ದಕ್ಷಿಣ ಕನ್ನಡ: ‘ಶೈಲೇಶ್ ಬಿಡುಗಡೆಗೆ ಸರ್ಕಾರ ಪ್ರಯತ್ನಿಸಲಿ’
ಮಂಗಳೂರು: ದುಷ್ಕರ್ಮಿಗಳ ಷಡ್ಯಂತ್ರದಿಂದಾಗಿ ಸೌದಿ ಅರೇಬಿಯಾದಲ್ಲಿ ಒಂದೂವರೆ ವರ್ಷದಿಂದ ಬಂಧನದಲ್ಲಿರುವ ಮಂಗಳೂರಿನ ಶೈಲೇಶ್ ಕುಮಾರ್ ಅವರ ಬಿಡುಗಡೆಗೆ ವಿದೇಶಾಂಗ ಇಲಾಖೆಯ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷ ಪ್ರಯತ್ನ ಮಾಡಬೇಕು ಎಂದು ಶೈಲೇಶ್ ಕುಟುಂಬಸ್ಥರು ಆಗ್ರಹಿಸಿದರು.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಟ್ಟಾರಿ ಸಮುದಾಯದ ಪ್ರಮುಖರಾದ ಜಿತೇಂದ್ರ ಕೊಟ್ಟಾರಿ, ‘ಸೌದಿ ಅರೇಬಿಯಾದಲ್ಲಿ 25 ವರ್ಷಗಳಿಂದ ವಾಸವಿರುವ ಶೈಲೇಶ್, ಅಲ್ಲಿನ ಕಂಪನಿಯೊಂದರ ಉದ್ಯೋಗಿ. ಯಾರೊ ದುಷ್ಕರ್ಮಿಗಳು ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ, ಸೌದಿ ದೊರೆಯನ್ನು ಅವಮಾನಿಸುವ ಮತ್ತು ಇಸ್ಲಾಂಗೆ ವಿರುದ್ಧವಾದ ಪೋಸ್ಟ್ ಹಾಕಿದ್ದರು. ಈ ಬಗ್ಗೆ ಶೈಲೇಶ್ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ, ಪೊಲೀಸರು ಬಂಧಿಸಿದ್ದಾರೆ’ ಎಂದರು.
‘ಪೂರ್ವಾಪರ ಯೋಚಿಸದೆ ಪೊಲೀಸರು ಬಂಧಿಸಿರುವ ಪರಿಣಾಮ, ಶೈಲೇಶ್ ಜೈಲಿನಲ್ಲಿ ಕಾಲ ಕಳೆಯುವಂತಾಗಿದೆ. ಅವರನ್ನು ವಾಪಸ್ ಕರೆತರುವಲ್ಲಿ ಕೇಂದ್ರ ಸರ್ಕಾರ ಮುತುವರ್ಜಿ ವಹಿಸಬೇಕು. ರಾಜ್ಯದ ಗೃಹ ಸಚಿವರು ಮತ್ತು ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು. ಅನುಷ್ಕಾ ಕೊಟ್ಟಾರಿ, ಕವಿತಾ, ಶ್ರೇಯಸ್ ಕೊಟ್ಟಾರಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.