ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿ ಅಮಾನತಿಗೆ ಆಗ್ರಹ

ಭಜನೆ ಹಾಡುವ ಮೂಲಕ ಪ್ರತಿಭಟನೆ
Last Updated 30 ಡಿಸೆಂಬರ್ 2022, 6:41 IST
ಅಕ್ಷರ ಗಾತ್ರ

ಬೆಳ್ತಂಗಡಿ: ‘ಉಪ್ಪಿನಂಗಡಿ ವಲಯಾರಣ್ಯಾಧಿಕಾರಿ ಸಂಜೀವ ಪೂಜಾರಿ ಸಾಮಾಜಿಕ ಜಾಲಾತಾಣದಲ್ಲಿ ಹಿಂದೂ ದೇವರಾದ ಆಂಜನೇಯ ಸ್ವಾಮಿಯ ಬಗ್ಗೆ ಕೀಳು ಭಾಷೆ ಬಳಕೆ, ಭಜನೆಯ ಬಗ್ಗೆ ತಪ್ಪು ಸಂದೇಶ, ಧರ್ಮಗಳ ಮದ್ಯೆ ದ್ವೇಷ ಹುಟ್ಟುವ ಸಂದೇಶವನ್ನು ರವಾನಿಸುತ್ತಿದ್ದು, ಅವರನ್ನು ತಕ್ಷಣ ಬಂಧಿಸಬೇಕು. ಇಲಾಖೆಯಿಂದ ಅಮಾನತುಗೊಳಿಸಬೇಕು’ ಎಂದು ಒತ್ತಾಯಿಸಿ ವಿಶ್ವಹಿಂದೂ ಪರಿಷತ್, ಬಜರಂಗದಳದ ಸದಸ್ಯರು ಗುರುವಾರ ಪೋಲೀಸ್ ಠಾಣೆ ಎದುರು ಭಜನೆ ಹಾಡುವ‌ ಮೂಲಕ ಪ್ರತಿಭಟಿಸಿದರು.

ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಮಾತನಾಡಿ, ‘ಸಂಜೀವ ಪೂಜಾರಿ ವಿರುದ್ಧ ಪ್ರಕರಣ ದಾಖಲಾದರೂ ಬಂಧನವಾಗಿಲ್ಲ. ಅರಣ್ಯ ಇಲಾಖೆ ಮತ್ರು ಪೊಲೀಸ್ ಇಲಾಖೆ ಅವರ ರಕ್ಷಣೆಗೆ ನಿಂತಿದೆ.

ಹಿಂದೂ ಸಮಾಜಕ್ಕೆ, ಹಿಂದೂಗಳ ಭಾವನೆಗೆ, ಹಿಂದೂ ದೇವರಿಗೆ ಅವಮಾನಿಸುವ ನೀಚ ಕೃತ್ಯವನ್ನು ಇಡೀ ಹಿಂದೂ ಸಮಾಜ ಖಂಡಿಸುತ್ತದೆ.

ತಕ್ಷಣ ಈತನ ಅವರ ಬಂಧನ ಆಗದಿದ್ದಲ್ಲಿ ಜಿಲ್ಲೆಯ 10ಸಾವಿರಕ್ಕೂ ಅಧಿಕ ಭಜಕರು ಸೇರಿ ಪ್ರತಿಭಟಿಸಲಿದ್ದಾರೆ’ ಎಂದು ಎಚ್ಚರಿಸಿದರು.

ಎಸ್‌ಐ ನಂದುಮಾರ್ ಮೂಲಕ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಬಜರಂಗದಳದ ಪ್ರಮುಖ್ ಗಣೇಶ್ ಕಳೆಂಜ, ಪ್ರಮುಖರಾದ ದಿನೇಶ್ ಚಾರ್ಮಾಡಿ, ಸಂತೋಷ್ ಅತ್ತಾಜೆ, ಮೋಹನ್ ಬೆಳ್ತಂಗಡಿ, ರವೀಶ್ ಧರ್ಮಸ್ಥಳ, ಸುಧೀರ್ ಚಾರ್ಮಾಡಿ, ರಿಜೇಶ್ ಗುರುವಾಯನಕೆರೆ, ಜಗದೀಶ್ ಕನ್ನಾಜೆ, ಭಜನಾ ಪರಿಷತ್ ಮಾಜಿ ಅಧ್ಯಕ್ಷ ಮಂಜುನಾಥ ಶೆಟ್ಟಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT