ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡಿಗೆಯಲ್ಲೇ ಮಕ್ಕಾ ತಲುಪಿದ ಅಬ್ದುಲ್ ಖಲೀಲ್

ಒಂದು ವರ್ಷ ಎರಡು ದಿನಗಳ ನಡಿಗೆ: ಉಪ್ಪಿನಂಗಡಿಯಿಂದ ಆರಂಭ
Published 11 ಫೆಬ್ರುವರಿ 2024, 23:50 IST
Last Updated 11 ಫೆಬ್ರುವರಿ 2024, 23:50 IST
ಅಕ್ಷರ ಗಾತ್ರ

ಉಪ್ಪಿನಂಗಡಿ (ದಕ್ಷಿಣ ಕನ್ನಡ): ಒಂದು ವರ್ಷದ ಹಿಂದೆ ನಡಿಗೆಯ ಮೂಲಕ ಮಕ್ಕಾ ಯಾತ್ರೆ ಹೊರಟಿದ್ದ ಉಪ್ಪಿನಂಗಡಿ ಸಮೀಪದ ಪೆರಿಯಡ್ಕದ ಅಬ್ದುಲ್ ಖಲೀಲ್ (ನೌಶಾದ್ ಬಿಕೆಎಸ್) ಫೆ.1ರಂದು ಮಕ್ಕಾ ತಲುಪಿದ್ದು, ಅವರು ಉಮ್ರಾ ಕರ್ಮವನ್ನು ನೆರವೇರಿಸಿದ್ದಾರೆ.

2023ರ ಜ.30ರಂದು ಪೆರಿಯಡ್ಕದಿಂದ ಸೌದಿ ಅರೇಬಿಯಾದಲ್ಲಿರುವ ಮಕ್ಕಾಗೆ ಕಾಲ್ನಡಿಗೆ ಯಾತ್ರೆ ಹಮ್ಮಿಕೊಂಡಿದ್ದ ಖಲೀಲ್ 368 ದಿನಗಳ ಯಾತ್ರೆಯೊಂದಿಗೆ ಮಕ್ಕಾದ ಪವಿತ್ರ ಕಾಬಾದ ಬಳಿ ತಲುಪಿದ್ದಾರೆ. ಜೂನ್‌ನಲ್ಲಿ ಹಜ್ ಕರ್ಮ ನಿರ್ವಹಿಸಿದ ಬಳಿಕ ಅವರು ಊರಿಗೆ ವಾಪಸಾಗಲಿದ್ದಾರೆ.

ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕ ನಿವಾಸಿ ಮುಹಮ್ಮದ್ ಹಾಗೂ ನಫೀಸಾ ದಂಪತಿ ಪುತ್ರ ಖಲೀಲ್ ತಮ್ಮ ಒಂದು ವರ್ಷದ ಯಾತ್ರೆಯಲ್ಲಿ 8,150 ಕಿ.ಮೀ ದೂರ ಕ್ರಮಿಸಿದ್ದಾರೆ. ಭಾರತ, ಪಾಕಿಸ್ತಾನ, ಒಮನ್ ಮತ್ತು ಯುಎಇ ಮೂಲಕ ಅವರು ಮತ್ತು ಸೌದಿ ಅರೇಬಿಯಾ ತಲುಪಿದ್ದಾರೆ. ಪಾಕಿಸ್ತಾನದಲ್ಲಿ ಅವರ ಕಾಲ್ನಡಿಗೆಗೆ ಅವಕಾಶ ಸಿಗದ ಕಾರಣ ವಾಘಾ ಗಡಿಯ ಮೂಲಕ ಪಾಕಿಸ್ತಾನ ಪ್ರವೇಶಿಸಿ ಅಲ್ಲಿಂದ ವಿಮಾನದಲ್ಲಿ ಒಮಾನ್‌ಗೆ ಪ್ರಯಾಣಿಸಿ, ಕಾಲ್ನಡಿಗೆ ಮುಂದುವರಿಸಿದ್ದರು.

ಎಲ್ಲೆಡೆ ಸಹಕಾರ ಸಿಕ್ಕಿತ್ತು: ಮಕ್ಕಾದಿಂದ ದೂರವಾಣಿ ಮೂಲಕ ‘ಪ್ರಜಾವಾಣಿ’ ಜತೆ ಮಾತನಾಡಿದ ಖಲೀಲ್, ‘ನನ್ನ ನಡಿಗೆ ವೇಳೆ ವಿವಿಧ ರಾಜ್ಯ– ದೇಶದ ಜನ ಸಂಪೂರ್ಣ ಸಹಕಾರ ನೀಡಿದ್ದರು. ಕಾಲ್ನಡಿಗೆ ಮೂಲಕ ನನ್ನ ದೇಶದ ಹಾಗೂ ಇತರ ದೇಶದ ಸಂಪ್ರದಾಯ, ಪರಂಪರೆಯನ್ನು ಅರಿಯಲೂ ಸಾಧ್ಯವಾಯಿತು. ಜಾತಿ, ಧರ್ಮ ನೋಡದೆ ಎಲ್ಲರೂ ನನಗೆ ಸಹಕಾರ ನೀಡಿದ್ದಾರೆ. ದೇಶದಲ್ಲಿ ಎಲ್ಲರೂ ಸೌಹಾರ್ದದಿಂದ ಬಾಳುವಂತಾಗಬೇಕು ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ. ಮಕ್ಕಾದಲ್ಲಿ ಇನ್ನೂ 4 ತಿಂಗಳು ಇದ್ದು, ಹಜ್ ಕೈಗೊಂಡು ಊರಿಗೆ ಮರಳುತ್ತೇನೆ’ ಎಂದರು.

‘ಮಕ್ಕಾ ತಲುಪಿದಾಗ ಆದ ಖುಷಿಯನ್ನು ಹೇಳಿ ಮುಗಿಸಲು ಸಾಧ್ಯವಿಲ್ಲ. ಅಲ್ಲಾಹನ ಅಪಾರವಾದ ಅನುಗ್ರಹದಿಂದ ಮಕ್ಕಾ ತಲುಪಿದ್ದು,  ಯಾತ್ರೆಯ ಯಶಸ್ಸನ್ನು ನನ್ನ ತಾಯಿಗೆ ಸಮರ್ಪಿಸುತ್ತೇನೆ’ ಎಂದು ತಿಳಿಸಿದರು.

8,150 ಕಿ.ಮೀ ಕ್ರಮಿಸಿದ ಖಲೀಲ್ 5 ದೇಶಗಳ ಮೂಲಕ ಸಾಗಿದ ಯಾತ್ರೆ ಜೂನ್‌ನಲ್ಲಿ ಹಜ್ ಕರ್ಮ ನಿರ್ವಹಿಸಿದ ಬಳಿಕ ಊರಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT