ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೂಗಲ್‌ ಮ್ಯಾಪ್‌ ನೋಡಿ ಚಾಲನೆ: ಕಾರು ನೀರು ಪಾಲು, ಇಬ್ಬರ ರಕ್ಷಣೆ

Published 27 ಜೂನ್ 2024, 13:10 IST
Last Updated 27 ಜೂನ್ 2024, 13:10 IST
ಅಕ್ಷರ ಗಾತ್ರ

ಬದಿಯಡ್ಕ: ಕಾಞಂಗಾಡಿನ ಅಂಬಲತ್ತರದಿಂದ ಕರ್ನಾಟಕದ ಉಪ್ಪಿನಂಗಡಿಗೆ ತೆರಳುತ್ತಿದ್ದಾಗ ಇಲ್ಲಿನ ಪಳ್ಳಂಜಿ ಅರಣ್ಯ ಪ್ರದೇಶದಲ್ಲಿ ಕಾರೊಂದು ತೋಡಿಗೆ (ತೊರೆ) ಬಿದ್ದಿದೆ.

ಕುತ್ತಿಕೋಲಿನಿಂದ ಅರಣ್ಯದ ಮೂಲಕ ಪಾಂಡಿಗೆ ತೆರಳುವಾಗ ಪಳ್ಳಂಜಿ ತೋಡಿನ ಹಳೆಯ ಸೇತುವೆಯಲ್ಲಿ ಅವಘಡ ನಡೆದಿದೆ. ಇಲ್ಲಿನ ಏಳನೇ ಮೈಲಿನ ಅಂಜಿಲ್ಲತ್ ಹೌಸ್‌ನ ತಸ್ರೀಫ್ (36), ಪುಲ್ಲೂರ್ ಮುನಂಬಂ ಹೌಸ್‌ನ ಅಬ್ದುಲ್ ರಶೀದ್ (35) ಅಪಾಯದಲ್ಲಿ ಸಿಲುಕಿಕೊಂಡವರು. ಎರಡೂ ಬದಿಯಲ್ಲಿ ಯಾವುದೇ ಆಧಾರ ಇಲ್ಲದ ತೋಡಿನ ಸೇತುವೆ ದಾಟುವಾಗ ಕಾರು ಉರುಳಿದೆ. ಈ ವೇಳೆ ತೋಡು ತುಂಬಿ ಹರಿಯುತ್ತಿತ್ತು.

ಕಾರು ಸಂಪೂರ್ಣವಾಗಿ ಮುಳುಗಿದ್ದರೂ ಕಾರಿನಿಂದ ಹೊರಬಂದ ತಸ್ರೀಫ್‌, ರಶೀದ್‌ ಅವರು ಮರವನ್ನು ಹಿಡಿದು ಕುಳಿತು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಆದೂರು ಠಾಣೆ ಪೊಲೀಸರು ಮತ್ತು ಕುತ್ತಿಕೋಲಿನ ಅಗ್ನಿಶಾಮಕ ಸಿಬ್ಬಂದಿ ಅವರನ್ನು ರಕ್ಷಿಸಿದರು.

ಗೂಗಲ್‌ ಮ್ಯಾಪ್‌ ಆಧರಿಸಿ ಕಾರು ಚಲಾಯಿಸುತ್ತಿದ್ದಾಗ ಘಟನೆ ನಡೆದಿದೆ ಎಂದು ಚಾಲಕ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT