ಆಸ್ಪತ್ರೆಯಲ್ಲಿ ಕರುಣೆಯ ತೊಟ್ಟಿಲು
ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ದೂರದ ಊರುಗಳಿಂದ ಬರುವವರರಿಗೆ ಬಟ್ಟೆಗಳನ್ನು ಕೊಡುವುದಕ್ಕಾಗಿ ಎಂ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿರುವ ಕರುಣೆಯ ತೊಟ್ಟಿಲು ಕ್ಲೋತ್ ಬ್ಯಾಂಕ್‌ಗೆ ಭಾನುವಾರ ಚಾಲನೆ ನೀಡಲಾಯಿತು. ಜನರು ಹೊಸ ಅಥವಾ ಬಳಸಿ ಶುಚಿಗೊಳಿಸಿದ ಬಟ್ಟೆಗಳನ್ನು ಕ್ಲೋತ್ ಬ್ಯಾಂಕ್‌ನಲ್ಲಿ ಇಡಬಹುದು. ಇದನ್ನು ಅಗತ್ಯವಿರುವ ರೋಗಿಗಳು ಅಥವಾ ಅವರ ಜೊತೆ ಬಂದವರು ಕೊಂಡೊಯ್ಯಲಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಝಕರಿಯಾ ಜೋಕಟ್ಟೆ ತಿಳಿಸಿದರು.