ಸುರತ್ಕಲ್: ನವಮಂಗಳೂರು ಬಂದರಿನ 14ನೇ ದಕ್ಕೆಯಲ್ಲಿ 10 ಚಕ್ರದ ಕಂಟೈನರ್ ಲಾರಿಯೊಂದು ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದಿದ್ದು, ಅದರಲ್ಲಿದ್ದ ಚಾಲಕ ಹಾಗೂ ಕ್ಲೀನರ್ ಮೃತಪಟ್ಟಿದ್ದಾರೆ.

ಭಾನುವಾರ ರಾತ್ರಿ ಈ ಘಟನೆ ನಡೆ ದಿದ್ದು, ಲಾರಿ ಚಾಲಕ ಉತ್ತರ ಕರ್ನಾಟಕದ ರಾಜೇಸಾಬ (26) ಹಾಗೂ ಕ್ಲೀನರ್ ಭೀಮಪ್ಪ(22) ಮೃತಪಟ್ಟಿದ್ದಾರೆ. ಇಬ್ಬರ ಶವಗಳನ್ನು ಸಮುದ್ರದಿಂದ ಮೇಲಕ್ಕೆ ಎತ್ತಲಾಗಿದೆ.

ಕಬ್ಬಿಣದ ಅದಿರನ್ನು ಹಡಗಿನಿಂದ ಲೋಡ್ ಮಾಡಲು ಬಂದಿದ್ದ ಲಾರಿ, ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದಿತ್ತು. ಅಲ್ಲಿಂದ ಹಾದು ಹೋಗುವ ಟಗ್ ಬೋಟ್ನ ಪೈಲಟ್ ಘಟನೆ ಬಗ್ಗೆ ವಿಟಿಎಂಎಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದರು.

ತಕ್ಷಣ ಸಿಐಎಸ್ಎಫ್ ಕ್ಯೂಆರ್ಟಿ ಮತ್ತು ಸಿಎಸ್ಎಫ್ ಗಸ್ತು ದೋಣಿ ಸ್ಥಳಕ್ಕೆ ತಲುಪಿದ್ದು, ಟಗ್ ಬೋಟ್ ಸಹಾಯದಿಂದ ಶೋಧ ಕಾರ್ಯ ನಡೆಸಿತು. ರಾತ್ರಿ ಲಾರಿ ಚಾಲಕ ರಾಜೇಸಾಬ ಪತ್ತೆಯಾಗಿದ್ದು, ಆಸ್ಪತ್ರೆಗೆ ರವಾನಿಸಲಾಯಿತು. ಅಷ್ಟರಲ್ಲಿಯೇ ಅವರು ಮೃತಪಟ್ಟಿದ್ದರು.

ಸೋಮವಾರ ಕ್ಲೀನರ್ ಭೀಮಪ್ಪ ಶವ ಕೂಡ ಪತ್ತೆಯಾಗಿದೆ. ಸಮುದ್ರಕ್ಕೆ ಬಿದ್ದ ಲಾರಿಯನ್ನು ಕ್ರೇನ್ ಸಹಾಯದಿಂದ ಮೇಲಕ್ಕೆ ಎತ್ತಲಾಗಿದೆ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದರು.

ಡ್ರಗ್ಸ್: ಇಬ್ಬರ ಬಂಧನ

ಮಂಗಳೂರು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದ ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿ ದಂತೆ ತಲೆಮರೆಸಿಕೊಂಡಿದ್ದ ವಿದೇಶಿ ಪ್ರಜೆ ಸೇರಿದಂತೆ ಇಬ್ಬರನ್ನು ಪೊಲೀಸರು ಸೋಮವಾರ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ನೈಜೀರಿಯಾದ ಪ್ರಜೆ ಸ್ಟಾನ್ಲಿ ಜಿಮಾ ಮತ್ತು ಕಾಸರಗೋಡಿನ ಉಪ್ಪಳದ ರಮೀಝ್ ಬಂಧಿತರು. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಈ ಹಿಂದೆ ಮಾದಕ ವಸ್ತು ಸಾಗಣೆ ಕುರಿತು 2 ಪ್ರಕರಣಗಳನ್ನು ಭೇದಿಸಿದ್ದ ಪೊಲೀಸರು, 235 ಗ್ರಾಂ ನಿಷೇಧಿತ ಎಂಡಿಎಂಎ 2 ಕಾರು, 9 ಮೊಬೈಲ್ ಸೇರಿದಂತೆ ₹24.82 ಲಕ್ಷ ಮೌಲ್ಯದ ವಸ್ತು ಗಳನ್ನು ವಶಪಡಿಸಿಕೊಂಡಿದ್ದರು. ಅಲ್ಲದೆ 5 ಮಂದಿಯನ್ನು ಬಂಧಿಸಲಾಗಿತ್ತು.

ಇದೀಗ ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಎಸಿಪಿ ರಂಜಿತ್ ಕುಮಾರ್ ಬಂಡಾರು ಮಾರ್ಗದರ್ಶನದಲ್ಲಿ ಕೊಣಾಜೆ ಇನ್ಸ್ಪೆಕ್ಟರ್ ಪ್ರಕಾಶ ದೇವಾಡಿಗ, ಸಬ್ ಇನ್ಸ್ಪೆಕ್ಟರ್ಗಳಾದ ಶರಣಪ್ಪ ಭಂಡಾರಿ, ಮಲ್ಲಿಕಾರ್ಜುನ ಬಿರಾದಾರ, ಎಎಸ್ಐ ಮೋಹನ್, ಸಿಬ್ಬಂದಿ ರೆಜಿ ಇಕ್ಬಾಲ್, ಅಶೋಕ್, ನಾಗರಾಜ ಲಮಾಣಿ, ಪುರುಷೋತ್ತಮ್ ಈ ಕಾರ್ಯಾಚರಣೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.