ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ರೈಲು ಸಂಚಾರ- ಸಮಯದಲ್ಲಿ ಬದಲಾವಣೆ

Last Updated 29 ಸೆಪ್ಟೆಂಬರ್ 2021, 15:42 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು ಸೆಂಟ್ರಲ್ ಹಾಗೂ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಗಳಲ್ಲಿ ವಿವಿಧ ರೈಲುಗಳ ಆಗಮನ ಹಾಗೂ ನಿರ್ಗಮನದಲ್ಲಿ ಸಮಯ ಪರಿಷ್ಕರಣೆ ಮಾಡಲಾಗಿದೆ. ಆಯಾ ದಿನಕ್ಕೆ ಅನುಗುಣವಾಗಿ ಅಕ್ಟೋಬರ್ 1ರಿಂದ 2ರ ನಡುವೆ ಇದು ಅನ್ವಯವಾಗಲಿದೆ.

ಮಂಗಳೂರು ಜಂಕ್ಷನ್:ಯಶವಂತಪುರ- ಮಂಗಳೂರು ಜಂಕ್ಷನ್ ವೀಕ್ಲಿ ಸ್ಪೆಷಲ್ ರೈಲು (06539) ಪ್ರತಿ ಶನಿವಾರ ಓಡಾಡಲಿದೆ. ಮಂಗಳೂರು ಜಂಕ್ಷನ್‌ಗೆ ಸಂಜೆ 5 ಗಂಟೆಗೆ ಬರುತ್ತಿದ್ದ ರೈಲು ಸಂಜೆ 4.40ಕ್ಕೆ ಪರಿಷ್ಕರಣೆ ಮಾಡಲಾಗಿದೆ. ರೈಲು ನಿಗದಿತ ಸಮಯಕ್ಕಿಂತ 20 ನಿಮಿಷ ಮೊದಲೇ ಜಂಕ್ಷನ್‌ನ್ನು ತಲುಪಲಿದೆ.

ಯಶವಂತಪುರ- ಮಂಗಳೂರು ಜಂಕ್ಷನ್ ಟ್ರೈ-ವೀಕ್ಲಿ ಸ್ಪೆಷಲ್ ರೈಲು (06575) ಸೋಮವಾರ, ಬುಧವಾರ, ಶುಕ್ರವಾರ ಸಂಚರಿಸಲಿದೆ. ರೈಲು ಬರುವ ವೇಳೆಯನ್ನು ಸಂಜೆ 5 ಗಂಟೆಯ ಬದಲಾಗಿ 4.40ಕ್ಕೆ ಸಮಯ ಪರಿಷ್ಕೃರಣೆ ಮಾಡಲಾಗಿದೆ.

ಯಶವಂತಪುರ- ಕಾರವಾರ ಟ್ರೈ-ವೀಕ್ಲಿ ಸ್ಪೆಷಲ್ ರೈಲು (06211) ಸೋಮವಾರ, ಬುಧವಾರ, ಶುಕ್ರವಾರ ಸಂಚಾರ ನಡೆಸಲಿದೆ. ನಿಲ್ದಾಣಕ್ಕೆ ಸಂಜೆ 5 ಗಂಟೆಗೆ ಬರುತ್ತಿದ್ದ ಈ ರೈಲು ಸಮಯ ಪರಿಷ್ಕರಣೆಗೊಂಡು ಸಂಜೆ 4.40ಕ್ಕೆ ಬರಲಿದೆ. ಸಂಜೆ 5.20ರ ಬದಲಾಗಿ ಈ ರೈಲು ಸಂಜೆ 5 ಗಂಟೆಗೆ ಹೊರಡಲಿದೆ.

ಬೆಂಗಳೂರು-ಕಣ್ಣೂರು ಸ್ಪೆಷಲ್ ರೈಲು (06515) ಮಂಗಳೂರು ಜಂಕ್ಷನ್ ಮೂಲಕ ಪ್ರತಿದಿನ ಓಡಾಟ ನಡೆಸಲಿದೆ. ಜಂಕ್ಷನ್‌ಗೆ ಬೆಳಿಗ್ಗೆ 7.18ಕ್ಕೆ ಬರುವ ರೈಲು, 7.28ಕ್ಕೆ ಬರಲಿಗಿದೆ. ಇಲ್ಲಿಂದ ಬೆಳಿಗ್ಗೆ 7.20ಕ್ಕೆ ಹೊರಡುತ್ತಿದ್ದ ರೈಲು 7.30ಕ್ಕೆ ಪ್ರಯಾಣ ಆರಂಭಿಸಲಿದೆ.

ಕಣ್ಣೂರು-ಬೆಂಗಳೂರು ಸ್ಪೆಷಲ್ ರೈಲು (06516) ಪ್ರತಿದಿನವೂ ಸಂಚರಿಸಲಿದೆ. ರಾತ್ರಿ 8.15ಕ್ಕೆ ಬರುತ್ತಿದ್ದ ರೈಲು ರಾತ್ರಿ 8.25ಕ್ಕೆ ಬರಲಿದೆ. ರಾತ್ರಿ 8.17ಕ್ಕೆ ತೆರಳಬೇಕಿದ್ದ ಈ ರೈಲು 8.27ಕ್ಕೆ ಹೊರಡಲಿದೆ.

ಮಂಗಳೂರು ಸೆಂಟ್ರಲ್:ಬೆಂಗಳೂರು- ಮಂಗಳೂರು ಸೆಂಟ್ರಲ್ ಟ್ರೈ-ವೀಕ್ಲಿ ಸ್ಪೆಷಲ್ ರೈಲು (06531) ಮಂಗಳವಾರ, ಗುರುವಾರ, ಭಾನುವಾರ ಸಂಚರಿಸಲಿದೆ. ಬೆಳಗ್ಗೆ 9.10ಕ್ಕೆ ಬರಲಿದ್ದ ರೈಲು ಬೆಳಿಗ್ಗೆ 9.05ಕ್ಕೆ ಬರಲಿದೆ.

ತಿರುವನಂತಪುರಂ- ಮಂಗಳೂರು ಸೆಂಟ್ರಲ್ ಡೈಲಿ ರೈಲು (06347) ಪ್ರತಿದಿನವೂ ಓಡಾಟ ನಡೆಸಲಿದೆ. ಬೆಳಿಗ್ಗೆ 11:35ಕ್ಕೆ ಬರುತ್ತಿದ್ದ ರೈಲು ಬೆಳಿಗ್ಗೆ 11.30ಕ್ಕೆ ಬರಲಿದೆ.

ಕೊಯಂಬತ್ತೂರ್- ಮಂಗಳೂರು ಸೆಂಟ್ರಲ್ ಸ್ಪೆಷಲ್ ರೈಲು (06323) ಪ್ರತಿದಿನ ಓಡಾಟ ನಡೆಸಲಿದೆ. ಸಂಜೆ 6.50ಕ್ಕೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಬರುತ್ತಿದ್ದ ರೈಲು ಸಂಜೆ 6.40ಕ್ಕೆ ಬರಲಿದೆ.

ಕಣ್ಣೂರು- ಬೆಂಗಳೂರು ಸ್ಪೆಷಲ್ ರೈಲು (06516) ಪ್ರತಿದಿನ ಓಡಾಟ ನಡೆಸಲಿದೆ. ರಾತ್ರಿ 7.40ಕ್ಕೆ ನಿಲ್ದಾಣ ಪ್ರವೇಶಿಸುತ್ತಿದ್ದ ಈ ರೈಲು 7.50ಕ್ಕೆ ಬರಲಿದೆ. ರಾತ್ರಿ 8 ಗಂಟೆಗೆ ತೆರಳಬೇಕಿದ್ದ ರೈಲು ರಾತ್ರಿ 8.10ಕ್ಕೆ ಪ್ರಯಾಣ ಬೆಳೆಸಲಿದೆ. ಪ್ರಯಾಣಿಕರು ರೈಲ್ವೆ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಎಂ.ಕೆ. ಗೋಪಿನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT