ಉಳ್ಳಾಲ: ‘ದಕ್ಷಿಣ ಭಾರತದ ಅಜ್ಮೀರ್’ ಎಂದೇ ಪ್ರಸಿದ್ಧವಾಗಿರುವ ಉಳ್ಳಾಲ ಸಯೀದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾದ 432ನೇ ವಾರ್ಷಿಕ ಹಾಗೂ 22ನೇ ಪಂಚವಾರ್ಷಿಕ ಉರುಸ್ಗೆ ಭಕ್ತರ ದಂಡು ಹರಿದು ಬರುತ್ತಿದೆ.

ಏಪ್ರಿಲ್ 24ರಿಂದ ಆರಂಭವಾಗಿರುವ ಈ ಉರುಸ್ ಕಾರ್ಯಕ್ರಮಗಳು ಮೇ 18ರ ವರೆಗೆ ಜರುಗಲಿವೆ. 24 ದಿನಗಳ ಉರುಸ್ಗಾಗಿ ಇಡೀ ಉಳ್ಳಾಲ ಶೃಂಗಾರಗೊಂಡಿದ್ದು, ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿದೆ.

‘ನಾನು ಚಿಕ್ಕಂದಿನಿಂದಲೇ ಪಾಲಕರೊಂದಿಗೆ ಇಲ್ಲಿಗೆ ಬರುತ್ತಿದ್ದೆ. ಮಂಗಳೂರಿಗೆ ಬಂದಾಗಲೆಲ್ಲ ಇಲ್ಲಿಗೆ ಬಂದು ಹೋಗುವೆ. ಇಲ್ಲಿ ಹರಕೆ ಹೊತ್ತರೆ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇದೆ. ಎಲ್ಲ ಜಾತಿಯವರೂ ಬರುತ್ತಾರೆ’ ಎಂದು ಉರುಸ್ ಅಂಗವಾಗಿ ದರ್ಗಾಕ್ಕೆ ಭೇಟಿ ನೀಡಿದ್ದ ಬೆಂಗಳೂರಿನ ಹೈಕೋರ್ಟ್ ವಕೀಲೆ ರುಖಿಯಾಬಿ ಖುಷಿಪಟ್ಟರು.

‘ಉರುಸ್ ಕೊನೆಯಲ್ಲಿ ಮೇ 17ರ ರಾತ್ರಿಯಿಂದ 24 ಗಂಟೆಗಳ ಕಾಲ ನಿರಂತರವಾಗಿ ಅನ್ನದಾನ ನಡೆಯಲಿದೆ. ಇದರಲ್ಲಿ ಸುಮಾರು 4 ಲಕ್ಷದಷ್ಟು ಭಕ್ತರು ಅನ್ನಪ್ರಸಾದ ಸ್ವೀಕರಿಸಲಿದ್ದಾರೆ ಎಂದು ದರ್ಗಾ ಸಮಿತಿ ಅಂದಾಜಿಸಿದೆ. ಅದಕ್ಕಾಗಿ ಸಿದ್ಧತೆ ನಡೆದಿದೆ. ಘೀ ರೈಸ್ ಹಾಗೂ ಮೇಕೆ ಮಾಂಸದ ಖಾದ್ಯ ಇಲ್ಲಿಯ ವಿಶೇಷತೆ. ಈ ಅನ್ನದಾನಕ್ಕೆ 30 ಸಾವಿರ ಕೆ.ಜಿ ಅಕ್ಕಿ ತಗಲುವ ಅಂದಾಜು ಇದೆ’ ಎಂದು ದರ್ಗಾ ಸಮಿತಿಯ ಮೂಲಗಳು ತಿಳಿಸಿವೆ.

ತಲಾ 25 ಬಾಣಸಿಗರು ಇರುವ 10 ತಂಡಗಳು ಅಡುಗೆ ಸಿದ್ಧತೆಯಲ್ಲಿ ತೊಡಗಲಿವೆ. 2500 ಸ್ವಯಂ ಸೇವಕರು ಶ್ರಮಿಸಲಿದ್ದಾರೆ. 17ರಂದು ರಾತ್ರಿ ವೇಳೆಗೆ ಊಟ ಸಿದ್ಧವಾಗುತ್ತದೆ.

ರಂಜಾನ್ ತಿಂಗಳು ಹೊರತುಪಡಿಸಿ ನಿತ್ಯ ಮಧ್ಯಾಹ್ನ ದರ್ಗಾದಲ್ಲಿ ಗಂಜಿ ಊಟ ನೀಡಲಾಗುತ್ತಿದೆ. ದರ್ಗಾಕ್ಕೆ ಬರುವ ಭಕ್ತರು ಹಾಗೂ ವಿದ್ಯಾರ್ಥಿಗಳು ಊಟ ಮಾಡುತ್ತಾರೆ. ಪವಾಡ ಪುರುಷ ಮದನಿ ಅವರ ಕಾಲ ‘ಬತ್ತದ ಬಾವಿ’ ಇಲ್ಲಿದ್ದು, ಅದರ ನೀರನ್ನು ಜನರಿಗೆ ಉಚಿತವಾಗಿ ಕೊಡಲಾಗುತ್ತದೆ. ಸುತ್ತಲಿನ ಊರುಗಳವರೂ ಸಹ ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ಇಲ್ಲಿಂದ ನೀರು ತೆಗೆದುಕೊಂಡು ಹೋಗುತ್ತಾರೆ.

ಉಳ್ಳಾಲ ದರ್ಗಾ ಸಮಿತಿ ವ್ಯಾಪ್ತಿಯಲ್ಲಿ 28 ಮೊಹಲ್ಲಾಗಳು ಇವೆ. ಈ ಮೊಹಲ್ಲಾಗಳಲ್ಲಿಯ ಬಡ ಹೆಣ್ಣುಮಕ್ಕಳ ವಿವಾಹಕ್ಕೆ ತಲಾ ₹12 ಸಾವಿರ ಆರ್ಥಿಕ ನೆರವು ನೀಡಲಾಗುತ್ತಿದೆ. ಈ ಮೊಹಲ್ಲಾ ಹೊರತು ಪಡಿಸಿ ಉಳಿದ ಪ್ರದೇಶದ ಬಡವರು ಅರ್ಜಿ ಸಲ್ಲಿಸಿದರೆ ಅವರಿಗೆ ತಲಾ ಗರಿಷ್ಠ 2 ಸಾವಿರ ನೆರವು ನೀಡಲಾಗುತ್ತದೆ. ದರ್ಗಾ ಮೊಹಲ್ಲಾಗಳ ವ್ಯಾಪ್ತಿಯಲ್ಲಿಯ ಬಡವರಿಗೆ ವೈದ್ಯಕೀಯ ಚಿಕಿತ್ಸೆಗೆ ಆರ್ಥಿಕ ಸಹಾಯ, ಬಡ ವಿದ್ಯಾರ್ಥಿಗಳಿಗೆ ನೆರವು, ಸ್ಥಳೀಯ ಉತ್ಸವಗಳಿಗೆ ದೇಣಿಗೆ ನೀಡಲಾಗುತ್ತದೆ. 2024–25ನೇ ಸಾಲಿನಲ್ಲಿ ಇಂತಹ ಜನಕಲ್ಯಾಣ ಸೇವೆಗಳಿಗೆ ದರ್ಗಾ ಸಮಿತಿಯಿಂದ ಅಂದಾಜು ₹88 ಲಕ್ಷ ನೆರವು ನೀಡಲಾಗಿದೆ.

ಈ ದರ್ಗಾದಿಂದಾಗಿ ಉಳ್ಳಾಲ ವಿಶ್ವಭೂಪಟದಲ್ಲಿ ಗುರುತಿಸಿಕೊಂಡಿದೆ. ಇದು ಸರ್ವಧರ್ಮ ಸಾಮರಸ್ಯದ ಕೇಂದ್ರ. ಭಕ್ತರು ಹರಕೆ ರೂಪದಲ್ಲಿ ಮೇಕೆಗಳನ್ನು ಕೊಡುವುದು ವಾಡಿಕೆ.
ಆಶ್ರಫ್ ರೈಟ್ವೇ ಉಪಾಧ್ಯಕ್ಷ ಉಳ್ಳಾಲ ದರ್ಗಾ ಸಮಿತಿ

ಮಿನಿ ಸರ್ಕಾರ’ದಂತೆ ಕೆಲಸ

ಉಳ್ಳಾಲ ದರ್ಗಾ ಮಿನಿ ಸರ್ಕಾರದಂತೆ ಕೆಲಸ ಮಾಡುತ್ತಿದೆ ಎಂದು ವಕ್ಫ್ ಸಚಿವರಾಗಿದ್ದ ಅಜೀಜ್ ಸೇಠ ಅವರು ವಿಧಾನ ಸಭೆಯಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಪವಾಡಪುರುಷ ಸಯ್ಯದ್ ಮುಹಮ್ಮದ್ ಷರೀಫುಲ್ ಮದನಿ ಅವರ ಜನಕಲ್ಯಾಣದ ತತ್ವವನ್ನು ದರ್ಗಾ ಸಮಿತಿ ಅಕ್ಷರಶಃ ಪಾಲಿಸುತ್ತಿದೆ. ಈ ದರ್ಗಾ ಸಮಿತಿಯ ಅಧೀನದಲ್ಲಿ16 ಶಾಲಾ–ಕಾಲೇಜುಗಳು ಐಟಿಐ ಮಹಿಳಾ ಪಿಯು ಕಾಲೇಜು ಇದ್ದು ಸುಮಾರು 4500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅರೆಬಿಕ್ ಟ್ರಸ್ಟ್ ಅಡಿಯಲ್ಲಿ 28 ಮದರಸಾ ಮತ್ತು ಮಸೀದಿ ಕಾರ್ಯನಿರ್ವಹಿಸುತ್ತಿದ್ದು ಸುಮಾರು 2 ಸಾವಿರ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣ ನೀಡಲಾಗುತ್ತಿದೆ. ಕರ್ನಾಟಕದಲ್ಲೇ ದೊಡ್ಡದಾದ ಸುಮಾರು ₹25 ಕೋಟಿ ವೆಚ್ಚದಲ್ಲಿ ಇಲ್ಲಿ ಮಸೀದಿ ನಿರ್ಮಿಸಲಾಗುತ್ತಿದ್ದು ಮೇ 16ರಂದು ಮುಖ್ಯಮಂತ್ರಿ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಬಿ.ಜಿ. ಹನೀಫ್ ಹಾಜಿ ಅಧ್ಯಕ್ಷ ಉಳ್ಳಾಲ ದರ್ಗಾ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.