ಮೂಲ್ಕಿ: ಕಾರ್ಮಿಕರಿಗೆ ಸಂಜೀವಿನಿಯಾಗಿದ್ದ ಮನರೆಗಾ ಯೋಜನೆಯನ್ನು ತಿರುಚುವ ಮೂಲಕ ಕೇಂದ್ರ ಸರ್ಕಾರವು ಗಾಂಧೀಜಿಯ ಗ್ರಾಮಸ್ವರಾಜ್ಯಕ್ಕೆ ಧಕ್ಕೆ ಮಾಡಿದೆ ಎಂದು ಕೆಪಿಸಿಸಿ ವಕ್ತಾರ ವಿ.ಎಸ್.ಉಗ್ರಪ್ಪ ಹೇಳಿದರು.

ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬದಲಿಸಿರುವುದನ್ನು ಖಂಡಿಸಿ, ಕಾಯ್ದೆಯ ಮರುಜಾರಿಗೆ ಆಗ್ರಹಿಸಿ ಸುಳ್ಯದಿಂದ ಮೂಲ್ಕಿಯವರೆಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಹಮ್ಮಿಕೊಂಡಿದ್ದ ಪಾದಯಾತ್ರೆಯ ಸಮಾರೋಪದಲ್ಲಿ ಅವರು ಮಾತನಾಡಿದರು.

ಗಾಂಧೀಜಿಯ ತತ್ವ, ಆದರ್ಶವನ್ನು ಕಾಂಗ್ರೆಸ್ ಪಕ್ಷ ಪಾಲಿಸುತ್ತಿದೆ. ಮೋದಿ ಅವರು 11 ವರ್ಷದಲ್ಲಿ ₹ 216 ಲಕ್ಷ ಕೋಟಿ ಸಾಲ ಮಾಡಿರುವುದೇ ಸಾಧನೆಯಾಗಿದೆ. ಚಿನ್ನ-ಬೆಳ್ಳಿ ಬೆಲೆ ಏರಿಕೆಯೇ ಆಡಳಿತಕ್ಕೆ ಸಾಕ್ಷಿಯಾಗಿದೆ. ಸುಳ್ಳಿನ ಸರದಾರ ಮಾತಿನ ಮಲ್ಲ ಮೋದಿಗೆ ಜನಬೆಂಬಲ ಕಡಿಮೆಯಾಗುತ್ತಿದೆ. ನೆಹರೂ, ಗಾಂಧಿ ಹೆಸರು ಅಳಿಸುವ ಹುನ್ನಾರ ನಡೆಯುತ್ತಿದೆ. ಮಂಗಳೂರಿನ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಮನರೇಗಾ ಯೋಜನೆಯ ತಿರುಚುವಿಕೆಯೂ ನಡೆಯುತ್ತಿದೆ. ದೇಶದಲ್ಲಿ ಅನಧಿಕೃತ ತುರ್ತುಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ದಕ್ಷಿಣ ಕನ್ನಡ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಪ್ರಮುಖರಾದ ಅಭಯಚಂದ್ರ ಜೈನ್, ಇನಾಯತ್ ಅಲಿ, ಮಮತಾ ಗಟ್ಟಿ, ಶಶಿಧರ ಹೆಗ್ಡೆ, ಅಪ್ಪಿ, ಶಾಲೆಟ್ ಪಿಂಟೊ, ಉಷಾ ಅಂಚನ್, ಇಬ್ರಾಹಿಂ ನವಾಜ್, ಸುಹಾನ್ ಆಳ್ವ, ಮೂಲ್ಕಿಯ ವಸಂತ್ ಬೆರ್ನಾಡ್, ಮೋಹನ್ ಕೋಟ್ಯಾನ್, ಅಶೋಕ್ ಪೂಜಾರ್, ಮಂಜುನಾಥ ಕಂಬಾರ, ರಕ್ಷಿತ್ ಪೂಜಾರಿ, ವಿಲ್ಮಾ ಡಿಕೋಸ್ತ, ಗೋಪಿನಾಥ ಪಡಂಗ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.