ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ವಿದ್ಯುತ್‌ ತಗುಲಿ ಇಬ್ಬರು ಆಟೊ ಚಾಲಕರ ಸಾವು

Published 27 ಜೂನ್ 2024, 4:55 IST
Last Updated 27 ಜೂನ್ 2024, 4:55 IST
ಅಕ್ಷರ ಗಾತ್ರ

ಮಂಗಳೂರು: ಭಾರಿ ಗಾಳಿ ಮಳೆಗೆ ನೆಲಕ್ಕುರುಳಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ನಗರದ ರೊಸಾರಿಯೊದಲ್ಲಿ ರಿಕ್ಷಾ ಚಾಲಕರಿಬ್ಬರು ಮೃತಪಟ್ಟಿದ್ದಾರೆ.

ಬುಧವಾರ ರಾತ್ರಿಯೇ ಈ ದುರ್ಘಟನೆ ಸಂಭವಿಸಿದ್ದು, ಗುರುವಾರ ಬೆಳಿಗ್ಗೆ ಗೊತ್ತಾಗಿದೆ.

ಮೃತರನ್ನು ರಿಕ್ಷಾ ಚಾಲಕ ಸಕಲೇಶಪುರದ ದೇವರಾಜ್ ( 51) ಹಾಗೂ ಉಪ್ಪಿನಂಗಡಿಯ ರಾಮಕುಂಜದ ರಾಜು (41) ಎಂದು ಗುರುತಿಸಲಾಗಿದೆ.

ರಿಕ್ಷಾ ತೊಳೆಯಲು ಹೋದ ದೇವರಾಜ್ ಅವರು ನೆಲಕ್ಕೆ ಬಿದ್ದಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ್ದರು. ವಿದ್ಯುದಾಘಾತಕ್ಕೊಳಗಾದ ಅವರ ರಕ್ಷಣೆಗೆ ರಾಜು ಧಾವಿಸಿದ್ದರು. ಅವರಿಬ್ಬರೂ ಕೊನೆಯುಸಿರೆಳೆದಿದ್ದಾರೆ. ಈ ದೃಶ್ಯಗಳು ಸಿಸಿಟಿವಿ ಕ್ಯಾಮೆರಾವೊಂದರಲ್ಲಿ ದಾಖಲಾಗಿವೆ.

ಬುಧವಾರ ರಾತ್ರಿ 9 ಗಂಟೆಯ ವೇಳೆ ಈ ಘಟನೆ ಸಂಭವಿಸಿದ್ದು, ಜೋರು ಮಳೆ ಇದ್ದ ಕಾರಣ ಅಕ್ಕಪಕ್ಕದ ಯಾರಿಗೂ ವಿಷಯ ತಿಳಿಯಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರು ರೊಸಾರಿಯೊ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅವರ ಕುಟುಂಬದ ವಿವರಗಳು ಇನ್ನೂ ತಿಳಿದುಬಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT