ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿಗೆ ಉರುಳಿದ ಮರ: ಸಂಚಾರ ವ್ಯತ್ಯಯ

Published 22 ಮಾರ್ಚ್ 2024, 13:35 IST
Last Updated 22 ಮಾರ್ಚ್ 2024, 13:35 IST
ಅಕ್ಷರ ಗಾತ್ರ

ಪುತ್ತೂರು: ತಾಲ್ಲೂಕಿನ ಒಳಮೊಗ್ರು ಗ್ರಾಮದ ಕುಂಬ್ರ ಸಮೀಪದ ಶೇಕಮಲೆ ಎಂಬಲ್ಲಿ ಮಾಣಿ -ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿದ್ದ ಧೂಪದ ಮರವೊಂದು ಹೆದ್ದಾರಿಗೆ ಬಿದ್ದು, ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ನೂರಾರು ವಾಹನಗಳು ಕೆಲ ಕಾಲ ರಸ್ತೆಯಲ್ಲೇ ಸಾಲುಗಟ್ಟಿ ನಿಂತಿದ್ದವು.

ಸಂಶುದ್ದೀನ್ ಕುಂಬ್ರ ಮತ್ತು ಈಚು ಮುಡಾಲ ಅವರು ಸ್ಥಳೀಯರ ಸಹಕಾರದೊಂದಿಗೆ ಮರ ಮತ್ತು ಮರದ ಕೊಂಬೆಗಳನ್ನು ತುಂಡರಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಅಪಾಯಕಾರಿ ಮರ ತೆರವಿಗೆ ಆಗ್ರಹ: ಬುಡಸಮೇತ ಮುರಿದುಬಿದ್ದ ಧೂಪದ ಮರದ ಪಕ್ಕದಲ್ಲೇ ಅಪಾಯಕಾರಿ ಸ್ಥಿತಿಯಲ್ಲಿ ಬೃಹತ್ ಇನ್ನೊಂದು ಮರವಿದ್ದು, ಆ ಮರವೂ ಮುರಿದು ಬೀಳುವ ಸಂಭವ ಇದೆ. ವಾಹನ ಸಂಚಾರದ ವೇಳೆ ಮರ ಉರುಳಿಬಿದ್ದರೆ ಅನಾಹುತ ಸಂಭವಿಸಲಿದ್ದು, ಅರಣ್ಯ ಇಲಾಖೆಯವರು ಅಪಾಯಕಾರಿ ಮರವನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT