ನಾಗರಿಕತೆ ನೆಪದಲ್ಲಿ ಒಕ್ಕಲೆಬ್ಬಿಸುವ ಹುನ್ನಾರ: ಡಾ. ಹನಿಯೂರು ಚಂದ್ರ ಗೌಡ

7

ನಾಗರಿಕತೆ ನೆಪದಲ್ಲಿ ಒಕ್ಕಲೆಬ್ಬಿಸುವ ಹುನ್ನಾರ: ಡಾ. ಹನಿಯೂರು ಚಂದ್ರ ಗೌಡ

Published:
Updated:

ಸುಬ್ರಹ್ಮಣ್ಯ: ‘ಅರಣ್ಯ ಸಂರಕ್ಷಣೆ ಕಾಯ್ದುಕೊಂಡು ಬಂದ ಬುಡಕಟ್ಟು  ಕುಟುಂಬಗಳನ್ನು ನಾಗರಿಕತೆಗೆ ತರುವ ನೆಪದಲ್ಲಿ ಕಾಡಿನಿಂದ ಹೊರದಬ್ಬಿ ನಿರ್ಗತಿಕರನ್ನಾಗಿಸುವ ಹುನ್ನಾರ ಸರ್ಕಾಕಾರ ನಡೆಸುತ್ತಿದೆ’ ಎಂದು ರಾಷ್ಟ್ರೀಯ ಆದಿವಾಸಿ ಸಂಶೋಧಕ ಡಾ. ಹನಿಯೂರು ಚಂದ್ರ ಗೌಡ ಹೇಳಿದರು.

 ಇಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಸಮುದಾಯದ ನಡುವೆ ಒಡಕು ಸೃಷ್ಟಿಸಿ ಒಡೆದು ಆಳುವ ನೀತಿ ಅತ್ಯಂತ ಅಪಾಯಕಾರಿ. ಇಂತಹ ಧೋರಣೆಗಳಿಂದ ಸಮುದಾಯದ ಮಂದಿ ದಬ್ಬಾಳಿಕೆ, ಅಕ್ರಮಣಗಳಿಗೆ ಒಳಗಾಗಿವೆ. ಸಮುದಾಯದ 20 ಕುಟುಂಬಗಳು ವಾಸಿಸುತ್ತಿರುವ ಪ್ರದೇಶವನ್ನು ಅನುಸೂಚಿತ ಪ್ರದೇಶ ಎಂದು ಘೋಷಿಸಬೇಕು, ಆದಿವಾಸಿ ಬುಡಕಟ್ಟು ಪಂಚಾಿತಿ ತ್ ರಾಜ್ ಕಾಯಿದೆ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.

ಡಾ. ಕಸ್ತೂರಿ ರಂಗನ್ ವರದಿ ಜಾರಿಯಾಗುವುಕ್ಕೆ ಷರತ್ತು ಬದ್ಧ ಸಮ್ಮತಿಯಿದ್ದು ಕಾಡಿನಂಚಿನಲ್ಲಿ ವಾಸಿಸುವ ಸಮುದಾಯಗಳ ಮೂಲಸೌಕರ್ಯಕ್ಕೆ ಧಕ್ಕೆಯಾಗುವುದನ್ನು ಸಹಿಸಲಾಗದು ಎಂದರು. ಭ ಆದಿವಾಸಿ ಬುಡಕಟ್ಟು ಹೋರಾಟಗಾರ ಭಾಸ್ಕರ ಬೆಂಡೋಡಿ ಇದ್ದರು.

 ‘ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಪಾರಂಪರಿಕ ಹಾಗೂ ಸಂವಿಧಾನದ ಹಕ್ಕನ್ನು ಮಲೆಕುಡಿಯರು ಹೊಂದಿದ್ದು ಈ ಸಮುದಾಯದ ಮಂದಿಗೆ ಸೂಕ್ತ ಸ್ಥಾನಮಾನ, ಉದ್ಯೋಗ ನೀಡಬೇಕು’ ಎಂದರು.

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !