ಶನಿವಾರ, ಡಿಸೆಂಬರ್ 3, 2022
20 °C
ಚಾಲನೆ ನೀಡಿದ ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ

ದಂಡ ಶುಲ್ಕ ಪಾವತಿ: ಅಂಚೆ ಕಚೇರಿಯಲ್ಲಿ ಸೌಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸಂಚಾರ ನಿಯಮ ಉಲ್ಲಂಘನೆಯ ದಂಡ ಶುಲ್ಕವನ್ನು ಅಂಚೆ
ಕಚೇರಿಯಲ್ಲಿ ಪಾವತಿಸುವ ಸೌಲಭ್ಯ ಆರಂಭವಾಗಿದೆ.

ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಅವರು ಸೋಮವಾರ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಈ ಸೌಲಭ್ಯಕ್ಕೆ ಚಾಲನೆ ನೀಡಿದರು. ಡಿಸಿಪಿ ಅಂಶುಕುಮಾರ್, ಎಸಿಪಿ ಗೀತಾ ಕುಲಕರ್ಣಿ, ಸಹಾಯಕ ಅಂಚೆ ಅಧೀಕ್ಷಕ ಶ್ರೀನಾಥ್ ಎನ್‌.ಬಿ ಇದ್ದರು.

ಹೆಲ್ಮೆಟ್ ಹಾಕದೆ, ಸೀಟ್ ಬೆಲ್ಟ್ ಧರಿಸದೆ ಅಥವಾ ತ್ರಿಬಲ್ ರೈಡ್, ದೋಷಯುಕ್ತ ನಂಬರ್ ಪ್ಲೇಟ್ ಅಳವಡಿಸಿ ವಾಹನ ಚಲಾಯಿಸುವವರು, ಪೊಲೀಸರ ಕಣ್ತಪ್ಪಿಸಿ ಪಾರಾಗುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಆರಂಭಿಸಿರುವ ಆಟೊಮೇಷನ್ ಸೆಂಟರ್ ಮೂಲಕ ವಾಹನಗಳ ಮಾಹಿತಿ ತಕ್ಷಣ ದೊರೆತು, ವಾಹನದ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ. ನೋಟಿಸ್ ದೊರೆತ ಏಳು ದಿನಗಳ ಒಳಗೆ ದಂಡ ಪಾವತಿಸಬೇಕು. ಒಂದೊಮ್ಮೆ ಕರ್ನಾಟಕದಯಾವುದೇ ಊರಿನಲ್ಲಿ ನೋಂದಣಿಗೊಂಡ ವಾಹನ ಮಂಗಳೂರಿಗೆ ಬಂದು ಸಂಚಾರಿ ನಿಯಮ ಉಲ್ಲಂಘಿಸಿದರೆ, ಅವರ ವಿಳಾಸಕ್ಕೆ ನೋಟಿಸ್ ಹೋಗುತ್ತದೆ. ಅವರಿಗೆ ಇಲ್ಲಿ ಬಂದು ದಂಡ ಕಟ್ಟುವುದು ಕಷ್ಟ. ಇನ್ನು ಮುಂದೆ ಅವರು, ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸಂಚಾರ ನಿಯಮ ಉಲ್ಲಂಘನೆಯ ದಂಡ ಶುಲ್ಕವನ್ನು ದಕ್ಷಿಣ ಕನ್ನಡದ 126 ಅಂಚೆ ಕಚೇರಿಗಳು ಹಾಗೂ ಉಡುಪಿ ಜಿಲ್ಲೆಯ 62 ಅಂಚೆ ಕಚೇರಿಗಳು ಸೇರಿದಂತೆ ಕರ್ನಾಟಕದ 1,702 ಇಲಾಖಾ ಅಂಚೆ ಕಚೇರಿಗಳಲ್ಲಿ ನಗದು ಅಥವಾ ಕ್ಯೂಆರ್ ಕೋಡ್ ಸ್ಯ್ಕಾನ್ ಮಾಡುವ ಮೂಲಕ ಪಾವತಿ ಮಾಡಬಹುದಾಗಿದೆ.

ಈವರೆಗೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸಂಚಾರ ನಿಯಮ ಉಲ್ಲಂಘನೆಯ ದಂಡ ಶುಲ್ಕವನ್ನು ಪಾವತಿಸುವ ಸೌಲಭ್ಯವು ಆನ್‌ಲೈನ್ ಮೂಲಕ ಅಥವಾ ನಾಲ್ಕು ಸ್ಥಳೀಯ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ಹಾಗೂ ನಾಲ್ಕು ಮಂಗಳೂರು ಒನ್ ಕೇಂದ್ರಗಳಲ್ಲಿ ಮಾತ್ರ ಲಭ್ಯವಿತ್ತು. ಇನ್ನು ಮುಂದೆ,  ಈ ಸೌಲಭ್ಯವು ಕರ್ನಾಟಕದ ಎಲ್ಲ ಪ್ರಧಾನ ಹಾಗೂ ಉಪ ಅಂಚೆ ಕಚೇರಿಗಳಲ್ಲಿ ದೊರಕಲಿದೆ.

ಏನು ಮಾಡಬೇಕು?: ಸಂಚಾರಿ ನಿಯಮ ಉಲ್ಲಂಘನೆಯ ದಂಡ ಶುಲ್ಕವನ್ನು ಅಂಚೆ ಕಚೇರಿಯಲ್ಲಿ ಕಟ್ಟಲು ಗ್ರಾಹಕರು ಮಂಗಳೂರು ನಗರ ಪೊಲೀಸರಿಂದ ಮನೆ ವಿಳಾಸಕ್ಕೆ ಬರುವ ನೋಟಿಸ್ ಅನ್ನು ತರಬೇಕು. ತರದಿದ್ದಲ್ಲಿ, ಗ್ರಾಹಕರು ನಿಯಮ ಉಲ್ಲಂಘಿಸಿದ ವಾಹನದ ನೋಂದಣಿ ಸಂಖ್ಯೆಯನ್ನು ಹೇಳಿ ದಂಡ ಶುಲ್ಕವನ್ನು ಕಟ್ಟಬಹುದು. ಒಂದಕ್ಕಿಂತ ಹೆಚ್ಚು ಬಾಕಿಯಿದ್ದ ಎಲ್ಲ ಶುಲ್ಕ ಪಾವತಿ ಮಾಡಬಹುದು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು