ಬುಧವಾರ, ಡಿಸೆಂಬರ್ 1, 2021
26 °C

ಅಲ್ಟ್ರಾ ಸೈಕ್ಲಿಂಗ್ ರೇಸ್‌ನಲ್ಲಿ ಜೋಸೆಫ್ ಪೆರೇರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಡೆಕ್ಕನ್ ಕ್ಲಿಫ್‌ಹ್ಯಾಂಗರ್ ಅಲ್ಟ್ರಾ ಸೈಕ್ಲಿಂಗ್ ರೇಸ್‌ನಲ್ಲಿ ವಿಶೇಷ ಸಾಧನೆ ತೋರುವ ಮೂಲಕ ಮಂಗಳೂರಿನ ಜೋಸೆಫ್ ಪೆರೇರಾ ಅವರು ವಿಶ್ವದ ಅತ್ಯಂತ ಕಠಿಣ ರೇಸ್ ಆಗಿರುವ ‘ರೇಸ್ ಅಕ್ರಾಸ್ ಅಮೆರಿಕ ಸೈಕ್ಲಿಂಗ್’ ಸ್ಪರ್ಧೆಯಲ್ಲಿ ಭಾಗವಹಿಸಿ ಯಶಸ್ವಿಯಾಗಿದ್ದಾರೆ ಎಂದು ಮಂಗಳೂರಿನ ವಿ.ಆರ್. ಸೈಕ್ಲಿಂಗ್ ಕ್ಲಬ್‌ನ ಅಧ್ಯಕ್ಷ ಸರ್ವೇಶ್ ಸಾಮಗ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಲ್ಟ್ರಾ ಸೈಕ್ಲಿಂಗ್ ರೇಸ್‌ ಅನ್ನು ಜೋಸೆಫ್ ಪೆರೇರಾ ಅವರು 33 ಗಂಟೆ 45 ನಿಮಿಷದಲ್ಲಿ ಪೂರೈಸಿದ್ದಾರೆ. ದಿ ಡೆಕ್ಕನ್ ಕ್ಲಿಫ್ ಹ್ಯಾಂಗರ್ ಭಾರತದ ಅತ್ಯಂತ ಜನಪ್ರಿಯ ಮತ್ತು ಕಠಿಣ ಅಲ್ಟ್ರಾ ಸೈಕಲ್ ರೇಸ್ ಆಗಿದೆ. ಇದು ಪುಣೆಯಿಂದ ಗೋವಾದವರೆಗಿನ 646 ಕಿ.ಮೀ. ಬೈಸಿಕಲ್ ರೇಸ್ ಆಗಿದ್ದು, ಇದನ್ನು ಇನ್‌ಸ್ಪೈರ್ ಇಂಡಿಯಾ ಆಯೋಜಿಸಿತ್ತು. ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆದಿದ್ದು, 50 ವರ್ಷ ಮೇಲಿನವರ ವಿಭಾಗದಲ್ಲಿ ಜೋಸೆಫ್ ಈ ಸಾಧನೆ ತೋರಿದ್ದಾರೆ. ವಿ.ಆರ್. ಸೈಕ್ಲಿಂಗ್ ಕ್ಲಬ್ ಮಂಗಳೂರನ್ನು ಪ್ರತಿನಿಧಿಸಿದ ಜೋಸೆಫ್ ಪೆರೇರಾ, ಕ್ಲಬ್‌ಗೆ ಕೀರ್ತಿ ತಂದಿದ್ದಾರೆ. ಅತ್ಯಂತ ಕ್ಲಿಷ್ಟಕರ ಸನ್ನಿವೇಶಗಳನ್ನು ಎದುರಿಸಿ, ಸ್ಪರ್ಧೆಯಲ್ಲಿ ಸಾಧನೆ ಮಾಡಿದ್ದಾರೆ ಎಂದರು.

ಜೋಸೆಫ್ ಪೆರೇರಾ, ವಿ ಆರ್ ಸೈಕ್ಲಿಂಗ್ ಕ್ಲಬ್‌ನ ಅಶೋಕ್ ಲೋಬೊ, ನಿತಿನ್ ಮೋಹನ್, ಶಿವಾನಂದ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು