್ಮಣ ಬೆಳ್ಳಿಪ್ಪಾಡಿ, ವಿದ್ಯಾಗೌರಿ, ರಾಜೇಶ್ ಬನ್ನೂರು, ಭಾಮಿ ಜಗದೀಶ್ ಶೆಣೈ, ಸುರೇಶ್ ಆಳ್ವ, ಕೃಷ್ಣಪ್ರಸಾದ್ ಬೆಟ್ಟ, ನಾಗೇಶ್ ಟಿ.ಎಸ್., ರಾಧಾಕೃಷ್ಣ ಗೌಡ ನಂದಿಲ, ಯುವರಾಜ್ ಪೆರಿಯತ್ತೋಡಿ ಇದ್ದರು.

ಪುತ್ತೂರಿನಲ್ಲಿ ಸೋಮವಾರ ರಾತ್ರಿ ನಡೆದ ಪಂಜಿನ ಮೆರವಣಿಗೆ ಅಖಂಡ ಭಾರತದ ಸಂಕಲ್ಪ ದಿನಾಚರಣೆಯಲ್ಲಿ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡಿದರು
ಪುತ್ತೂರಿನಲ್ಲಿ ಸೋಮವಾರ ರಾತ್ರಿ ನಡೆದ ಪಂಜಿನ ಮೆರವಣಿಗೆ ಅಖಂಡ ಭಾರತದ ಸಂಕಲ್ಪ ದಿನಾಚರಣೆಯಲ್ಲಿ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT