ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ವಾರ್ಡ್‌ ಕಮಿಟಿ ತಾತ್ಕಾಲಿಕ ಪಟ್ಟಿ ಪ್ರಕಟ

Last Updated 3 ಆಗಸ್ಟ್ 2021, 2:56 IST
ಅಕ್ಷರ ಗಾತ್ರ

ಮಂಗಳೂರು: ಮಹಾನಗರ ಪಾಲಿಕೆಯು ವಾರ್ಡ್ ಸಮಿತಿ ಸದಸ್ಯರ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಿದ್ದು, 60 ವಾರ್ಡ್‌ಗಳ ಪೈಕಿ 11 ವಾರ್ಡ್‌ಗಳಲ್ಲಿ ಮಾತ್ರ ತಲಾ 10 ಸದಸ್ಯರನ್ನು ಆಯ್ಕೆ ಮಾಡಲಾಗಿದೆ.

ಇನ್ನು ಎರಡು ವಾರ್ಡ್‌ಗಳಲ್ಲಿ ತಲಾ ಐವರು ಸದಸ್ಯರಿದ್ದರೆ, ಒಂದು ವಾರ್ಡ್‌ ನಲ್ಲಿ ಕೇವಲ ನಾಲ್ವರು ಸದಸ್ಯರಿದ್ದಾರೆ. ಕಾಟಿಪಳ್ಳ ಪೂರ್ವ, ಬಂಗ್ರಕೂಳೂರು, ಕಾವೂರು, ಪಚ್ಚನಾಡಿ, ಪದವು ಸೆಂಟ್ರಲ್‌, ಪದವು ಪೂರ್ವ, ಪೋರ್ಟ್‌, ಮಿಲಾಗ್ರಿಸ್‌, ಕಂಕನಾಡಿ, ಅತ್ತಾವರ ಮತ್ತು ಜೆಪ್ಪು ವಾರ್ಡ್‌ಗಳಲ್ಲಿ ತಲಾ 10 ಸದಸ್ಯರಿದ್ದಾರೆ. ಇಡ್ಯಾ ಪಶ್ಚಿಮ ಹಾಗೂ ಮಣ್ಣುಗುಡ್ಡೆ ವಾರ್ಡ್‌ನಲ್ಲಿ ತಲಾ ಐವರು ಸದಸ್ಯರ ಹೆಸರುಗಳಿವೆ. ಬೆಂಗ್ರೆ ವಾರ್ಡ್‌ನಲ್ಲಿ ಕೇವಲ 4 ಸದಸ್ಯರಿದ್ದಾರೆ.

ತಾತ್ಕಾಲಿಕ ಪಟ್ಟಿಯನ್ನು ಪಾಲಿಕೆಯ ವೆಬ್‌ಸೈಟ್‌, ಸಾಮಾಜಿಕ ಜಾಲತಾಣ, ಸೂಚನಾ ಫಲಕಗಳಲ್ಲಿ ಪ್ರಕಟಿಸಲಾಗಿದೆ. ಆಕ್ಷೇಪಣೆಗಳು ಇದ್ದಲ್ಲಿ 15 ದಿನಗಳ ಒಳಗಾಗಿ ಇ–ಮೇಲ್‌ mccwardcommittee@gmail.com ಗೆ ಕಳುಹಿಸುವಂತೆ ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್ ತಿಳಿಸಿದ್ದಾರೆ.

ಸ್ವಾಗತ: ವಾರ್ಡ್ ಸಮಿತಿಗಳ ರಚನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮಂಗಳೂರಿನ ನಾಗರಿಕರು ಮತ್ತು ನಾಗರಿಕ ಗುಂಪುಗಳನ್ನು ಜನಾಗ್ರಹ ಅಭಿನಂದಿಸಿದೆ.

ರಾಜ್ಯದಲ್ಲಿ ವಾರ್ಡ್ ಸಮಿತಿ ರಚಿಸಿರುವ ಎರಡನೇ ನಗರವಾಗಿ ಮಂಗಳೂರು ಹೊರ ಹೊಮ್ಮಿದೆ. ನಾಗರಿಕರು, ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿ ಗಳೊಂದಿಗೆ ಸೇರಿ ಸೃಜನಾತ್ಮಕ ಕೊಡುಗೆಯನ್ನು ನೀಡಿದರೆ ಮಾತ್ರ ವಾರ್ಡ್ ಸಮಿತಿಗಳ ರಚನೆಯು ಸಾರ್ಥಕಗೊಳ್ಳುತ್ತದೆ. ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸಾಗಿಸು ವತ್ತ ವಾರ್ಡ್ ಸಮಿತಿಗಳು ಒಂದು ಹೆಜ್ಜೆ ಯಾಗಿವೆ’ ಎಂದು ಜನಾಗ್ರಹದ ನಾಗರಿಕ ಸಹಭಾಗಿತ್ವ ವಿಭಾಗದ ಮುಖ್ಯಸ್ಥ ಶ್ರೀನಿವಾಸ್ ಅಳವಳ್ಳಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT